ಅಭಿಮಾನಿಗಳ ಬಳಗದಿಂದ ಯುವ ಮುಖಂಡ ಕೆ.ಈ ಕಾಂತೇಶ್ ಅವರ ಜನ್ಮದಿನಾಚರಣೆಗೆ ಸಿದ್ದತೆ

ಶಿವಮೊಗ್ಗ:  ಶಿವಮೊಗ್ಗ ನಗರದ ಜನಪ್ರಿಯ ಯುವಮುಖಂಡರಾದ  ಕೆ.ಈ ಕಾಂತೇಶ್ ಅವರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂತೇಶ್ ಸ್ನೇಹಿತರ ಬಳಗದ ವತಿಯಿಂದ ನಿರ್ಧರಿಸಲಾಗಿದೆ ಎಂದು ಸೂಡಾ ಅಧ್ಯಕ್ಷರಾದ ನಾಗರಾಜ್, ಮಹಾನಗರ ಪಾಲಿಕೆ ಸದ್ಯಸರಾದ ವಿಶ್ವಾಸ್ ಹೇಳಿದರು.
ಶಿವಮೊಗ್ಗ ನಗರದ ಜನಪ್ರಿಯ ಯುವಮುಖಂಡರಾದ  ಕೆ.ಈ ಕಾಂತೇಶ್

ಇಂದು ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಇದರ ಅಂಗವಾಗಿ ಶಿವಮೊಗ್ಗ ನಗರದ ಮಂಜುನಾಥ ಬಡಾವಣೆ, ರಾಜೀವ ಗಾಂಧಿ ಬಡಾವಣೆ, ಗುಂಡಪ್ಪ ಶೇಡ್, ಅಂಬೇಡ್ಕರ್ ನಿವಾಸಿಗಳಿಗೆ ಸೊಳ್ಳೆ ಪರದೆ ವಿತರಣೆ ನಗರ, ಬೆಂಕಿ, ನಗರ, ನ್ಯೂ ಮಂಡ್ಲಿ, ಶಾಂತಿ ನಗರದ ಅವಶ್ಯಕತೆ ಇರುವ ಸೊಳ್ಳೆ ಪರದೆ ವಿತರಣೆ
ಮಾಡಲಾಗುವುದು ಎಂದರು.

ಈ ಸೇವಾ ಕಾರ್ಯಕ್ರಮದ ಉದ್ಘಾಟನೆಯನ್ನು 21:03:2023 ರ ಬೆಳಗ್ಗೆ 09:00 ಕ್ಕೆ ಗುರುಪುರ ನಂಜುಡೇಶ್ವರ ಸಭಾ ಭವನದಲ್ಲಿ ಶಿವಮೊಗ್ಗ ಬೆಕ್ಕಿನ ಕಲ್ಮಠದ ಪೂಜ್ಯ ಶ್ರೀ ಮ.ನಿ.ಪ್ರ.ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಿವಮೊಗ್ಗ ಬಸವಕೇಂದ್ರದ ಪೂಜ್ಯ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು, ಹೊಸದುರ್ಗ ಕನಕ ಗುರುಪೀಠದ ಪೂಜ್ಯ ಶ್ರೀ ಈಶ್ವರನಂದಪುರಿ ಸ್ವಾಮಿಗಳು, ಚಿತ್ರದುರ್ಗ ಮಾದಾರ ಗುರುಪೀಠದ ಪೂಜ್ಯ ಶ್ರೀ ಮಾದರ ಚೆನ್ನಯ್ಯ ಸ್ವಾಮಿಗಳು ಮತ್ತು ಶ್ರೀ ಸನ್ಮಾನ್ಯ ಕೆ. ಎಸ್. ಈಶ್ವರಪ್ಪನವರಿಂದ ನೆರವೇರಿಸಲಾಗುವುದು.ಎಂದರು.

