ಹೊಸನಗರ ; ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ
ಬೆಳಿಗ್ಗೆ 8ಗಂಟೆಗೆ ಹೊಸನಗರದ ಗಣಪತಿ ದೇವಸ್ಥಾನದ ಮುಂಭಾಗ ಮಾರಿಯಮ್ಮನವರ ಮೂರ್ತಿಗೆ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಮಾರಿಯಮ್ಮನವರಿಗೆ ಕೃಷ್ಣಮೂರ್ತಿ ಭಟ್ ಮತ್ತು ಸಹೋದರರಿಂದ ಪೂಜೆ ಸಲ್ಲಿಸಿ ಶಿವಪ್ಪನಾಯಕ ರಸ್ತೆಯ ಮಾರ್ಗವಾಗಿ ಶ್ರೀ ದುರ್ಗಾಂಬಾ ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕ ಪೂಜೆಗೆ ದುರ್ಗಾಂಬಾ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಟಾಪಿಸಲಾಯಿತು.
ಜನವರಿ 25 ಬುಧವಾರದಿಂದ ಮಾರಿಯಮ್ಮನವರ ಗಂಡನ ಮನೆಯೆಂದೇ ಕರೆಸಿಕೊಳ್ಳುವ ಮಾರಿಗುಡ್ಡದಲ್ಲಿರುವ ಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ 8 ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ನಡೆಸಲಾಗುವುದು. ಬುಧವಾರ ಬೆಳಿಗ್ಗೆ 9ಗಂಟೆಯಿಂದ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಸಾರ್ವಜನಿಕರು ಹಾಗೂ ಭಕ್ತಾಧಿಗಳು ಅಮ್ಮನವರಿಗೆ ಮಂಗಳಾರತಿ ಪೂಜೆ ಸಲ್ಲಿಸುವುದರ ಜೊತೆಗೆ ಪ್ರತಿದಿನ ಸಂಜೆ 8ಗಂಟೆಯಿಂದ ಸಾರ್ವಜನಿಕರ ಮನೋರಂಜನೆಗಾಗಿ ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಲಾ ಮಕ್ಕಳಿಂದ ವಿವಿಧ ಬಗೆಯ ಪೀರಮಿಡ್ ರಚನೆ ಹಾಡು ಡ್ಯಾನ್ಸ್ ಗಳು ನೃತ್ಯಗಳು ಪರ ಸ್ಥಳದಿಂದ ಆಗಮಿಸಿದ ಕಲಾವಿದರಿಂದ ಆರ್ಕೆಸ್ಟ್ರಾಗಳು ನಡೆಯುವುದರ ಜೊತೆಗೆ ವಿವಿಧ ಬಗೆಯ ಮನರಂಜನೆಯ ಆಟಗಳಾದ ಬ್ರೇಕ್ ಡ್ಯಾನ್ಸ್, ನಾಯಿಯಿಂದ ಸಾಹಸಗಳು ತೊಟ್ಟಿಲುಗಳು ಇತರೆ ಆಟದ ಸಾಮಾಗ್ರಿಗಳು ಆಗಮಿಸಿದೆ.
ಒಟ್ಟಾರೇ 8ದಿನಗಳ ಕಾಲ ಹೊಸನಗರ ಮಾರಿಜಾತ್ರೆ ಅದ್ದೂರಿಯಾಗಿ ನಡೆಯಲಿದೆ.
Leave a Comment