ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತ್ ನಿಧನ- ಸಂತಾಪ

ಶಿವಮೊಗ್ಗ: ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇರಿ, 2001 ರಲ್ಲಿ PSI ಆಗಿ ನೇಮಕಗೊಂಡು
ದಿನಾಂಕ 31-3-2020 ರಂದು ನಿವೃತ್ತಿ ಹೊಂದಿ,ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ. ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ 
ಲಕ್ಷ್ಮಿಕಾಂತ್ ರವರು ದಿ.18-2-2023 ರಂದು,ಶಿವಮೊಗ್ಗ  ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ
ಯುತ್ತಿರುವಾಗ ಹೃದಯಾಘಾತದಿಂದ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಮೃತರು ಪತ್ನಿ ಶ್ರೀಮತಿ ಶೈಲಜಾ
(ಶಿಕ್ಷಕಿ),ಮಗ ಪ್ರಮೋದಾ, ಮತ್ತು ಅಪಾರ ಬಂಧು ಬಳಗವನ್ನು
ಮಿತ್ರರನ್ನು ಬಿಟ್ಟು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಾಗೂ ಮೃತರ ಕುಟುಂಬಕ್ಕೆ   ಪತ್ನಿ,ಮಗ,ಅಪಾರ ಬಂಧು ಬಳಗದ
ವರಿಗೆ, ಮಿತ್ರರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು, ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗಳು ಹಾಗೂ ಪದಾಧಿಕಾರಿಗಳು ಪ್ರಾರ್ಥಿಸಿ, ತೀವ್ರ ಸಂತಾಪ ಸೂಚಿಸಿದ್ದಾರೆ.

 ಪೊಲೀಸ್ ಇಲಾಖೆಯಿಂದ ಅಂತ್ಯಕ್ರಿಯೆ ಸಲುವಾಗಿ ಸಿಗಬಹುದಾದ ನಗದು ಹಣ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕೂಡಲೇ ಕೊಡಿಸಿಕೊಡಲಾಗುವುದು ಎಂದು  ಅದ್ಯಕ್ಷರು ಮತ್ತು ಕಾರ್ಯದರ್ಶಿ ಗಳು ತಿಳಿಸಿದ್ದಾರೆ. 

 ಮೃತ ದೇಹವನ್ನು ಚಿಕ್ಕಮಗಳೂ
ರು ಜಿಲ್ಲೆ,ಕಡೂರು ನಗರದ ಈದ್ಗಾ ಕಾಲೋನಿಯ
KMK Floor & Home Indu
stris ಬಳಿಯಲ್ಲಿ ಅಣ್ಣನ ಮನೆ
ಯಲ್ಲಿ ಇರಿಸಲಾಗಿದ್ದು,
ಮತ್ತು ಇಂದು 12 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.