ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಡಿಎಸ್‌ಎಸ್‌ನಿಂದ ಪ್ರತಿಭಟನೆ; ಡಿಸಿಗೆ ಮನವಿ

ಶಿವಮೊಗ್ಗ: ಕಳೆದ 10 ವರ್ಷ ಗಳಿಂದ ನೆನೆಗುದಿಗೆ ಬಿದ್ದಿರುವ ನ್ಯಾಯಮೂರ್ತಿ ಸದಾಸಿದ ಆಯೋಗ ವರದಿ ಜಾರಿಗೊಳಿಸುವಂತೆ ಮತ್ತುಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು
ಇಂದು ಬೆಳಗ್ಗೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
 ರಾಜ್ಯದ ದಲಿತ ಸಂಘರ್ಷ ಸಮಿತಿ ಮತ್ತು ಜನಪರ ಸಂಘಟನೆಗಳು ಒಂದಾಗಿ ಪರಿಶಿಷ್ಟ ಜಾತಿ, ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಚಳುವಳಿ ರೂಪಿಸಿದ್ದರ
ಪರಿಣಾಮವಾಗಿ ಆಗಿನ ಧರ್ಮ ಸಿಂಗ್ ಸರ್ಕಾರ  ಆಯೋಗ ರಚನೆ ಮಾಡಿದ್ದು, ನ್ಯಾಯಮೂರ್ತಿ ಸದಾಶಿವ ಅವರು ಏಳು ವರ್ಷಗಳ ಕಾಲ ಪರಿಶಿಷ್ಟರ ಸಾಮಾಜಿಕ ಶೈಕ್ಷಣಿಕ ಉದ್ಯೋಗದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ 2011 ರಲ್ಲಿಯೇ ಸರ್ಕಾರಕ್ಕೆ ವತದಿ ನೀಡಿತ್ತು. 10 ವರ್ಷ ಗಳಾದರೂ ಯಾವ ಸರ್ಕಾರಗಳು ಅಂಗೀಕರಿಸಿ ಕೇಂದ್ರಕ್ಕೆ ಸಲ್ಲಿಸಿಲ್ಲ ಎಂದು ದೂರಿದರು. 
ಸರ್ಕಾರ ಕೂಡಲೇ ಸದಾಶಿವ ಆಯೋಗ ವರದಿಯನ್ನು ಅಂಗೀಕರಿಸಿ 41(೨)ಕ್ಕೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು. ಹಾಗೆಯೇ ಪರಿಶಿಷ್ಟರ ಭೂ ಪರಭಾರೆ ನಿಷೇಧ ಕಾಯಿದೆಗೆ ತಿದ್ದುಪಡಿ ತರಬೇಕು, ಪರಿಶಿಷ್ಟರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಮೇಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು,  ಯೋಜನೆ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
 ಪ್ರತಿಭಟನೆಯಲ್ಲಿ  ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಪ್ರಮುಖರಾದ ಶಿವಬಸಪ್ಪ, ಏಳುಕೋಟಿ, ರಮೇಶ್ ಚಿಕ್ಕಮರಡು, ರವಿ ಹರಿಗೆ, ಶಾಂತನ್ನು ಸೂಗೂರು, ಬೊಮ್ಮನಕಟ್ಟೆ ಕೃಷ್ಣ, ಯಡವಾಲ ಹನುಮಂತಪ್ಪ, ಅಶೋಕ ಜೀನಹಳ್ಳಿ ಮತ್ತಿತರರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.