ದೆಹಲಿಯಿಂದ ಶಿವಮೊಗ್ಗಕ್ಕೆ ಬಂದ ವಾಯುಸೇನೆ ವಿಮಾನ:ನೂತನ ವಿಮಾನ ನಿಲ್ದಾಣದ ರನ್ ವೇ ಪರೀಕ್ಷೆ

ಶಿವಮೊಗ್ಗ : ದೆಹಲಿಯಿಂದ ಬಂದ ವಾಯುಸೇನೆ ವಿಮಾನವು ಶಿವಮೊಗ್ಗ ನೂತನ ವಿಮಾನ ನಿಲ್ದಾಣದ ರನ್ ವೇ ಪರೀಕ್ಷೆ (Run Way Test) ನಡೆಸಿತು. ವಿವಿಧ ಬಗೆಯ ಲ್ಯಾಂಡಿಂಗ್, ಟೇಕ್ ಆಫ್ ಮಾಡಲಾಯಿತು.ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಾಯು ಸೇನೆಯ ಬೋಯಿಂಗ್ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಯಿತು. ಕೆಲವು ಕ್ಷಣದ ಬಳಿಕ ವಿಮಾನ ಪುನಃ ಟೇಕ್ ಆಫ್ ಮಾಡಿತು.ರನ್ ವೇ ಪರೀಕ್ಷೆ:
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3 ಕಿ.ಮೀ ರನ್ ವೇ (Run Way Test) ನಿರ್ಮಿಸಲಾಗಿದೆ. ರಾಜ್ಯದಲ್ಲೇ ಅತಿ ಉದ್ದನೆಯ ರನ್ ವೇ ಇದಾಗಿದೆ. ವಾಯು ಸೇನೆಯ ವಿಮಾನ ಸಂಪೂರ್ಣ ರನ್ ವೇ ಬಳಸಿ ಪರೀಕ್ಷೆ ನಡೆಸಿತು.ವಿವಿಧ ಬಗೆಯ ಲ್ಯಾಂಡಿಂಗ್ ಗಳನ್ನು ಪ್ರಯೋಗಿಸಿತು. ಟಚ್ ಅಂಡ್ ಗೋ ಮಾದರಿಗಳನ್ನು ಪರೀಕ್ಷೆ ನಡೆಸಿತು. ಬಳಿಕ ವಿಮಾನ ದೆಹಲಿಗೆ ಪ್ರಯಾಣ ಬೆಳೆಸಿತು.
ಫೆಬ್ರವರಿ 27 ರಂದು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇಂದು ಭಾರತೀಯ ವಾಯುಪಡೆಯ ವಿಮಾನದ ಪರೀಕ್ಷಾರ್ಥ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ನಡೆಸಲಾಯಿತು.

ಫೆಬ್ರವರಿ 27 ರಂದು ನೂತನ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ಬರಲಿದ್ದಾರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ:ಶಿವಮೊಗ್ಗ : ಫೆ. 27 ಕ್ಕೆ  ಸೋಮವಾರ 11.15 ಕ್ಕೆ ವಿಮಾನ ನಿಲ್ದಾಣದ ಹೊಸ ರನ್ ವೇ ನಲ್ಲಿ ವಿಮಾನದಲ್ಲಿ ಪ್ರಧಾನಿ ಮೋದಿಯವರು ಬಂದಿಳಿಯಲಿದ್ದಾರೆ.ಪ್ರಧಾನಿ ಶ್ರೀಯುತ ನರೇಂದ್ರ ಮೋದಿಯವರು ಶಿವಮೊಗ್ಗ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಮಾಡಲಿದ್ದಾರೆ.
ಇದಕ್ಕಾಗಿ ಜಿಲ್ಲಾಡಳಿತ ದಿಂದ ಎಲ್ಲಾ ರೀತಿಯ ತಯಾರಿ ನಡೆದಿದೆ . ರಾಷ್ಟ್ರ ಕವಿ ಕುವೆಂಪು ಅವರ ಹೆಸರನ್ನು ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ಫೈನಲ್ ಮಾಡಲಾಗಿದೆ.
ವಿಮಾನ ಹಾರಾಟಕ್ಕೆ ಲೈಸೆನ್ಸ್ ಸಿಕ್ಕಿದೆ. 
ಮೊದಲ ಹಂತದಲ್ಲಿಯೇ ಲೈಸೆನ್ಸ್ ಸಿಕ್ಕ ಮೊದಲ ಏರ್ಪೋಟ್ ಇದಾಗಿದೆ. ರಾಜ್ಯದಲ್ಲಿಯೇ ಮೊದಲ ಏರ್ಪೊರ್ಟ್ ಇದಾಗಿದೆ. ಸುಮಾರು 3 ಲಕ್ಷಕ್ಕಿಂತ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾ ಗಲಿದ್ದಾರೆ.10 ಗಂಟೆಯೊಳಗೆ ಏರ್ಪೊರ್ಟ್ ಒಳಗೆ ಸಾರ್ವಜನಿ ಕರು ಆಗಮಿಸಬೇಕಿದೆ. ಬಳಿಕ ಗೇಟ್ ಮುಚ್ಚಲಾಗುತ್ತದೆ. ಹೀಗಾಗಿ ಮೊದ ಲೇ ಸಾರ್ವಜನಿಕರು ಏರ್ಪೋಟ್ ಒಳಗೆ ಆಗಮಿಸಬೇಕಾಗಿದೆ. ಬೇಗನೆ ಆಗಮಿಸುವಂತೆ ಸಾರ್ವಜನಿಕರಿಗೆ ಸಂಸದ ಬಿವೈಆರ್ ಮನವಿ ಮಾಡಿದ್ದಾರೆ.

  

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.