ಮಕ್ಕಳ ಪ್ರಕರಣಗಳ ನಿರ್ವಹಣೆಯ ಕುರಿತಂತೆ ಒಂದು ದಿನದ ಸಾಮರ್ಥ್ಯ ಅಭಿವೃದ್ದಿ ತರಬೇತಿ* ಕಾರ್ಯಾಗಾರ
ಶಿವಮೊಗ್ಗ: ಈ ದಿನ ದಿನಾಂಕ 06-02-2023 ರಂದು ಬೆಳಗ್ಗೆ ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ *ಶಿವಮೊಗ್ಗ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ* ವತಿಯಿಂದ ಪೊಲೀಸ್ ಇಲಾಖೆಯ *ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಕ್ಕಳ ಪ್ರಕರಣಗಳ ನಿರ್ವಹಣೆಯ ಕುರಿತಂತೆ ಒಂದು ದಿನದ ಸಾಮರ್ಥ್ಯ ಅಭಿವೃದ್ದಿ ತರಬೇತಿ* ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿರುತ್ತದೆ.*ಶ್ರೀ ರಾಜಣ್ಣ ಸಂಕಣ್ಣನವರ,* ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ ಶಿವಮೊಗ್ಗ ರವರು *ಕಾರ್ಯಕ್ರಮದ ಉದ್ಘಾಟನೆಯನ್ನು* ನೆರವೇರಿಸಿದ್ದು, *ಶ್ರೀ ಮಿಥುನ್ ಕುಮಾರ್ ಜಿ. ಕೆ,* ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ರವರು *ಕಾರ್ಯಕ್ರಮದ ಅಧ್ಯಕ್ಷತೆ* ವಹಿಸಿದ್ದರು, *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, *ಶ್ರೀ ಬಾಲರಾಜ್,* ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ, *ಶ್ರೀಮತಿ ರೇಖಾ ಜಿಎಂ* ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ, *ಡಾ|| ಹರೀಶ ದೇಲಂತಬೆಟ್ಟ,* ಬಾಲ ನ್ಯಾಯಮಂಡಳಿ ಸದಸ್ಯರು ಕಾರ್ಯಕ್ರಮದ *ಮುಖ್ಯ ಅತಿಥಿಗಳಾಗಿ* ಉಪಸ್ಥಿತರಿದ್ದರು. *ಶ್ರೀ ಪ್ರಭು ಡಿ. ಟಿ* ಪೊಲೀಸ್ ಉಪಾಧೀಕ್ಷಕರು, ಡಿಸಿಆರ್. ಬಿ ಶಿವಮೊಗ್ಗ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ *ಸ್ವಾಗತ ಕೋರಿದರು.*
*ಶ್ರೀ ರೋಹಿತ್, ಸಿಜೆ,* ಪೊಲೀಸ್ ತರಬೇತುದಾರರು, ತರಬೇತಿ ಮುಖ್ಯಾಲಯ ಬೆಂಗಳೂರು, *ಶ್ರೀ ಮಂಜುನಾಥ್ ಪಾಟೀಲ್,* ಪೊಲೀಸ್ ಹೆಡ್ ಕಾನ್ಸ್ಟೇಬಲ್, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಶಿವಮೊಗ್ಗ ಮತ್ತು *ಶ್ರೀಮತಿ ಗಾಯತ್ರಿ ಡಿ. ಎಸ್* ರಕ್ಷಣಾಧಿಕಾರಿಗಳು (ಸಾಂಸ್ಥಿಕ) ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಜಿಲ್ಲೆ ರವರು *ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದು,* ಕಾರ್ಯಕ್ರಮದಲ್ಲಿ ಹಾಜರಿದ್ದ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ *ಮಕ್ಕಳನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ* - 2015, ನಿಯಮ 2016 ಪ್ರಕರಣ ನಿರ್ವಹಣೆ ಮತ್ತು ಮಕ್ಕಳ ವಿಶೇಷ ಪೋಲೀಸ್ ಘಟಕದ ಕಾರ್ಯ ನಿರ್ವಹಣೆ, *ಬಾಲ್ಯ ವಿವಾಹ ನಿಷೇದ ಕಾಯ್ದೆ-2006,* ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ)ಕಾಯ್ದೆ 2016, ಬಾಲ ಮತ್ತು *ಕಿಶೋರಾವಸ್ಥೆ ಕಾರ್ಮಿಕರ ದುಡಿಮೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ* 1986, ತಿದ್ದುಪಡಿ ಕಾಯ್ದೆ 2016, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ *(ಪೋಕ್ಸೋ)- 2012 ತಿದ್ದುಪಡಿ 2019,* ನಿಯಮ 2020 ಪ್ರಕರಣ ನಿರ್ವಹಣೆ, ಮಕ್ಕಳು ಕಾಣೆಯಾದ ಪ್ರಕರಣಗಳಲ್ಲಿ ಪ್ರಮಾಣಿತ ನಿರ್ವಹಣಾ ಪ್ರಕ್ರಿಯೆ, *ಮಕ್ಕಳ ಕಳ್ಳ ಸಾಗಾಣಿಕೆ ಮತ್ತು ಮಕ್ಕಳ ಬಿಕ್ಷಾಟನೆ* ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು.

Leave a Comment