ಫೆ.12 ರಂದು ದಶಮಾನೋತ್ಸವದ ಅಂಗವಾಗಿ ವಿಶೇಷ ಪ್ರಶಸ್ತಿ ಸಮಾರಂಭ: ನಾಗೇಶ ಹೆಗಡೆ ಅವರಿಗೆ' ಮಿಂಚು ಶ್ರೀನಿವಾಸ ಪ್ರಶಸ್ತಿ
ಶಿವಮೊಗ್ಗ: ಹಿರಿಯ ಪತ್ರಕರ್ತರಾಗಿದ್ದ ದಿ.ಮಿಂಚು ಶ್ರೀನಿವಾಸ ಅವರ ನೆನಪಿನಲ್ಲಿ ಕಳೆದ ಹತ್ತು ವರ್ಷದಿಂದ ಮಿಂಚು ಶ್ರೀನಿವಾಸ ಕುಟುಂಬ ವರ್ಗ ಧಾರವಾಡದ ಸಾಕಾರ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನದ ಸಹಯೋಗದಲ್ಲಿ ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನಾಗೇಶ
ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ನಾಗೇಶ ಹೆಗಡೆ ಅವರಿಗೆ' ಮಿಂಚು ಶ್ರೀನಿವಾಸ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸುನೀಲ್ ಕುಲಕರ್ಣಿ ಹೇಳಿದರು.
ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾವಾಣಿ ಹಾಗೂ ಇತರ ಪತ್ರಿಕೆಯಲ್ಲಿ ಜನವರ, ಪರಿಸರ ಹಾಗೂ ಅಭಿವೃದ್ಧಿ ವಿಷಯಗಳ ಮೇಲೆ ಅನೇಕ ಮೌಲ್ಯಯುತ ಲೇಖನ, ಅಂಕಣ ಬರಹಗಳನ್ನು ಅವರು ಬರೆಯುತ್ತಿದ್ದಾರೆ.
ದಶಮಾನೋತ್ಸವದ ಅಂಗವಾಗಿ ವಿಶೇಷ ಪ್ರಶಸ್ತಿ ಸಮಾರಂಭವನ್ನು ಫೆ.12 ರಂದು ರವಿವಾರ, ಸಂಜೆ 4.30ಕ್ಕೆ ಸುವರ್ಣ ಸಂಸ್ಕೃತಿ ಭವನ ಹೆಲಿಪ್ಯಾಡ್ ರಸ್ತೆ ,ಅಶೋಕ ನಗರ, ಶಿವಮೊಗ್ಗದಲ್ಲಿ ಅಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆ ಕಡೂರಿನ ಮಾಜಿ ಶಾಸಕರು ಸಮಾಜವಾದಿ ಶ್ರೀ ವೈ.ಎಸ್. .ವಿ.ದತ್ತಾ ಮಾಡಲಿದ್ದು, ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಿರಿಯ ಸಮಾಜವಾದಿಗಳು ಆದ ಶ್ರೀ ಕೋಣಂದೂರು ಲಿಂಗಪ್ಪ ವಹಿಸಲಿದ್ದಾರೆ ಎಂದರು.
ದಶಮಾನೋತ್ಸವದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುತ್ತಿದ್ದು, ಹಿರಿಯ ಸಾಹಿತಿ ನಾ. ಡಿಸೋಜ ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುತ್ತಾರೆ ಎಂದರು.
ಇದೇ ಸಂಧರ್ಬದಲ್ಲಿ ಬಂಕಾಪೂರದ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ, ದಿ. ದತ್ತಾತ್ರೇಯ ಕುಲಕರ್ಣಿ ಅವರ ನೆನಪಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (ಎಮ್. ಎ) ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಶಿಕ್ಷಣ ಸಿರಿ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಕುಮಾರ ಉಮೇಶ್ ಎನ್. ಅರ್. ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದರು.
ಕಾರ್ಯಕ್ರಮದ ವಿಶೇಷತೆಗಾಗಿ ಅಂತರ ರಾಷ್ಟ್ರೀಯ ಖ್ಯಾತಿಯ ಕುಚಿಪುಡಿ ಕಲಾವಿದರು ಹಾಗೂ ಕಿರುತೆರೆ ಕಲಾವಿದರಾದ ವಿದುಷಿ ಶ್ರೀಮತಿ ವೈಜಯಂತಿ ಕಾಶಿ ಹಾಗೂ ತಂಡ ಬೆಂಗಳೂರು ಅವರಿಂದ ವಿಶೇಷ ಕುಚಿಪುಡಿ ನೃತ್ಯ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥ ಎನ್ ಅಧ್ಯಕ್ಷರು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಂಪಾದಕರು ಕ್ರಾಂತಿ ದೀಪ ಪ್ರಾದೇಶಿಕ ಪತ್ರಿಕೆ ಹಾಗೂ ಸಾಕಾರದ ವಿದುಷಿ ನಾಗರತ್ನ ಹಡಗಲಿ ಮತ್ತು ಡಾ ಶುಭದಾ ಸಿ ಉಪಸ್ಥಿತರಿರುತ್ತಾರೆ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ರಾದ ಎನ್. ಮಂಜುನಾಥ್ ಮಾತನಾಡುತ್ತಾ ಮಿಂಚು ಪತ್ರಿಕೆ, ಮಿಂಚು ಶ್ರೀನಿವಾಸ್ ಬಗ್ಗೆ ಸುದೀರ್ಘವಾಗಿ ಮಾತನಾಡಿ,ಮಿಂಚು ಶ್ರೀನಿವಾಸ್ ನಡೆದು ಬಂದ ದಾರಿ, ಸಮಾಜವಾದಿ ಸಿದ್ದಾಂತ ಒಲವು,ಮಿಂಚು ಪತ್ರಿಕೆಯಲ್ಲಿ ಬಂದ ಸುದ್ದಿಯ ಬಗ್ಗೆ ಹಲವು ಘಟನೆಗಳನ್ನು ಸುದ್ದಿಯನ್ನು ಮೆಲುಕು ಹಾಕಿದರು.ಪತ್ರಿಕೋದ್ಯಮ ದಲ್ಲಿ ಮಿಂಚುಶ್ರೀನಿವಾಸ್ ಪತ್ರಕರ್ತರಾಗಿ ಉದಯೋನ್ಮುಖ ಬರಹಗಾರರಾಗಿ ಬಹಳ ಹೆಸರು ಮಾಡಿದವರು ಎಂದು ಅವರನ್ನ ಹೊಗಳಿದರು. ಅವರ ಒಡನಾಟವನ್ನ ನೆನಪಿಸಿಕೊಂಡರು.ಎಲ್ಲರೂ ತಪ್ಪದೇ ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ವಿನಂತಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಿಂಚು ಕುಟುಂಬದ ಸದಸ್ಯರು ರವಿಕುಮಾರ್,ಶ್ರೀಮತಿ ಜ್ಯೋತಿ ರವಿಕುಮಾರ್,ಪ್ರಸಾದ್,ಸುರಭಿ, ಗಣೇಶ್ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

Leave a Comment