ಅಪ್ಪು ನೆನಪಿನ ಕಡೆಗೆ ಸೈಕಲ್ ಜಾಥ ಫೆ.13 ರಂದು ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಸೈಕಲ್ ಜಾಥ

ಶಿವಮೊಗ್ಗ:  ಅಪ್ಪು ನೆನಪಿನ ಕಡೆಗೆ ಸೈಕಲ್ ಜಾಥ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಗೆ ಫೆ.13 ರಂದು ಬೆಳಿಗ್ಗೆ ನೆಹರು ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಗುವುದು ಎಂದು ಸೈಯದ್ ಮತ್ತು ಗೌಸ್ ಪೀರ್ ಹೇಳಿದರು.ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು. ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಸೈಕಲ್ ಜಾಥ ಹಮ್ಮಿಕೊಂಡಿದ್ದೇವೆ. ನಾವು ಹೋಗುವ ದಾರಿಯ ನಗರ ಪ್ರದೇಶಗಳಲ್ಲಿ ಅಪ್ಪು ಗಾಯನದ ಮೂಲಕ ಜಾಗೃತಿ ಮೂಡಿಸಿ, ಬೆಂಗಳೂರಿನ ಅಪ್ಪು ಸಮಾಧಿಗೆ ತಲುಪಿ ನಮನ ಸಲ್ಲಿಸಿ ನಮ್ಮ ಜಾಥ ಕೊನೆಗೊಳಿಸುತ್ತೇವೆ ಎಂದರು.
ಈ ಜಾಥದ ಮೂಲ ಉದ್ದೇಶ 
ಸರ್ಕಾರಿ ಶಾಲೆ ಉಳಿಸಿ ಮತ್ತು ಸರ್ಕಾರಿ ಆಸ್ಪತ್ರೆ ಸೌಲಭ್ಯ ಹೆಚ್ಚಿಸಿ ಆಹಾರ, ಆರೋಗ್ಯ, ಶಿಕ್ಷಣ ಪ್ರತಿಯೊಬ್ಬರ ಹಕ್ಕು- ಪ್ರತಿಯೊಬ್ಬರ ಸ್ವತ್ತು  ಎಂದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.