ಇಲಿಯಾಸ್ ನಗರದಲ್ಲಿ ಗುಂಪು ಕಟ್ಟಿಕೊಂಡು ಬಂದು ಬ್ಯಾಟ್ ವೀಕೇಟ್ ಮತ್ತು ದೊಣ್ಣೆಗಳಿಂದ ಹಲ್ಲೆ, ಕೊಲೆ ಬೆದರಿಕೆ: FIR

ಶಿವಮೊಗ್ಗ: ನಗರದ ಇಲೀಯಾಸ್ ನಗರದಲ್ಲಿ 11 ನೇ ಕ್ರಾಸ್ ನಲ್ಲಿ ಮೆಕಾನಿಕ್ ರಾಹಿ ಮತ್ತಿತರರು 15/20 ಜನರು ಗುಂಪು ಕಟ್ಟಿಕೊಂಡು ಬಂದು ಬ್ಯಾಟ್ ವೀಕೇಟ್ ಮತ್ತು ದೊಣ್ಣೆಗಳಿಂದ 4-5 ಜನರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಇಮ್ತಿಯಾಜ್ ಎಂಬುವರು ದೂರು ನೀಡಿದ ಹಿನ್ನೆಲೆಯಲ್ಲಿ ಮೆಕ್ಯಾನಿಕ್ ರಾಹಿ ಮತ್ತು 15/20 ಜನರ ಮೇಲೆ FIR ದಾಖಲಾಗಿದೆ.

ಪ್ರಕರಣದ ಹಿನ್ನೆಲೆ:

