ಜನವಾರ್ತೆ ದಿನ ಪತ್ರಿಕೆ ಸಂಪಾದಕ ನಾಗರಾಜ್ ಇನ್ನಿಲ್ಲ
ಶಿವಮೊಗ್ಗ: ಜನವಾರ್ತೆಪತ್ರಿಕೆಯ ಸಂಪಾದಕರು ಆದ ಜಿ.ಎಸ್. ನಾಗರಾಜ್ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಇತ್ತೀಚೆಗೆ ಅಪಘಾತದಿಂದ ಚೇತರಿಕೆ ಕಾಣುತ್ತಿದ್ದ, ಅವರು ಇಂದು ಮುಂಜಾನೆ ಮೂರು ಗಂಟೆಯ ಹೊತ್ತಿಗೆ ಹೃದಯಾಘಾತದಿಂದ ಸಾವು ಕಂಡಿದ್ದಾರೆಂದುವ ತಿಳಿದು ಬಂದಿದೆ.
ಶಿವಮೊಗ್ಗ, ಹಾಸನ, ದಾವಣಗೆರೆ, ಚಿಕ್ಕಮಗಳೂರಿನ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದ ಅಂದಿನ ಜನವಾರ್ತೆ ದಿನ ಪತ್ರಿಕೆ
ಅಂದಿನ ಪತ್ರಿಕೆ ದಿನಮಾನಗಳಲ್ಲಿ ಸುಮಾರು 50ರಿಂದ 60 ಶಾಲೆ ಕಲಿಯುವ ಮಕ್ಕಳು ನಿತ್ಯ ಸಂಜೆ ಬಂದು ಪತ್ರಿಕೆಯನ್ನು ವಿತರಣೆ ಮಾಡುತ್ತಿದ್ದರು. ಶಿವಮೊಗ್ಗ ದಲ್ಲಿ ಜನವಾರ್ತೆ ದಿನಪತ್ರಿಕೆ ಹೆಸರುವಾಸಿಯಾಗಿತ್ತು.
ಇಂದು ಮಧ್ಯಾಹ್ನ 12:30 ಹೊತ್ತಿಗೆ ಅವರ ಪಾರ್ಥಿವ ಶರೀರ ಶಿವಮೊಗ್ಗದ ರವೀಂದ್ರ ನಗರದಲ್ಲಿರುವ ಅವರ ನಿವಾಸಕ್ಕೆ ಬರಲಿದೆ.ಮೃತರ ಆತ್ಮಕ್ಕೆ ಚಿರ ಶಾಂತಿ ಮತ್ತು ಅವರ ಕುಟುಂಬಕ್ಕೆ ಅವರ ಅಗಲಿಕೆ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವ...
Leave a Comment