ಫೆ. 6 ರಂದು ಶಿವಮೊಗ್ಗ ಐ.ಬಿ ಯಲ್ಲಿ ತಾ.ಪಂ ಮತ್ತು ಗ್ರಾ.ಪಂ. ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಸಭೆ

ಶಿವಮೊಗ್ಗ: ನಾವುಗಳು ಸಾಕಷ್ಟು ಜನಪರ ಹಾಗೂ ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ 5 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತೇವೆ.ಮಾಜಿ ಸದಸ್ಯರುಗಳಾದ ಮೇಲೆ ನಮಗೆ ಯಾವುದೇ ತರಹದ ಸವಲತ್ತುಗಳು ಸರ್ಕಾರದಿಂದ ಸಿಗುತ್ತಿಲ್ಲ, ಆದ್ದರಿಂದ ನಾವೆಲ್ಲರೂ ಸೇರಿಕೊಂಡು ಒಕ್ಕೂಟ ರಚಿಸಿದ್ದೆವೆ.ಈ ಬಗ್ಗೆ ಪೆಬ್ರವರಿ 6 ರಂದು ಬೆಳಗ್ಗೆ 10:30 ಕ್ಕೆ ಸೋಮವಾರ ಶಿವಮೊಗ್ಗ ಸರ್ಕೀಟ್ ಹೌಸ್ (ಐ.ಬಿ) ಇಲ್ಲಿ ಸಭೆಯನ್ನು ಕರೆಯಲಾಗಿದೆ.ಎಲ್ಲಾ ತಾಲ್ಲೂಕು ಪಂಚಾಯತಿ ಮತ್ತು ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರುಗಳು ಮತ್ತು ಸದಸ್ಯರುಗಳು 
ಭಾಗವಹಿಸಬೇಕು ಎಂದು ಆಯನೂರು ಗ್ರಾಮಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಬಿ.ಎಂ ರವಿಕುಮಾರ್ ಹೇಳಿದರು.

ಇಂದು ಬೆಳಿಗ್ಗೆ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.

 ನಾವುಗಳು ನಮ್ಮಗಳ ಕ್ಷೇಮಾಭಿವೃದ್ಧಿ ವಿಚಾರದಲ್ಲಿ ನಾವುಗಳೆಲ್ಲರೂ ಸೇರಿಕೊಂಡು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಕ್ಷೇಮಾಭಿವೃದ್ಧಿ ಒಕ್ಕೂಟದಿಂದ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸಲು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಎಂದರು .

ಬೇಡಿಕೆಗಳು:ಸರ್ಕಾರಕ್ಕೆ ಮನವಿ:
ನಮಗೆ ಸರ್ಕಾರದಿಂದ ಶಾಶ್ವತವಾಗಿ ಒಂದು ಗುರುತಿನ ಚೀಟಿ (ಐ.ಡಿ)ನೀಡಬೇಕು. 
ಮಾಸಿಕ ಮಾಸಾಶನ ರೂ 5 ಸಾವಿರ ರೂ.ಮತ್ತು ಸರ್ಕಾರದಿಂದ ಸಿಗುವಂತಹ ಸವಲತ್ತುಗಳಾದ ಆರೋಗ್ಯ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ರಿಯಾಯ್ತಿ ನೀಡಬೇಕು. ಸರ್ಕಾರಿ & ಖಾಸಗೀ ಎಲ್ಲಾ ಆಸ್ಪತ್ರೆಗಳಲ್ಲಿ ನಮಗೆ ರಿಯಾಯ್ತಿದರದಲ್ಲಿ ಚಿಕಿತ್ಸೆ  ಗ್ರಾಮ ಮತ್ತು ತಾಲ್ಲೂಕು ಪಂಚಾಯತಿಗಳಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸಲು ಅಧಿಕೃತವಾಗಿ ಮಾಹಿತಿ ತಿಳಿಸಬೇಕು. ಮಹಿಳಾ ಸದಸ್ಯರುಗಳಿಗೆ ಹೆಚ್ಚಿನ ಸರ್ಕಾರದ ಸವಲತ್ತುಗಳನ್ನು ನೀಡಬೇಕು ಎಂದರು.
ಪಂಚಾಯತಿಯ ಸದಸ್ಯರುಗಳು ಮರಣ ಹೊಂದಿದಲ್ಲಿ ಪಂಚಾಯತಿಯಿಂದ ಗೌರವ ಸಲ್ಲಿಸಬೇಕು. ಪಂಚಾಯತಿಗಳಲ್ಲಿ ಸದಸ್ಯರುಗಳಿಗೆ ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು. ಸದಸ್ಯರುಗಳಿಗೆ ರಾಜ್ಯಾದ್ಯಂತ ಸಂಚಾರಕ್ಕೆ ಸರ್ಕಾರಿ ಬಸ್ಸು ಮತ್ತು ರೈಲ್ವೆಯಲ್ಲಿ ರಿಯಾಯ್ತಿ ಕೊಡಬೇಕು.  ಸರ್ಕಾರದಿಂದ ಬರುವ ಸಾಲ ಮತ್ತು ಸವಲತ್ತುಗಳಲ್ಲಿ ಪರಿಗಣಿಸಬೇಕು.ಮಾಜಿ ಸದಸ್ಯರಾದ ಮೇಲೆ ನಮಗೂ ಶಾಸಕರಂತೆ ಸೌವಲತ್ತುಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ  ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಜನಾಯ್ಕ ಗ್ರಾಮ ಪಂಚಾಯತಿ ಸದಸ್ಯರು, ಕಿರಣ್ ಮಾಜಿ ಉಪಾಧ್ಯಕ್ಷ ಕೋಹಳ್ಳಿ ಗ್ರಾ.ಪಂ,ಸುರೇಶ್ ಅರಸಾಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.