ಗೋಪಾಲಗೌಡ ಬಡಾವಣೆಯಲ್ಲಿ ಎಎಸ್ಐರವರ ಬೈಕ್ ಕಳ್ಳತನ; ಸಿಸಿ ಕ್ಯಾಮೆರಾದಲ್ಲಿ ಸೆರೆ
ಶಿವಮೊಗ್ಗ: ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಎ ಬ್ಲಾಕ್ ನಲ್ಲಿ ಎಎಸ್ಐ ರವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಹೀರೋ ಹೊಂಡಾ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡ ಹೋಗಿದ್ದು, ಈ ಸಂಬಂದ ಪ್ರಕರಣ ದಾಖಲಾಗಿದೆ.ಈ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ ಎನ್ನಲಾಗಿದೆ. ಕಳ್ಳತನ ಮಾಡಿಕೊಂಡು ಹೋದ ದೃಶ್ಯಾವಳಿ ಸಿಸಿ ಕ್ಯಾಮೇರಾದಲ್ಲಿ ಸೆರೆ ಆಗಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಬಿನ್ ದುಗ್ಗಪ್ಪಗೌಡ ಬೈಕ್ ಕಳೆದು ಕೊಂಡ ವ್ಯಕ್ತಿಯಾಗಿದ್ದಾರೆ.
ಕುಂಟುತ್ತಾ ಬಂದ ವ್ಯಕ್ತಿ ಬೈಕ್ ಕಳ್ಳತನ ಮಾಡಿಕೊಂಡು ಹೋಗಿದ್ದು, ಸಿಸಿ ಕ್ಯಾಮೆರಾ ದಲ್ಲಿ ದೃಶ್ಯಾವಳಿ ಸೆರೆಯಾಗಿದೆ.ಕಳ್ಳತನ ಮಾಡುತ್ತಿರುವ ಮೂರು ದೃಶ್ಯಾವಳಿ ನಮ್ಮ ಪತ್ರಿಕೆಗೆ ಸಿಕ್ಕಿದೆ.
ಈ ಸಂಬಂದ ತುಂಗಾನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ.
ನಿನ್ನೆ ರಾತ್ರಿ ಕೂಡ ಗೋಪಾಲಗೌಡ ಬಡಾವಣೆಯ ಎ ಬ್ಲಾಕ್ ನಲ್ಲಿ ಮತ್ತೊಂದು ಬೈಕ್ ಕಳ್ಳತನ ವಾಗಿದೆ ಎಂದು ಹೇಳಲಾಗುತ್ತಿದೆ.
ಬೈಕ್ ಕಳ್ಳತನ ವಾದ ಹಿನ್ನೆಲೆಯಲ್ಲಿ ಗೋಪಾಲಗೌಡ ಬಡಾವಣೆಯ ನಿವಾಸಿಗಳು ಭಯಬೀತರಾಗಿದ್ದಾರೆ. ಬೀಟ್ ಪೋಲಿಸರು ಸರಿಯಾಗಿ ಬರುತ್ತಿಲ್ಲ ನಾಪತ್ತೆಯಾಗಿದ್ದಾರೆ. ಆಗಾಗಿ ಸದರಿ ಬಡಾವಣೆಯ ಏರಿಯಾದಲ್ಲಿ ಕಳ್ಳತನವಾಗುತ್ತಿದೆ ಎಂದು ದೂರಿದ್ದಾರೆ.
ಪೋಲೀಸ್ ವರಿಷ್ಟರು ಈ ಬಗ್ಗೆ ಗಮನ ಹರಿಸಿ ಮುಂದಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ವರಧಿಯಾಗದಂತೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.

Leave a Comment