ವ್ಯಕ್ತಿಯೊಬ್ಬರಿಗೆ ಅಡ್ಡ ಹಾಕಿ ಬೈದು ಜೀವಬೆದರಿಕೆ : ಮೂರು ಜನರ ವಿರುದ್ದ FIR
ಶಿವಮೊಗ್ಗ: ನಗರದ ಜ್ಯೂವೆಲ್ ರಾಕ್ ಹೋಟೆಲ್ ರಸ್ತೆ ಮೀನಾಕ್ಷಿ ಕ್ಯಾಂಟೀನ್ ಹತ್ತಿರ ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿರುತ್ತಾರೆ ಎಂದು ನವುಲೆ ನಿವಾಸಿ ಅರುಣ್ ಕುಮಾರ್ ರವರು ದೂರು ನೀಡಿದ ಹಿನ್ನೆಲೆಯಲ್ಲಿ ಗುರುಪುರ ನಿವಾಸಿ ಮಂಜುನಾಥ್ ಮತ್ತು ಇತರೇ ಎರಡು ಜನರ ವಿರುದ್ದ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಪ್ರಕರಣದ ಹಿನ್ನೆಲೆ:
ದಿನಾಂಕ 11-02-2023 ರಂದು ಸಂಜೆ 7.30 ಗಂಟೆ ಸಮಯದಲ್ಲಿ, ಆರುಣಕುಮಾರ ಪಿ ಬಿನ್ ಪರಶುರಾಮ್, 31 ವರ್ಷ, ಆದಿ ಕರ್ನಾಟಕ ಜಾತಿ ಸಮಾಜಸೇವಕರು, ವಾಸ ರೇಣುಕಾ ನಿಲಯ ಮಾರುತಿ ಬಡಾವಣೆ, ಸವಳಂಗ ರಸ್ತೆ, 04ನೇ ಕ್ರಾಸ್, ನವುಲೆ ಶಿವಮೊಗ್ಗರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:10-02-2023 ರಂದು ಬೆಳಗ್ಗೆ ಪಿರ್ಯಾದಿದಾರರು ಮತ್ತು ತಮ್ಮ ಸ್ನೇಹಿತರಾದ ಜೆ ಸಿ ನಗರ ವಾಸಿ ಕುಮಾರ್ ಮತ್ತು ತಿಮ್ಲಾಪುರ ವಾಸಿ ಹನುಮಂತ ರವರು ಶಿವಮೊಗ್ಗ ಟೌನ್ ನ ಜೂವೆಲ್ ರಾಕ್ ಹೋಟೆಲ್ ಬಳಿಯಲಿರುವ ಮೀನಾಕ್ಷಿ, ಕ್ಯಾಂಟೀನ್ ಹತ್ತಿರದಲ್ಲಿ, ಟೀ ಕುಡಿಯುತ್ತಿರುವಾಗ ಪಿರ್ಯಾದಿದಾರರಿಗೆ ಪರಿಚಿತರಾಗಿರುವ ಗುರುಪುರ ವಾಸಿ ಮಂಜುನಾಥ ಹಾಗೂ ಅವರ ಜೊತೆಯಲಿ 03 ಜನರು ಬಂದು ಬೆಳಗ್ಗೆ 11.30 ಗಂಟೆ ಸಮಯದಲ್ಲಿ, ಯಾವುದೋ ಹಿಂದೆ ಆಗಿರುವ ಗಲಾಟೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಲೇ ಬೋಳಿಮಗನೆ, ಈ ಕಡೆ ನೋಡು, ನಾನು ಹೈಕೋರ್ಟ್ ನ ಪ್ರಖ್ಯಾತ ಲಾಯರ್ ನನ್ನ ಎದುರುಗಡೆ ನಿಲ್ಲುವಷ್ಟು ತಾಕತ್ ನಿನಗೆ ಇದೆಯೇನೋ ಸೂಳೆಮಗನೆ ಎಂದು ಬೈಯುತ್ತಾ ನಿನ್ನದು ಬಹಳ ಅತಿಯಾಯಿತು, ನೀನು ನನ್ನ ವಿರುದ್ಧ ಎಲ್ಲಾ ಪೊಲೀಸ್ ಸ್ಟ್ರೇಷನ್ ನಲ್ಲಿ.. ನನ್ನ ವಿರುದ್ಧ ಬರುತ್ತಿಯಾ, ನಿನ್ನಿಂದ ನನಗೆ ತುಂಬಾ ತೊಂದರೆ ಆಗಿದೆ, ನಿನ್ನನ್ನು ಈ ದಿನವೇ ನನ್ನೊಂದಿಗೆ ಇರುವವರೊಂದಿಗೆ ಸೇರಿ ಹೊಡೆಸಿ, ನನ್ನ ಬೈಕ್ ನಲ್ಲಿರುವ ಪೆಟ್ರೋಲ್ ಹಾಕಿ ಸುರಿದರೆ ನನಗೆ ಅಡ್ಡಿ ಪಡಿಸುವವರು ಯಾರೂ ಇರುವುದಿಲ್ಲ ಎಂದು ಧಮಕಿ ಹಾಕಿ ಮಂಜುನಾಥನು ಎಡ ಪಕ್ಕೆಗೆ ಎಡ ಎದೆಗೆ ಬೆನ್ನಿಗೆ ಮುಸ್ಟಿಯಿಂದ ಗುದ್ದಿದ್ದು, ತಪ್ಪಿಸಿಕೊಂಡು ಹೋಗುತ್ತಿರುವಾಗ ಮಂಜುನಾಥ ಮತ್ತು ಅವನ ಜೊತೆಯಲ್ಲಿ ಇದ್ದ 03 ಜನರು ಸೇರಿ ಅಡ್ಡ ಹಾಕಿ ಕೈಯಿಂದ ಹಲ್ಲೆ ಮಾಡಿ ಮಂಜುನಾಥನು ತನ್ನ ಕೈಯಲ್ಲಿದ್ದ ಚಾಕು ಹಿಡಿದುಕೊಂಡು ನಿನ್ನನ್ನು ಈ ದಿನ ನಾವು ಕೊಲೆ ಮಾಡುತ್ತೇವೆಂದು ಜೀವ ಬೆದರಿಕೆ ಹಾಕುತ್ತಿರುತ್ತಾರೆ ಎಂದು
ಜೊತೆಯಲಿದ್ದ ಕುಮಾರ್ ಹಾಗೂ ಹನುಮಂತ ರವರು ಬಂದು ಗಲಾಟೆ ಬಿಡಿಸಿದ್ದು, ನಂತರ ಕುಮಾರ್ ಮತ್ತು ಹನುಮಂತ ರವರು ಪಿರ್ಯಾದಿಯನ್ನ ಮೆಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಈ ಸಂಬಂದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ಮುಂದುವರಿದಿದೆ.

Leave a Comment