ಮನೆಯ ಇಂಟರ್ ಲಾಕ್ ಬೀಗ ಮುರಿದು ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿ ಪರಾರಿಯಾದ ಕಳ್ಳರು
ಶಿವಮೊಗ್ಗ: ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಮುಂಬಾಗಿಲನ್ನು ಮೀಟಿ ಇಂಟರ್ ಲಾಕ್ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಗಾಡ್ರೇಜ್ ಬೀರುವಿನಲ್ಲಿದ್ದ 40000/- ನಗದು ಹಣ, ಮತ್ತು ಸುಮಾರು 2,28,000/- ರೂ ಬೆಲೆಬಾಳುವ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳರನ್ನು ಪತ್ತೆ ಮಾಡಿ ನಗದು ಹಣ ಮತ್ತು ಬಂಗಾರದ ಒಡವೆ ಹಾಗು ಒಂದು ಮೊಬೈಲನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ದೊಡ್ಡ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ;
ಶಿವಮೊಗ್ಗ ನಗರದ
ಅಶೋಕ ನಗರದ ನಿವಾಸಿ ಶ್ರೀಮತಿ ಮಂಜಮ್ಮ ಕೋಂ ನಾಗರಾಜ್ ಇವರು ಶಿರಾ ತಾಲೂಕಿನ ಸಿಬಿ ಗ್ರಾಮದಲ್ಲಿರುವ ತಮ್ಮ ಮನೆ ದೇವರು ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವರ ಜಾತಾ ಮಹೋತ್ಸವ ಕಾರ್ಯಕ್ರಮ ಇದ್ದುದರಿಂದ ಮಗ ರಾಘವೇಂದ್ರ ಜೊತೆ ದಿನಾಂಕ: 06/02/2023 ರಂದು ರಾತ್ರಿ 09-00 ಗಂಟೆಗೆ ತಮ್ಮ ಮನೆಯ ಮುಂಬಾಗಿಲಿಗೆ ಇಂಟರ್ ಲಾಕ್ ಬೀಗ ಹಾಕಿಕೊಂಡು ಜಾತ್ರೆಗೆ ಹೋಗಿರುತ್ತಾರೆ.,
ಪಕ್ಕದ ಮನೆಯ ಲತಾ ರವರು ದಿ:09-02-2023 ರಂದು ಮಧ್ಯಾಹ್ನ: 01-00 ಗಂಟೆಗೆ ಶ್ರೀಮತಿ ಮಂಜಮ್ಮರವರಿಗೆ ಫೋನ್ ಮಾಡಿ ನಿಮ್ಮ ಮನೆಯ ಬಾಗಿಲು ಬೀಗ ಮುರಿದಿದ್ದು ಬಾಗಿಲು ತೆರೆದಿರುತ್ತದೆ ಎಂದು ತಿಳಿಸಿರುತ್ತಾರೆ.
ದೂರುದಾರರಾದ ಶ್ರೀಮತಿ ಮಂಜಮ್ಮರವರು ಶ್ರೀ ಲಕ್ಷ್ಮಿನಾರಾಯಣ ಜಾತ್ರೆಯಿಂದ ದಿನಾಂಕ:09-02-2023 ರಂದು ರಾತ್ರಿ 08-30 ಗಂಟೆಗೆ ತಮ್ಮ ಮನೆಗೆ ಬಂದು ನೋಡಲಾಗಿ ಮುಂಬಾಗಿಲು ತೆರೆದಿದ್ದು ಒಳಗೆ ಪ್ರವೇಶ ಮಾಡಿ ನೋಡಿದಾಗ ಮನೆಯ ಹಾಲ್ನಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಂತರ ಅದರ ಪಕ್ಕದಲ್ಲಿರುವ ಬೆಡ್ ರೂಂ ಗೆ ಹೋಗಿ ನೋಡಿದಾಗ ಗಾಡ್ರೇಜ್ ಬೀರುವಿನ ಬಾಗಿಲು ತೆರೆದಿದ್ದು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ನಂತರ ಮನೆಯಲ್ಲಿ, ಎಲ್ಲಾ... ಕಡೆ ಪರಿಶೀಲಿಸಿ ನೋಡಿದಾಗ ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಮುಂಬಾಗಿಲನ್ನು ಮೀಟಿ ಇಂಟರ್ ಲಾಕ್ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಮನೆಯ ಗಾಡ್ರೇಜ್ ಬೀರುವಿನಲಿದ್ದ 1) 40,000/- ರೂ ನಗದು 2) ಸುಮಾರು 90000/- ರೂ ಬೆಲೆಯ ಸುಮಾರು 25 ಗ್ರಾಂ ತೂಕದ ಬಂಗಾರದ ನೆಕ್ಸ್ಲೈಸ್, 3) ಸುಮಾರು 80000/- ರೂ ಬೆಲೆಯ 22 ಗ್ರಾಂ ತೂಕದ ಬಂಗಾರದ ಸರ, 4) ಸುಮಾರು 30000/- ರೂ ಬೆಲೆಯ ಸುಮಾರು 8 ಗ್ರಾಂ ತೂಕದ ಬಂಗಾರದ ಕಿವಿ ಓಲೆ, 5) ಸುಮಾರು 12,000/ರೂ ಬೆಲೆಯ ಸುಮಾರು 03 ಗ್ರಾಂ ತೂಕದ ಬಂಗಾರದ ಕಿವಿ ಓಲೆ, 6) ಸುಮಾರು 16000/- ರೂ ಬೆಲೆ 34 ಗ್ರಾಂ ತೂಕದ ಕೆಸರಿ ಹವಳದ ಒಂದು ಬಂಗಾರದ ಉಂಗುರ ಮತ್ತು 07) ಸುಮಾರು 20000/- ರೂ ಬೆಲೆ ಬಾಳುವ ಒಂದು ಸ್ಪಾಮ್ ಸಂಗ್ ಗಾಲಕ್ಸಿ, ಎ-33 (IMEI 1 350995412957489, IMEI 2: 350995412957483) ಮೊಬೈಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಈ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Comment