ಮುಂಬರುವ *ಕರ್ನಾಟಕ ವಿಧಾನ ಸಭಾ ಸಾರ್ವರ್ತಿಕ ಚುನಾವಣೆ* ಹಿನ್ನೆಲೆ ಸೂಕ್ಷ್ಮ ಸ್ಥಳದಲ್ಲಿ RAF ಪಥಸಂಚಲನ

 ಶಿವಮೊಗ್ಗ: ಮುಂಬರುವ *ಕರ್ನಾಟಕ ವಿಧಾನ ಸಭಾ ಸಾರ್ವರ್ತಿಕ ಚುನಾವಣೆ* ಹಿನ್ನೆಲೆಯಲ್ಲಿ Rapid Action Force (RAF) ಕಂಪನಿಗಳಿಗೆ  ಜಿಲ್ಲೆಯ *ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳ ಪರಿಚಯ (Area Familiarization) ಕ್ಕಾಗಿ* 
ಈ ದಿನ ದಿನಾಂಕಃ-18-01-2023 ರಂದು  ಬಾಲರಾಜ್,* ಡಿವೈಎಸ್.ಪಿ, ಶಿವಮೊಗ್ಗ-ಬಿ ಉಪ ವಿಭಾಗ ಮತ್ತು *ನಯನ ನಂದಿ,* ಡೆಪ್ಯುಟಿ ಕಮಾಂಡೆಂಟ್, RAF ರವರ ನೇತೃತ್ವದಲ್ಲಿ Familiarization Exircises ಪಥಸಂಚಲನವನ್ನು ಮಾಡಲಾಯಿತು.
ಶಿವಮೊಗ್ಗ ನಗರದ *ತುಂಗಾನಗರ ಪೊಲೀಸ್ ಠಾಣಾ* ವ್ಯಾಪ್ತಿಯ ಕೆಳಗಿನ ತುಂಗಾನಗರದಿಂದ ಪ್ರಾರಂಭಿಸಿ ಕೆ.ಕೆ ಶೆಡ್, ಪದ್ಮಾ ಟಾಕೀಸ್, ಟಿಪ್ಪೂನಗರ ಹಾಗೂ *ದೊಡ್ಡಪೇಟೆ ಪೊಲೀಸ್ ಠಾಣಾ*  ವ್ಯಾಪ್ತಿಯ ವಿಜಯಾ ಗ್ಯಾರೇಜ್, ಗಜಾನನ ಗೇಟ್, ಸೀಗೇಹಟ್ಟಿ, ಕುಂಬಾರ ಬೀದಿ, ಕೆಆರ್ ಪುರಂ, ಸಿದ್ಯಯ್ಯ ಸರ್ಕಲ್, ಎಂಕೆಕೆ ರಸ್ತೆ, ಎಎ ಸರ್ಕಲ್ ಮತ್ತು *ಕೋಟೆ ಪೊಲೀಸ್ ಠಾಣಾ* ವ್ಯಾಪ್ತಿಯ ಎಸ್ ಎನ್ ಸರ್ಕಲ್, ಗಾಂಧಿ ಬಜಾರ್, ಅಶೋಕಾ ರಸ್ತೆ, ಶಿವಾಜಿ ರಸ್ತೆ, ಲಕ್ಷರ್ ಮೊಹಲ್ಲಾ, ಓಲ್ಡ್ ಬಾರ್ ಲೈನ್ ರಸ್ತೆ ಮುಖಾಂತರ ಬಂದು ಕೋಟೆ ಪೊಲೀಸ್ ಠಾಣೆಯ ಹತ್ತಿರ *ಮುಕ್ತಾಯ ಮಾಡಲಾಗಿರುತ್ತದೆ.* ಸದರಿ ಪಥಸಂಚಲನದಲ್ಲಿ   ನವೀನ್ ಕುಮಾರ್, ಅಸಿಸ್ಟೆಂಟ್ ಕಮಾಂಡೆಂಟ್* RAF, ಪಿಐ ತುಂಗಾನಗರ, ಪಿಐ ದೊಡ್ಡಪೇಟೆ ಮತ್ತು ಪಿಐ ಕೋಟೆ ಹಾಗೂ ಪಿಎಸ್ಐ ಮತ್ತು ಸಿಬ್ಬಂಧಿಗಳು ಹಾಗೂ *Rapid Action Force (RAF)ನ ಅಧಿಕಾರಿ ಸಿಬ್ಬಂಧಿಗಳು ಭಾಗವಹಿಸಿದ್ದರು.*

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.