“ಸರ್ವಧರ್ಮದವರಿಗೂ ಭಗವಂತ ಒಬ್ಬನೇ” ಎಂಬ ಸಂದೇಶವನ್ನು ಸಾರುವಂತಹ ಗೊಂಬೆಯಾಟ ಪ್ರದರ್ಶನ

ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಶಿವಮೊಗ್ಗ ಮಹಾನಗರದಲ್ಲಿ ಹೊಲೋಗ್ರಾಫಿಕ್ ಶಿವಲಿಂಗ ದರ್ಶನ 13 ಪ್ರಕಾರದ ಆಮೋಘ ಅಭಿಷೇಕ ಹಾಗೂ “ಸರ್ವಧರ್ಮದವರಿಗೂ ಭಗವಂತ ಒಬ್ಬನೇ” ಎಂಬ ಸಂದೇಶವನ್ನು ಸಾರುವಂತಹ ಗೊಂಬೆಯಾಟ ಪ್ರದರ್ಶನವನ್ನು ಹೊಂಗಿರಣ ಗೊಂಬೆಯಾಟ ತಂಡ, ಹಳಿಯಾಳ ವರಿಂದ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಪ್ರಚಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ, ನವುಲೆ ಶಿವಮೊಗ್ಗ ಇವರ ವತಿಯಿಂದ ಬಸವೇಶ್ವರ ನಗರದ ಶಿವಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು, 
ಪರಮಾತ್ಮನ ಅವತರಣೆಯೇ ಮಹಾಶಿವರಾತ್ರಿ: ರಾಜಯೋಗ ಶಿಕ್ಷಕಿ ಬಿ.ಕೆ ಸ್ವಾತಿ ಅಕ್ಕನವರು ಮಹಾಶಿವರಾತ್ರಿಯ ಸಂದೇಶ
ಪರಮಾತ್ಮನ ಅವತರಣೆಯೇ ಮಹಾಶಿವರಾತ್ರಿ, ಶಿವ ಎಂಬುದು ಪರಮಾತ್ಮನ ದಿವ್ಯ ನಾಮ, ಶಿವ ಎಂದರೆ ಸರ್ವರ ಕಲ್ಯಾಣಕಾರಿ, ಶಿವ ಎನ್ನುವವರು ದೇಹದಾರಿ ಅಲ್ಲ, ಶಿವ ಎಂದರೆ ಜ್ಯೋರ್ತಿಲಿಂಗ, ಪರಂಜ್ಯೋತಿ ಸ್ವರೂಪ ಶಿವನು ಜನನ ಮರಣಗಳಿಲ್ಲದ ಆಜನ್ಯ, ಶರೀರ ಇಲ್ಲದ ಅಶರೀರಿ, ಆಕಾಯ, ಏನನ್ನೂ ಭೋಗಿಸದೇ ಇರುವ ಅಲೋಕ, ಕಣ್ಣಿಗೆ ಕಾಣದೇ ಇರುವ ಅವಕ್ಕೆ ಎಲ್ಲವನ್ನು ತಿಳಿದಿರುವ ಸರ್ವ ಸರ್ವಶಕ್ತಿವಂತ, ಚೈತನ್ಯ ಜ್ಯೋರ್ತಿಲಿಂಗ ಶಿವ ಪರಮಾತ್ಮನ ಮೂರ್ತಿಗೆ ಭಾರತದ ಉದ್ದಗಲದಲ್ಲಿಯ ಪೂಜೆ ಸಲ್ಲುತ್ತಿದೆ.
 ಪುರಾಣ ಪ್ರಸಿದ್ಧನಾದ ಜ್ಯೋತಿ ಸ್ವರೂಪ ಪರಮಾತ್ಮನನ್ನು ಮುಸಲ್ಮಾನರು “ಅಲ್ಲಾಹ್, ಖುದಾ” ಎಂದು ಕ್ರಿಶ್ಚಿಯನ್ನರು ಗಾಡ್" ಎಂದು ಯಹೂದಿಯರು "ಒಹೋವ" ಎಂದು ಸಿಬ್ಬರು "ಏಕ್ ಓಂಕಾರ್" ಎಂದು ಹಿಂದುಗಳು "ಪರಂಬ್ರಹ್ಮ ಈಶ್ವರ" ಎಂಬ ಮಹಿಮೆಗಳಿಂದ ಪ್ರಾರ್ಥನೆ ಮಾಡುತ್ತಾರೆ. ಉಪ ಎಂದರೆ ಹತ್ತಿರ ಹಾಗೂ ವಾಸ ಅರ್ಥಾತ್ ಇರುವುದು, ಮನಸ್ಸು, ಬುದ್ಧಿಯನ್ನು ಭಗವಂತನಲ್ಲಿ ಇಡುವುದನ್ನು ಉಪವಾಸ ಎಂದು ಹೇಳಲಾಗುತ್ತದೆ. ಆದೇ ರಾಜಯೋಗ ಮೆಡಿಟೇಶನ್, ಭಗವಂತನ ಅಮೂಲ್ಯವಾದ ಜ್ಞಾನವನ್ನು ನೀಡುತ್ತಿದ್ದಾರೆ. ಆನೇಕ ಜನ್ಮಗಳಿಗೆ ಸುಖ, ಶಾಂತಿ ಹಾಗೂ ಸರ್ವ ಪ್ರಾಪ್ತಿಗಳನ್ನು ನೀಡುತ್ತಿದ್ದಾರೆ. ಆಹ್ವಾನ ನಿದ್ದೆಯಿಂದ ಏಳಿ, ಎಚ್ಚರಗೊಳ್ಳಿ, ಸ್ವರ್ಗ ಸುಖದ ಆಸ್ತಿಯನ್ನು ಇಂದೆ ಪಡೆಯಿರಿ, ಇದೇ ಜಾಗರಣೆ ಎಂದು ರಾಜಯೋಗ ಶಿಕ್ಷಕಿ ಬಿ.ಕೆ ಸ್ವಾತಿ ಅಕ್ಕನವರು ಮಹಾಶಿವರಾತ್ರಿಯ ಸಂದೇಶವನ್ನು ನೀಡಿದರು. 

