ಶಿವಮೊಗ್ಗಕ್ಕೆ ಮತ್ತೊಂದು ವಿಮಾನ- SPG ತಂಡ ಆಗಮನ: ವಿಮಾನ ನಿಲ್ದಾಣದ ಪರಿಶೀಲನೆ
ಶಿವಮೊಗ್ಗ:ಇಂದು ಇನ್ನೊಂದು ವಿಮಾನ ಶಿವಮೊಗ್ಗ ಏರ್ ಪೋರ್ಟ್ ಗೆ ಬಂದಿಳಿದಿದೆ. ಅದರಲ್ಲಿ ಪ್ರದಾನಿ ಭದ್ರತಾ ಪಡೆ SPG ತಂಡ ಮತ್ತು ಕಾರುಗಳು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಭಾರತೀಯ ವಾಯು ಸೇನೆಯ ಕ್ಯಾರಿಯರ್ ವಿಮಾನದಲ್ಲಿ ದೆಹಲಿಯಿಂದ ಭದ್ರತಾ ಪಡೆಗಳ ತಂಡ ಆಗಮಿಸಿತು. ವಿಮಾನದಲ್ಲಿ ನಾಲ್ಕು ಕಾರುಗಳ ಸಹಿತ ಹಲವು ಸಿಬ್ಬಂದಿ
ಆಗಮಿಸಿದರು. ವಾಯುಸೇನೆಯ ಇಲ್ಯೂಷಿನ್ 76 ವಿಮಾನದಿಂದ ನಾಲ್ಕು ಕಾರುಗಳನ್ನು ಕೆಳಗಿಳಿಸಿ ಪರಿಶೀಲನೆ ಆರಂಭಿಸಿತು.
SPG ತಂಡವು ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾರಕ್ಷಣಾದಿಕಾರಿಗಳನ್ನು ಬೇಟಿ ಮಾಡಿ ವಿಮಾನ ನಿಲ್ದಾಣದ ಟರ್ಮಿನಲ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದೆ. ಪ್ರದಾನಿ ಕಾರ್ಯಕ್ರಮಕ್ಕೆ ಆಯೋಜಿಸಿದ ವಿವರ ಪಡೆದು ಪರಿಶೀಲನೆ ನಡೆಸಿದರು ಎನ್ನಲಾಗಿದೆ.ನಂತರ ಶಿವಮೊಗ್ಗ ವಿಮಾನ ನಿಲ್ದಾಣ ದಿಂದ ಶಿವಮೊಗ್ಗ ನಗರಕ್ಕೆ SPG ತಂಡ ತೆರಳಿದೆ ಎಂದು ತಿಳಿದು ಬಂದಿದೆ.
Leave a Comment