ತೀರ್ಥಹಳ್ಳಿ ಮಂಡಗದ್ದೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಶ್ರೀ ಜಯಚಾಮರಾಜೇಂದ್ರ ಆಸ್ಪತ್ರೆಗೆ ಲೋಕಾಯುಕ್ತರ ಭೇಟಿ -ಪರಿಶೀಲನೆ
ಶಿವಮೊಗ್ಗ: ಜ.7 ರಂದು ಶ್ರೀ. ಬಿ.ಎಸ್ ಪಾಟೀಲ್, ಗೌರವಾನ್ವಿತ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಶ್ರೀ ಜಯಚಾಮರಾಜೇಂದ್ರ, ತಾಲ್ಲೂಕು ಆಸ್ಪತ್ರೆ, ತೀರ್ಥಹಳ್ಳಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
ಅಲ್ಲಿನ ರೋಗಿಗಳ ಸಮಸ್ಯೆಗಳ ಬಗ್ಗೆ ಆಲಿಸಿದ್ದು, ಸಮಸ್ಯೆಗಳನ್ನು ನಿವರಿಸಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ ಹಾಗೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡುವಂತೆ ಸೂಚನೆ ನೀಡಿರುತ್ತಾರೆ.ಈ ಪರಿಶೀಲನೆ ಸಮಯದಲ್ಲಿ ಅಧಿಕಾರಿಗಳಾದ ಶ್ರೀ ಎನ್. ವಾಸುದೇವರಾಮ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ, ಎನ್. ಮೃತ್ಯುಂಜಯ, ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ, ಶ್ರೀ ಹೆಚ್.ಎಂ ಜಗನ್ನಾಥ ಮತ್ತು ಶ್ರೀ. ಹೆಚ್, ರಾಧಾಕೃಷ್ಣ, ಪೊಲೀಸ್ ಇನ್ಸ್‌ಪೆಕ್ಟರ್, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಹಾಗೂ ಸಿಬ್ಬಂದಿಯವರು ಹಾಜರಿರುತ್ತಾರೆ.

Leave a Comment