ಪೋಕ್ಸೋ ಪ್ರಕರಣ ಆರೋಪಿಗೆ ಶಿಕ್ಷೆ: ತನಿಖಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಎಸ್ಪಿ
ಶಿವಮೊಗ್ಗ ಜಿಲ್ಲೆಯ *ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ 2021ನೇ ಸಾಲಿನಲ್ಲಿ ವರದಿಯಾದ ಪೋಕ್ಸೋ* ಪ್ರಕರಣದಲ್ಲಿ ಶ್ರೀ ಲಕ್ಷ್ಮೀಪತಿ ಆರ್. ಎಲ್ ರವರು ತನಿಖಾಧಿಕಾರಿಗಳಾಗಿ ಮತ್ತು ಶ್ರೀ ಪ್ರಸನ್ನ ಸಿಹೆಚ್.ಸಿ ರವರು ಸಹಾಯಕ ತನಿಖಾಧಿಕಾರಿಗಳಾಗಿ ಹಾಗೂ *ಹೊಸನಗರ ಪೊಲೀಸ್ ಠಾಣೆಯಲ್ಲಿ 2022ನೇ ಸಾಲಿನಲ್ಲಿ ವರದಿಯಾದ ಪೋಕ್ಸೋ* ಪ್ರಕರಣದಲ್ಲಿ ಶ್ರೀ ಮಹೇಶ್, ಸಿಪಿಸಿ ರವರು ಸಹಾಯಕ ತನಿಖಾಧಿಕಾರಿಗಳಾಗಿ ಕತವ್ಯ ನಿರ್ವಹಿಸಿರುತ್ತಾರೆ ಸದರಿ ಎರಡೂ ಪ್ರಕರಣಗಳಲ್ಲಿ *ಸರ್ಕಾರಿ ಅಭಿಯೋಜಕರಾದ ಶ್ರೀ ಹರಿಪ್ರಸಾದ್* ರವರು ಸರ್ಕಾರದ ಪರವಾಗಿ ಘನ ನ್ಯಾಯಾಲಯದಲ್ಲಿ ವಾದ ಮಂಡಿಸಿಡದ್ದು. ಸದರಿ ಎರಡೂ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಇವರುಗಳು ಪ್ರಮುಖ ಪಾತ್ರ ವಹಿಸಿದ್ದು ಇವರ ಈ ಉತ್ತಮ ಕಾರ್ಯಕ್ಕೆ ಈ ದಿನ ದಿನಾಂಕಃ 12-01-2023 ರಂದು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು, ಜಿಲ್ಲಾ ಪೊಲೀಸ್ ಕಛೇರಿಯಲ್ಲಿ *ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿ* ಗೌರವಿಸಿದರು.
ಈ ಸಂದರ್ಭದಲ್ಲಿ *ಪೊಲೀಸ್ ಉಪಾಧೀಕ್ಷಕರು, ಡಿಸಿಆರ್.ಬಿ* ವಿಭಾಗ ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ ರವರು ಉಪಸ್ಥಿತರಿದ್ದರು.
Leave a Comment