ಕಾರಿನ ಲೋನ್ ಕಟ್ಟದೇ ಫೈನಾನ್ಸ್ ಗೆ ಮೋಸ ಮಾಡುವ ಸಲುವಾಗಿ ಕಾರ್ ಕಳ್ಳತನ ಎಂದು ದೂರು ಕೊಟ್ಟ ಪಿರ್ಯಾದಿ ಮತ್ತೋಬ್ಬ ಅರೆಸ್ಟ್

ಶಿವಮೊಗ್ಗ: ದಿನಾಂಕಃ-06-05-2022 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ *ಸೂಳೆಬೈಲಿನಲ್ಲಿ  ನಿಲ್ಲಿಸಿದ್ದ ತಮ್ಮ ಟೊಯೋಟಾ ಯಾರಿಸ್ ಕಾರನ್ನು ಯಾರೋ ಕಳ್ಳರು ಕಳ್ಳತನ* ಮಾಡಿಕೊಂಡು ಹೋಗಿರುತ್ತಾರೆಂದು ಚಂದ್ರುಕುಮಾರ್ ರವರು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0221/2022  ಕಲಂ 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತದೆ.

       ಸದರಿ ಪ್ರಕರಣದ ತನಿಖೆ ಕೈಗೊಂಡ ಮಂಜುನಾಥ್ ಬಿ ಪಿಐ ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದ ದೂದ್ಯಾನಾಯ್ಕ್ ಪಿಎಸ್ಐ, ಮನೋಹರ್ ಎಎಸ್ಐ, ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಸಿಪಿಸಿ ನಾಗಪ್ಪ ಎ, ಹರೀಶ್ ನಾಯ್ಕ ಮತ್ತು ಹರಿಹಂತ ಶಿರಹಟ್ಟಿ ರವರುಗಳನ್ನೊಳಗೊಂಡ ತಂಡವು ದಿನಾಂಕಃ-06-01-2023  ರಂದು ಆರೋಪಿತರಾದ *1)ಚಂದ್ರುಕುಮಾರ್, 28 ವರ್ಷ, ವಿಧ್ಯಾನಗರ, ಶಿವಮೊಗ್ಗ ಟೌನ್ ಮತ್ತು 2) ಪ್ರಶಾಂತ್ ಜಿ, 29 ವರ್ಷ, ಸರಸ್ವತಿ ನಗರ, ದಾವಣಗೆರೆ* ರವರುಗಳನ್ನು ದಸ್ತಗಿರಿ ಮಾಡಿರುತ್ತಾರೆ.

        ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ  1ನೇ ಆರೋಪಿಯಾದ ಚಂದ್ರುಕುಮಾರ್ ಈತನು ಸದರಿ ಪ್ರಕರಣದ ಪಿರ್ಯಾದಿಯಾಗಿದ್ದು, 2ನೇ ಆರೋಪಿಯಾದ ಪ್ರಶಾಂತ್ ಜಿ ಈತನೊಂದಿಗೆ ಸೇರಿ ಒಳಸಂಚು ರೂಪಿಸಿಕೊಂಡು *ತನ್ನ ಕಾರಿನ ಮೇಲಿದ್ದ ಲೋನ್ ಅನ್ನು ಕಟ್ಟದೇ ಫೈನಾನ್ಸ್ ಗೆ ಮೋಸ ಮಾಡುವ ಮತ್ತು ಕಾರಿನ ಇನ್ಸೂರೆನ್ಸ್* ಪಡೆಯುವ ಸಲುವಾಗಿ ತನ್ನ ಮಾಲೀಕತ್ವದ ಟೊಯೋಟಾ ಯಾರಿಸ್ ಕಾರನ್ನು  ಪ್ರಶಾಂತ್ ಜಿ ಗೆ ನೀಡಿ ದಾವಣಗೆರೆಗೆ ಕಳುಹಿಸಿಕೊಟ್ಟು ನಂತರ ಸದರಿ *ಕಾರ್ ನಂಬರ್ ಪ್ಲೇಟ್ ಅನ್ನು ಬದಲಾವಣೆ ಮಾಡಿಸಿ 1ನೇ ಆರೋಪಿ ಚಂದ್ರುಕುಮಾರ್ ನು ಠಾಣೆಗೆ ಬಂದ ತನ್ನ ಕಾರನ್ನು ಯಾರೋ ಕಳ್ಳರು ಕಳ್ಳತನ* ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿರುವುದು ವಿಚಾರಣೆಯಲ್ಲಿ ಕಂಡು ಬಂದಿರುತ್ತದೆ. ನಂತರ ಸದರಿ ಪ್ರಕಣದ *ಟೊಯೋಟಾ ಯಾರಿಸ್ ಕಾರನ್ನು ಅಮಾನತ್ತು* ಪಡಿಸಿಕೊಳ್ಳಲಾಗಿದೆ.

       ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಕರಣದ *ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಶ್ಲಾಘಿಸಿ* ಪ್ರಶಂಸಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.