 ಈ ಸಂದರ್ಭದಲ್ಲಿ ಶ್ರೀ ಕೆ.ಈ. ಕಾಂತೇಶ್ ಅವರೊಂದಿಗೆ ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್‌, ಸೂಡೆ ಅಧ್ಯಕ್ಷರಾದ ನಾಗರಾಜ್, ಮಹಾನಗರ ಪಾಲಿಕೆ ಸದ್ಯಸರಾದ ವಿಶ್ವಾಸ್, ಗನ್ನಿ ಶಂಕರ್, ವಿಶ್ವನಾಥ್, ರಾಹುಲ್ ಬಿದರೆ, ಪ್ರಭಾಕರ್, ಶ್ರೀಮತಿ ಸುರೇಖಾ ಮುರಳಿಧರ್ ಶ್ರೀಮತಿ ಸುನೀತಾ ಅಣ್ಣಪ್ಪ, ಶ್ರೀಮತಿ ಸುವರ್ಣ ಬಳ್ಳಕರ, ನಗರ ಶಂಕರ್, ಮಾಜಿ ಸದ್ಯಸರಾದ ಮೋಹನ್ ರೆಡ್ಡಿ, ಶಿವಾಜಿನಗರ ಪ್ರಧಾನ ಕಾರ್ಯದರ್ಶಿ ಸಂತೋಷ್ ಯುವಮೋರ್ಚಾ ಅಧ್ಯಕ್ಷರಾದ ದರ್ಶನ್ ಉಪಸ್ಥಿತರಿರುತ್ತಾರೆ ಎಂದರು.
ಇದೇ ದಿನ ನಗರದ ಶಾರದ ಅಂಧರ ವಿಕಾಸ ಕೇಂದ್ರ, ತಾಯಿಮನೆ, ಮಾತೃ ಛಾಯ, ಜೀವನಸಂಜೆ, ತರಂಗ, ಗುಡಲಕ್ ಹಾರೈಕೆ ಕೇಂದ್ರ, ವೃದ್ದಶ್ರಾಮಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

22:03:2023 ರ ಯುಗಾದಿಯ ಸಂಜೆ ವಿಶೇಷ ಯುಗಾದಿ ಸಂಭ್ರಮ ಕಾರ್ಯಕ್ರಮವನ್ನು ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಶ್ರೀ ಶನೇಶ್ವರ ದೇವಾಲಯ ಆವರಣ, ಶುಭಮಂಗಳ ಸಮುದಾಯ ಭವನ ಇಲ್ಲಿ ಆಯೋಜಿಸಲಾಗಿದೆ. ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಗಂಗಾವತಿ ಪ್ರಾಣೇಶ್ ಹಾಗೂ ಶ್ರೀ ಬಸವರಾಜ್ ಹಾದಿಮನಿಯವರು ಹಾಸ್ಯ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಯುಗಾದಿ ವಿಶೇಷ ಪಂಚಾಂಗ ಶ್ರವಣ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಲಿದೆ. ಶಿವಮೊಗ್ಗ ನಗರದ ಶಾಸಕರಾದ ಶ್ರೀ ಸನ್ಮಾನ್ಯ ಶ್ರೀ ಕೆ. ಎಸ್. ಈಶ್ವರಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಕ ಈ ಕಾಂತೇಶ್ ಅವರು ಉಪಸ್ಥಿತರಿರಲಿದ್ದಾರೆ ಎಂದರು.

 ಈ ಸುದ್ದಿಗೊಷ್ಟಿ ಸಂದರ್ಭದಲ್ಲಿ  ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್‌, ಸೂಡೆ ಅಧ್ಯಕ್ಷರಾದ ನಾಗರಾಜ್, ಮಹಾನಗರ ಪಾಲಿಕೆ ಸದ್ಯಸರಾದ ವಿಶ್ವಾಸ್, ಗನ್ನಿ ಶಂಕರ್, ವಿಶ್ವನಾಥ್, ರಾಹುಲ್ ಬಿದರೆ, ಪ್ರಭಾಕರ್, ಶ್ರೀಮತಿ ಸುರೇಖಾ ಮುರಳಿಧರ್ ಶ್ರೀಮತಿ ಸುನೀತಾ ಅಣ್ಣಪ್ಪ, ಶ್ರೀಮತಿ ಸುವರ್ಣ ಬಳ್ಳಕೆರೆ , ನಗರ ಶಂಕರ್, ಮಾಜಿ ಸದ್ಯಸರಾದ ಮೋಹನ್ ರೆಡ್ಡಿ, ಶಿವಾಜಿನಗರ ಪ್ರಧಾನ ಕಾರ್ಯದರ್ಶಿ ಸಂತೋಷ್ ಯುವಮೋರ್ಚಾ ಅಧ್ಯಕ್ಷರಾದ  ದರ್ಶನ್ ಮೊದಲಾದವರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.