ಫೆ.13 ರಂದು ಒಳಗುತ್ತಿಗೆ ನೌಕರರ ಗುತ್ತಿಗೆ ಸೇವೆಯನ್ನು ಖಾಯಂ ಮಾಡಲು ಆಗ್ರಹಿಸಿ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ
ಶಿವಮೊಗ್ಗ: ಒಳಗುತ್ತಿಗೆ ನೌಕರರ ಗುತ್ತಿಗೆ ಸೇವೆಯನ್ನು ಖಾಯಂ ಮಾಡಲು ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಫೆ.13 ರಂದು
ಸ್ವತಂತ್ರ್ಯ ಉದ್ಯಾನವನ, ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ NHM - ಒಳಗುತ್ತಿಗೆ ನೌಕರರ ಸಂಘ (ರಿ.) ರಾಜ್ಯಾದ್ಯಕ್ಷ ಕುಮಾರ್ ಎಸ್ ಹೇಳಿದರು.
ಇಂದು ಬೆಳಿಗ್ಗೆ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ
(ಎನ್.ಹೆಚ್.ಎಂ) ಅಡಿಯಲ್ಲಿ ಸುಮಾರು 30000ಕ್ಕೂ ಹೆಚ್ಚು ಒಳಗುತ್ತಿಗೆ ನೌಕರರು ಕಳೆದ 20-25 | ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ | ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಮಣಿಪುರ ಸರ್ಕಾರವು ಈಗಾಗಲೇ ಎನ್.ಹೆಚ್.ಎಂ. ಒಳಗುತ್ತಿಗೆ | ನೌಕರರನ್ನು ಯಥವತ್ತಾಗಿ ಎಲ್ಲ ವೃಂದವರನ್ನು ಖಾಯಂಗೊಳಿಸಿ ಆದೇಶ ಹೊರಡಿಸಿರುತ್ತದೆ ಎಂದರು.
ಹಾಗೇಯೇ - ಒಡಿಸ್ಸಾ, ರಾಜ್ಯಸ್ಥಾನ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಸರ್ಕಾರವು ಈಗಾಗಲೇ ಒಳಗುತ್ತಿಗೆ ನೌಕರರ | ಸೇವೆಯನ್ನು ಖಾಯಂಗೊಳಿಸಲು ಪ್ರಕ್ರಿಯೆ ಪ್ರಾರಂಭಿಸಿರುತ್ತಾರೆ ಎಂದರು.
ನಮ್ಮ ರಾಜ್ಯದಲ್ಲಿ ಎನ್.ಹೆಚ್.ಎಮ್. ಕಾರ್ಯಕ್ರಮಗಳ ಕರ್ತವ್ಯದ ಜೊತೆಗೆ ದೇಶಕ್ಕೆ ಹಾಗೂ ರಾಜ್ಯಾಕ್ಕೆ ಕೋವಿಡ್ -19 ನಂತಹ ಮಾರಕ ಖಾಯಿಲೆಯು ಬಂದಾಗ ನಮ್ಮ ಕರ್ತವ್ಯದ ಜೋತೆ ಕೋವಿಡ್-19 ಸೊಂಕಿತರ ಆರೈಕೆ, ವ್ಯಾಕ್ಸಿನ್ ಕೊಡುವುದರಲ್ಲಿ ಅತ್ಯಂತ ಯಶಸ್ವಿಯಾಗಿ ಕರ್ತವ್ಯವನ್ನು ನಿರ್ವಹಿಸುವುದರ ಜೋತೆಗೆ ಇಲಾಖೆ ಹಾಗೂ ಸರ್ಕಾರಕ್ಕೆಗೌರವವನ್ನು ತಂದು ಕೊಡುವುದರ ಜೋತೆಗೆ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಿರುತ್ತೇವೆ ಎಂದರು.
ಆದರೆ ಎನ್.ಹೆಚ್.ಎಂ. ಅಡಿಯಲ್ಲಿ ನಮ್ಮ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರಿಗೆ ಅಲ್ಪ ಮೊತ್ತದವೇತನವನ್ನು ಬಿಟ್ಟು ಇನ್ನಿತರೆ ಯಾವುದೇ ಸೌಲಭ್ಯವಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಈ ಕೇವಲ ರೂ.11000/- ಅಲ್ಪ ಮೊತ್ತದ ವೇತನದಲ್ಲಿ ಕೌಟುಂಬಿಕ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ಅದ್ದರಿಂದ ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದರು.
ನಾವು ಈಗಾಗಲೇ ಪತ್ತ ಚಳುವಳಿ ಸಹ ಮಾಡಿದ್ದೆವೆ ಎಂದರು.
ರಾಜ್ಯ ಸರ್ಕಾರ ನಮ್ಮಗಳ ಸೇವೆಯನ್ನು ಖಾಯಂ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಸಂತ್ ಕುಮಾರ್ ವೆಂಕಟೇಶ್, ರಾಜೇಶ್,ಮೇದಾ,ದಿವ್ಯಾ

Leave a Comment