ದಿನಾಂಕ 13-02-2023 ರಂದು ಬೆಳಗ್ಗೆ 10.30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಇಮ್ತಿಯಾಜ್ ಅಹಮದ್ ಬಿನ್ ಇಕ್ಬಾಲ್ ಅಹಮದ್ 36 ವರ್ಷ ಮುಸ್ಲಿಂ ಜನಾಂಗ ವಾಸ:-11 ನೇ ತಿರುವು ಇಲಿಯಾಸ್ ನಗರ ನ್ಯೂ ಮಂಡ್ಲಿ ಶಿವಮೊಗ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದುದಾರರು ದಿನಾಂಕ 12/02/2023 ರಂದು ಸಂಜೆ ಸಮಯ ಸುಮಾರು 5:00 ಗಂಟೆಗೆ ಇಲೀಯಾಜ್ ನಗರದ ನಾಲ್ಕನೇ ತಿರುವಿನಲ್ಲಿ ತಮ್ಮ ಅಂಗಡಿಯಲ್ಲಿ ಕೆಲಸ ಮಾಡಿ ಕೊಂಡು ಇದ್ದಾಗ ಪಿರ್ಯಾದಿ ತಂಗಿಯ ಮಗಳು ಶಭೀನ್ ತಾಜ್ ಫೋನ್ ಕರೆ ಮಾಡಿ ಬೈಕ್ ನಲ್ಲಿ, ಬಂದ ಹುಡುಗ ಮನೆ ಎದುರುಗಡೆ ನಿಂತಿದ್ದಂತಹ ಸೈಕಲ್ ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ ಎಂದು ತಿಳಿಸಿದಾಗ ಆ ತಕ್ಷಣ ಪಿರ್ಯಾದಿ ತಮ್ಮ ಮನೆಯ ಹತ್ತಿರ ಹೋಗಿ ತನ್ನ ತಾಯಿ ಪಹಿಮುನಿಸ ಆಕ್ಕ ಫಾತಿಮುನಿಸ ಹಾಗೂ ಅಕ್ಕನ ಮಗ ಮಹಮದ್ ರಿಹಾನನ ಹತ್ತಿರ ಹೋಗಿ ವಿಚಾರಿಸಿದಾಗ ಮೆಕಾನಿಕ್ ರಾಹಿ ಮಗ ಮತ್ತು ಇನ್ನೊಬ್ಬ ಯುವಕ ಯಾರು ಎಂದು ವಿಚಾರಿಸುತ್ತಿದ್ದ ಹಾಗೆಯೇ ರಾಹಿ ಮತ್ತು ಅವರ ಮಗ ಹಾಗೂ ಅವರ ಕಡೆಯ 15- 20 ಜನ ಯುವಕರು ಏಕಾಏಕಿಯಾಗಿ ಗುಂಪನ್ನು ಕಟ್ಟಿ ಕೊಂಡು ಬಂದು ಪಿರ್ಯಾದಿ ಮನೆಗೆ ನುಗ್ಗಿದಾಗ ಆ ತಕ್ಷಣ ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದು, ಪಿರ್ಯಾದಿಯನ್ನು ಎಳೆದಾಡಿ ಅವರ ಅಕ್ಕನ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ ಮೆಕಾನಿಕ್ ರಾಹಿ ಮತ್ತು ಅವರ ಮಗ ಅವರ ಕಡೆಯವರು ಪಿರ್ಯಾದಿ ಅಕ್ಕನ ಮಗನಿಗೆ ದೊಣ್ಣೆ ಯಿಂದ ಬಲವಾಗಿ ಹೊಡೆಯಲು ಪ್ರಯತ್ನಿಸಿದಾಗ ಪಿರ್ಯಾದಿ ಅಕ್ಕ ಅವರ ದೊಣೆ ಏಟು ತಪ್ಪಿಸಲು ಪ್ರಯತ್ನಿಸಿದಾಗ ಕಾಲಿಗೆ ಬಲವಾಗಿ ಹೊಡೆತ ಬಿದ್ದು, ಬಲಗಾಲಿಗೆ ರಕ್ತಹೆಪ್ಪುಗಟ್ಟುವ ಹಾಗೆ ಹೊಡೆದಿರುತ್ತಾರೆ ಮನೆ ನುಗ್ಗು ವವರನ್ನು ತಡೆಯಲು ಹೋದಾಗ ಪಿರ್ಯಾದಿಯ ವಯಸ್ಸಾದ ತಾಯಿಗೆ ಬಲವಾಗಿ ಬುಜಕ್ಕೆ ಮುಖಕ್ಕೆ ಮೈ ಕೈಗೆ ಹೊಡೆದಿರುತ್ತಾರೆ ಮೆಕಾನಿಕ್ ರಾಹಿ ಜೊತೆಯಲ್ಲಿ ಬಂದಂತಹ ಯುವಕರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪಿರ್ಯಾದಿ ತಂದೆ ಇಕ್ಬಾಲ್ ಅಹಮದ್ ರವರಿಗೆ ಮುಖಕ್ಕೆ ಕಪಾಳಕ್ಕೆ ಹೊಡೆದು ಕೊರಳಪಟ್ಟಿ ಶರ್ಟ್ ಅನ್ನು ಎಳೆದು ಕೊಂಡು ಎಳದಾಡಿರುತ್ತಾರೆ, ರಾಹಿ ಮಗ ತನ್ನ ಕೈಯಲ್ಲಿ ಇದ್ದಂತಹ ಬಾಕುವಿನಿಂದ ಚುಚ್ಚು  ಸಾಯಿಸುತ್ತೇನೆ ಎಂದು ಚುಚ್ಚಲು ಮುಂದಾಗಿರುತ್ತಾನೆ. ಆಗ ಪಿರ್ಯಾದಿ ಅವರ ತಂದೆಯವರನ್ನು ತಡೆಯಲು ಹೋದಾಗ ಬ್ಯಾಟ್ ಮತ್ತು ವಿಕೆಟ್ ಮತ್ತು ದೊಣ್ಣೆ ಗಳಿಂದ  ಹೊಡೆಯಲು ಪ್ರಯತ್ನಿಸಿರುತ್ತಾರೆ ಮೆಕಾನಿಕ್ ರಾಹಿ ಜೊತೆ ಬಂದಂತಹ 15/20 ಯುವಕರ ಪೈಕಿ ಒಬ್ಬ ಪಿರ್ಯಾದಿ ತಂದೆಯವರಿಗೆ ತಲೆಗೆ ಹಿಂದಿನಿಂದ ಕಪಾಳಕ್ಕೆ ಹೊಡೆದಿರುತ್ತಾನೆ ರೊಚ್ಚಿಗೆದ್ದ ಮೆಕಾನಿಕ್ ರಾ ಅವರ ಕಡೆಯವರು ಕಲ್ಲಿನಿಂದ ವಿಕೆಟ್ ಗಳಿಂದ ಬ್ಯಾಟ್ ಮತ್ತು ಇಟ್ಟಿಗೆ ಹಿಡಿದು ಕೊಂಡು ಜೀವ ಭಯ ಬರುವಂತೆ ಹೊಡೆಯಲು ಪ್ರಯತ್ನಿಸುತ್ತಾರೆ, ಆಗ ರಸ್ತೆಯಲ್ಲಿ ಹೋಗುತ್ತಿದ್ದಂತೆ ಹಾಗೂ ಮನೆಯ ಅಕ್ಕ ಪಕ್ಕದಲ್ಲಿರುವ ವರು ಮೆಕಾನಿಕ್ ರಾಹಿ ಮತ್ತು ಅವರ ಮಗ ಹಾಗೂ ಹತ್ತು ಹದಿನೈದು ಜನ ಯುವಕರನ್ನು ತಡೆದು ಮುಂದೆ ಆಗಬಹುದಾದಂತಹ ದೊಡ್ಡ ಅನಾಹುತವನ್ನು ತಪ್ಪಿಸಿರುತ್ತಾರೆ ಈ ಘಟನೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಂತರ ಈ ದಿನ ರಿಹಾನ್ ಬದುಕಿ ಕೊಂಡ ಅವನನ್ನು ಅವನ ಶಾಲೆಯ ಹತ್ತಿರ ಹೋಗಿ ಚಾಕುವಿನಿಂದ ಚುಚ್ಚಿ ಪಿರ್ಯಾದಿ ತಂದೆಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.ಪೆಟ್ಟು ಬಿದ್ದವರನ್ನು ಚಿಕಿತ್ಸೆಗಾಗಿ ಸರ್ಕಾರಿ ಮೆಗಾನ್ ಆಸ್ಪತ್ರೆಗೆ ಸೇರಿಸಲಾಯಿತು. ಪಿರ್ಯಾದಿ ಅಕ್ಕ, ತಂದೆ, ತಾಯಿರವರ ಮೇಲೆ ಹಲ್ಲೆ. ಮಾಡಿದ ಮೇಲ್ಕಂಡ ವ್ಯಕ್ತಿಗಳ ಮೇಲೆ ಸೂಕ್ತವಾದ ಕಾನೂನು ಕ್ರಮವನ್ನು ಜರುಗಿಸಿ ಸೂಕ್ಷ್ಮವಾದ ರಕ್ಷಣೆ ನೀಡಬೇಕೆಂದು ನೀಡಿದ ದೂರಿನ ಮೇರೆಗೆ  ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.