ದೊಡ್ಡ ದೊಡ್ಡ ಕಂಪನಿಯ ಮಾಲೀಕರುಗಳು ನಮಗೆ ಮನಶಾಂತಿ ಬೇಕು ಎಂದು ಆಧ್ಯಾತ್ಮ ಚಿಂತನೆಯ ಕಡೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಮನಶಾಂತಿಯನ್ನು ಹೇಗೆ ಪಡೆಯಬೇಕು ಎಂಬುದನ್ನು ಈ ಬ್ರಹ್ಮಕುಮಾರಿ ಸಂಸ್ಥೆಯವರು ಕಾರ್ಯವನ್ನು ಮಾಡುತ್ತಿದ್ದು, ಜನರಲ್ಲಿ ಸಾಕಷ್ಟು ಬದಲಾವಣೆಯನ್ನು ತರುತ್ತಿದ್ದಾರೆ ಎಂದು ಶ್ರೀ ಅರುಣ್ ಡಿ.ಎಸ್. ಶಾಸಕರು, ವಿಧಾನ ಪರಿಷತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ. ಈ .ಕಾಂತೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಶಿವಮೊಗ್ಗ  ಇ. ವಿಶ್ವಾಸ್, ಸದಸ್ಯರು, ಮಹಾನಗರಪಾಲಿಕೆ ಧೀರರಾಜ್ ಹೊನ್ನವಿಲೆ, ಸದಸ್ಯರು ಮಹಾನಗರಪಾಲಿಕೆ, ಶಿವಮೊಗ್ಗ,  ದುಷ್ಯಂತ್ ಕುಮಾರ್ ಬಿ.ಎಂ, ಡೀನ್, ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗ, ರಮೇಶ್ ಬಾಬು ಸಿಂಡಿಕೇಟ್ ಸದಸ್ಯರು, ಕುವೆಂಪು ವಿಶ್ವವಿದ್ಯಾಲಯ,  ಸಂತೋಷ್ ಬಂಕರ, ಸಿಂಡಿಕೇಟ್ ಸದಸ್ಯರು, ಕುವೆಂಪು ವಿಶ್ವವಿದ್ಯಾಲಯ, ಡಾ| ರಜೆ ಥಾಮಸ್, ಆಯುರ್ವೇದಿಕ್ ವೈದ್ಯರು. ಶಿವಮೊಗ್ಗ, ಆಕಾಶ್ ಎಂ, ಉಪನ್ಯಾಸಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯಾಮತಿ, ಬಿ.ಜಿ. ಚಂದ್ರಪ್ಪ, ಅಧ್ಯಕ್ಷರು, ವೀರಶೈವ ಬಳಗ, ನಪು, ಶಿವಮೊಗ್ಗ ಇವರೆಲ್ಲರೂ ಮಹಾಶಿವರಾತ್ರಿ ಪ್ರಯುಕ್ತ ಶುಭಹಾರೈಸಿದರು. 
ಗೊಂಬೆಯಾಟ ಪ್ರದರ್ಶನದಲ್ಲಿ ಸರ್ವಧರ್ಮದವರಿಗೂ ಭಗವಂತ ಒಬ್ಬನೇ, ಯಕ್ಷಗಾನ, ಬಯಲಾಟದ ಪ್ರಸಂಗವನ್ನು ಕಡ್ಡಿಗೊಂಬೆಯಾಟ ಮತ್ತು ಸೂತ್ರದ ಗೊಂಬೆಯಾಟದ ಮೂಲಕ ಪ್ರದರ್ಶಿಸಲಾಯಿತು, ಈ ಕಾರ್ಯಕ್ರರ್ಮವು ಅತ್ಯಂತ ವೈವಿಧ್ಯಮಯವಾಗಿ ಹಾಗೂ ಆಕರ್ಷಕವಾಗಿ ಸಂಪನ್ನಗೊಂಡಿತು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.