ಹಂದಿ ಅಣ್ಣಿ ಹತ್ಯೆಗೆ ಪ್ರತೀಕಾರ: ರಿಲೀಸ್ ಆಗಿದ್ದ ಇಬ್ಬರು ಆರೋಪಿಗಳ ಮೇಲೆ ಅಟ್ಯಾಕ್- ಸ್ಥಳದಲ್ಲಿ ಒಬ್ಬನ ಸಾವು ಮತ್ತೊಬ್ಬ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಶಿವಮೊಗ್ಗದ ರೌಡಿ ಅಣ್ಣಪ್ಪ ಆಲಿಯಾಸ್ ಹಂದಿ ಅಣ್ಣಿ ಹತ್ಯೆಗೆ ಪ್ರತಿಕಾರವಾಗಿ ಹಂದಿ ಅಣ್ಣಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿ ರಿಲೀಸ್ ಆಗಿದ್ದ 
ಆಂಜನೇಯ ಮತ್ತು ಮಧು ಮೇಲೆ   ಇಂದು ಮಧ್ಯಾಹ್ನ ಅಟ್ಯಾಕ್ ಮಾಡಲಾಗಿದೆ.
 ಆಂಜನೇಯ ಸ್ಥಳದಲ್ಲೆ ಸಾವು ಕಂಡಿದ್ದರೆ , ಮಧು ತೀವ್ರವಾಗಿಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.ಸದರಿ ಘಟನೆಯು  ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೀಲೂರು ಗ್ರಾಮದ ಗೋವಿನ ಕೋವಿ ಬಳಿ ನಡೆದಿರುತ್ತದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಆಂಜನೇಯ ಸ್ಥಳದಲ್ಲೆ ಸಾವು ಕಂಡಿದ್ದರೆ, ಮಧು ತೀವ್ರವಾಗಿ ಗಾಯಗೊಂಡಿದ್ದು, ಅತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು  ಹತ್ಯೆಯಾಗಿರುವ ವ್ಯಕ್ತಿ ಆಂಜನೇಯ
ಇಂದು  ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿ ಮಧು

   2022 ನೇ ಸಾಲಿನ  ಜೂನ್ 14 ರಂದು ಶಿವಮೊಗ್ಗ ‌ನಗರದ ಜನನಿಬಿಡ ಸ್ಥಳದಲ್ಲಿ ವಿನೋಬನಗರದ ಪೊಲೀಸ್ ಚೌಕಿಯ ಹತ್ತಿರ ಹಗಲು ಹೊತ್ತಿನಲ್ಲಿ  ಹಂದಿಅಣ್ಣಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕಾಡಾ ಕಾರ್ತಿಕ್ ಗ್ಯಾಂಗ್ ಬರ್ಬರವಾಗಿ ಹತ್ಯೆ ಮಾಡಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳು ಚಿಕ್ಕಮಗಳೂರು ಪೊಲೀಸರ ಮುಂದೆ ಶರಣಾಗಿದ್ದರು.. 

ಹಂದಿಅಣ್ಣಿ ಬೆಂಬಲಿಗರು ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ನಡೆಸುತ್ತಿದ್ದರು ಎನ್ನಲಾಗಿದೆ.

 ಹಂದಿಅಣ್ಣಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಹರಿಹರದ ಅಂಜನೇಯ ಮತ್ತು ಮಧು ಅವರು ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದು ಇಂದು ಶಿವಮೊಗ್ಗದ ನ್ಯಾಯಾಲಯಕ್ಕೆ ಇದೇ ಪ್ರಕರಣದಲ್ಲಿ ಹಾಜರಾಗಿದ್ದರು ಎನ್ನಲಾಗಿದೆ.

