ಶಿವಮೊಗ್ಗ ರವೀಂದ್ರ ನಗರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವಿದ್ವಾನ್ ಅ.ಪ.ರಾಮಭಟ್ಟರು ಇನ್ನಿಲ್ಲ
ಶಿವಮೊಗ್ಗ: ರವೀಂದ್ರ ನಗರದ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವಿದ್ವಾನ್ ಅ.ಪ.ರಾಮಭಟ್ಟರು (73) ವಿಧಿವಶರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮಭಟ್ಟರನ್ನ ಮಣಿಪಾಲಿಗೆ ದಾಖಲಿಸಲಾಗಿತ್ತು. ಎರಡು ಮೂರು ದಿನಗಳ ಹಿಂದೆ ಅವರನ್ನ ಶಿವಮೊಗ್ಗದ ಮೆಟ್ರೋಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಿನ್ನೆ ರಾತ್ರಿ 11-30 ಕ್ಕೆ ಕೊನೆ ಉಸಿರೆಳೆದಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ ಕೊಂಡಿಯಂತಿದ್ದ ರಾಮಭಟ್ಟರು ಶಿವಮೊಗ್ಗ ಹೌಸಿಂಗ್ ಸೊಸೈಟಿಯ ಜಾಗದಲ್ಲಿರುವ ಗಣಪತಿ ದೇವಸ್ಥಾನದ ಅಭಿವೃದ್ಧಿಯನ್ನ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಈಶ್ವರಪ್ಪ, ಸಂಸದ ರಾಘವೇಂದ್ರ ಸೇರಿದಂತೆ ಅನೇಕ ಜನಪ್ರತಿನಿಧಿಗಳೊಂದಿಗೆ ರಾಮಭಟ್ಟರ ಬಾಂಧವ್ಯ ಚೆನ್ನಾಗಿತ್ತು.
ಬಸವನಗುಡಿಯ 5 ನೇ ಕ್ರಾಸ್ ನಲ್ಲಿ ಇರುವ ಅವರ ಸ್ವಗೃಹದಲ್ಲಿ ಮೃತರ ಅಂತಿಮ
ದರ್ಶನಕ್ಕೆ ಇಂದು ಬೆಳಿಗ್ಗೆ 9 ರವರೆಗೆ
ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ, ಓರ್ವಪುತ್ರ ಹಾಗೂ ಬಂಧು ಬಳಗ ಸೇರಿದಂತೆ ಅಪಾರ ಶಿಶ್ಯ ವೃಂದದವರನ್ನು ಅಗಲಿದ್ದಾರೆ. ಶಿವಮೊಗ್ಗ ನಗರದಲ್ಲಿ ಅ.ಪ. ರಾಮಭಟ್ಟರೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತರು.
ವೇ.ಬ್ರ.ಶ್ರೀ ಅ.ಪ. ರಾಮಭಟ್ಟರು ನಮ್ಮನ್ನು ಬಿಟ್ಟು ಅಗಲಿರುತ್ತಾರೆ. ಅವರ ದಿವ್ಯ ಆತ್ಮಕ್ಕೆ ಭಗವಂತ ಸದ್ಗತಿಯನ್ನು ನೀಡಲಿ. ಹಾಗೂ ಅವರ ಕುಟುಂಬದವರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತ ನಲ್ಲಿ ಪ್ರಾರ್ಥಿಸುವ...ವೇ.ಬ್ರ.ಶ್ರೀ ಅ.ಪ. ರಾಮಭಟ್ಟರು ಶ್ರೀ ವೇದ ನಾರಾಯಣನುಗ್ರಹ ಪ್ರಶಸ್ತಿ ಸಹ ಪಡೆದಿದ್ದರು. ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ತೀವ್ರ ಸಂತಾಪ ಸೂಚಿಸಿದ್ದಾರೆ.
Leave a Comment