ಮನುಷ್ಯ ಬೇರೆಲ್ಲಾ ಜೀವಿಗಳಿಗಿಂತ ಶ್ರೇಷ್ಠ : ಡಾ.ಧನಂಜಯ ಸರ್ಜಿ ಅಭಿಪ್ರಾಯ
ಶಿವಮೊಗ್ಗ : ಮೆದುಳು ಮಾನವನ ಅತ್ಯಂತ ಶ್ರೇಷ್ಠ ಅಂಗವಾಗಿದ್ದು, ಸಂಪೂರ್ಣ ನಡತೆಯನ್ನು ನಿಗ್ರಹಿಸುತ್ತದೆ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಹೇಳಿದರು. ನಗರದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ಶನಿವಾರ ಪಾಥ್‌ವೇಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮನುಷ್ಯನ ದೇಹವು ಭಗವಂತನಿಂದ ರಚಿಸಲ್ಪಟ್ಟಿದ್ದು, ಮೆದುಳು ಶ್ರೇಷ್ಠ ಅಂಗವಾಗಿದ್ದು, ಹಲವಾರು ವಿಶೇಷತೆಗಳನ್ನು ಹೊಂದಿರುವ ಮಾನವರಾದ ನಾವು ಬುದ್ದಿವಂತಿಕೆಯಿಂದಾಗಿ ಬೇರೆಲ್ಲಾ ಜೀವಿಗಳಿಗಿಂತಲೂ ಸರ್ವ ಶ್ರೇಷ್ಠರಾಗಿದ್ದೇವೆ. ನಮಗಿರುವ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು ವಿದ್ಯಾರ್ಥಿಗಳಿಗೆ ಮೆದುಳಿನ ಬಗ್ಗೆ ಸಂಪೂರ್ಣ ವೈಜ್ಞಾನಿಕ ಮಾಹಿತಿ ನೀಡಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎ ಎಸ್ ಚಂದ್ರಶೇಖರ್ ಮಾತನಾಡಿ, ವಿದ್ಯೆಯೇ ಸರ್ವಸ್ವ, ವಿದ್ಯಾರ್ಥಿಗಳೇ ನಮ್ಮ ಮುಂದಿನ ಆಸ್ತಿ. ಸಮಯವನ್ನು ಹರಣ ಮಾಡದೇ ಭವಿಷ್ಯದ ಬಗ್ಗೆ ಉನ್ನತ ಗುರಿ ಹೊಂದುವ ಮೂಲಕ ಯಶಸ್ಸು ಕಾಣುವಂತೆ ಸಲಹೆ ನೀಡಿದರು.
ನಂತರ ಪಾಥ್ವೇಸ್‌ನ ಹಿರಿಯ ವಿದ್ಯಾರ್ಥಿ ಶಿವಕುಮಾರ್ ಅವರು ತಮ್ಮ ಹಿಂದಿನ ದಿನಗಳನ್ನು ಮೆಲಕು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್ ರಾಜೇಶ್ವರಿ ವಹಿಸಿದ್ದರು, ಪಾಥ್ವೇಸ್ ಘಟಕದ ನಿರ್ದೇಶಕರಾದ ಪ್ರೊ. ಸಿ.ಕೆ.ರಮೇಶ್, ಪ್ರೊ. ಎಂ ಕೆ ವೀಣಾ, ಪ್ರೊ. ಕೆ.ಬಿ.ಧನಂಜಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Leave a Comment