ಇಂದು ಕೋರ್ಟು ಮುಗಿಸಿಕೊಂಡು ವಾಪಾಸ್ ಹರಿಹರಕ್ಕೆ ಬೈಕ್ ನಲ್ಲಿ ತೆರಳುತ್ತಿರುವಾಗ ಅವರನ್ನು ಮಹೀಂದ್ರಾ ಕಾರ್ ನಲ್ಲಿ ಹಿಂಬಾಲಿಸಿದ ಹಂದಿ ಅಣ್ಣಿ ಬೆಂಬಲಿಗರು ಮಡಿಕೆಚೀಲೂರು ಬಳಿ ಬೈಕ್ ಗೆ ಡಿಕಿ ಹೊಡೆದು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಕಟಣೆ:
ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾದ ಮಧು ಮತ್ತು ಆಂಜನೇಯ ರವರುಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಂಜನೇಯ ಎಂಬ ವ್ಯಕ್ತಿಯು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆಂದು ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಸದರಿ ಘಟನೆಯು  ದಾವಣಗೆರೆ ಜಿಲ್ಲೆ *ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೀಲೂರು ಗ್ರಾಮದ ಗೋವಿನ ಕೋವಿ ಬಳಿ* ನಡೆದಿರುತ್ತದೆ.

 Update News:  ಸರೆಂಡರ್‌ ಆದ ನಾಲ್ಕು ಆರೋಪಿಗಳು ಶಿವಮೊಗ್ಗದವರು:  

 ಆಂಜನೇಯನನ್ನ ಕೊಲೆ ಮಾಡಿ  ಮಧುನನ್ನ ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದ್ದ ಗ್ಯಾಂಗ್ ನಾಲ್ಕು ಆರೋಪಿಗಳು 1) ಸುನೀಲ ಯಾನೆ ತಮಿಳು ಸುನೀಲ, 2)ಅಭಿಲಾಷ್, 3)ವೆಂಕಟೇಶ 4) ಪವನ್  ಒಂದೇ ದಿನದಲ್ಲಿ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಸರೆಂಡರ್ ಆಗಿದ್ದಾರೆ.

ಸರೆಂಡರ್‌ ಆದ  ನಾಲ್ಕು ಆರೋಪಿಗಳು 1) ಸುನೀಲ ಯಾನೆ ತಮಿಳು ಸುನೀಲ, 2)ಅಭಿಲಾಷ್, 3)ವೆಂಕಟೇಶ 4) ಪವನ್

ಹಂದಿ ಅಣ್ಣಿಯನ್ನ ಕೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರೆಂಡರ್ ಆದ ಕಾಡಾ‌ಕಾರ್ತಿಕ್  ಮತ್ತು ಆತನ ಗ್ಯಾಂಗ್ ನ ರೀತಿಯಲ್ಲೇ ಸರೆಂಡರ್‌ ಆಗಿದ್ದಾರೆ.
 
  ಆರೋಪಿಗಳು  ನಾಲ್ವರು ಇಂದು ಸ್ಕಾರ್ಪಿಯೋ ವಾಹನದಲ್ಲಿ ಶಿವಮೊಗ್ಗದ ನ್ಯಾಯಾಲಯಕ್ಕೆ ಬಂದಿದ್ದ ಹಂದಿ ಅಣ್ಣಿ ಕೊಲೆ ಆರೋಪಿಗಳಾಗಿದ್ದ ಮಧು ಮತ್ತು ಆಂಜನೇಯರನ್ನ ಹಿಂಬಾಲಿಸಿಕೊಂಡು ಗೋವಿನ ಕೋವಿಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.

ದಾಳಿಯ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ. ಮಧು ಜೀವನ ಮತ್ತು ಮರಣದ ನಡುವೆ ಹೋರಾಡುತ್ತಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇತ್ತ ಕೊಲೆ ಮಾಡಿದ ಗ್ಯಾಂಗ್ ಸ್ಕಾರ್ಪಿಯೋ ರಿವರ್ಸ್ ತೆಗೆಯಲು ಆಗದ ಹಿನ್ನಲೆಯಲ್ಲಿ ವಾಹನವನ್ನ ಬಿಟ್ಟು ಕೆಎಸ್ಆರ್ ಟಿ ಸಿ ಬಸ್ ಹತ್ತಿಕೊಂಡು ನೇರ ಹಾವೇರಿ ಜಿಲ್ಲೆಯ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದಾರೆ ಎಙದು ಹೇಳಲಾಗುತ್ತಿದೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.