ನಾಗರೀಕನಾದವನ ಮೊದಲ ಸಾಮಾಜಿಕ ಕಾರ್ಯವೆಂದರೆ ಆತ ಕಾನೂನನ್ನು ಪಾಲಿಸಬೇಕು: ಲೆಕ್ಕ ಪರಿಶೋಧಕರು ಮತ್ತು ನಾಗರೀಕ ಹಿತ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್
ಶಿವಮೊಗ್ಗ: ನಾಗರೀಕನಾದವನ ಮೊದಲ ಸಾಮಾಜಿಕ ಕಾರ್ಯವೆಂದರೆ ಆತ ಕಾನೂನನ್ನು ಪಾಲಿಸಬೇಕು ಮತ್ತು ಗೌರವಿಸಬೇಕು
ಅವರು ಇಂದು
ಶಿವಮೊಗ್ಗ ನಗರದ
ಸಹ್ಯಾದ್ರಿ ಕಲಾ ಕಾಲೇಜ್,
ಪ್ರಥಮ ವರ್ಷದ ಬಿ.ಏ. ವಿದ್ಯಾರ್ಥಿಗಳಿಗೆ ಸಮಾಜದ ಶಾಸ್ತ್ರದ ತೃತೀಯ ಬಿ.ಏ.ವಿದ್ಯಾರ್ಥಿಗಳು ಏರ್ಪಡಿಸಿದ್ದ
ಪ್ರತಿಯೊಬ್ಬ ಪ್ರಜೆಯು ಅಯಾ ದೇಶದ ಕಾನೂನನ್ನು ಚಾಚೂ ತಪ್ಪದೆ ಪಾಲಿಸಿದರೆ ಅದರಂತಹ ಸಮಾಜಮುಖಿ ಕಾರ್ಯಕ್ರಮ ಮತ್ತೊಂದಿಲ್ಲ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಒಂದು ದೇಶ ಪ್ರಗತಿಯತ್ತ ಸಾಗಬೇಕೆಂದರೆ ಎಲ್ಲಿ ಅನ್ಯಾಯ ನಡೆಯುತ್ತದೆಯೋ, ಎಲ್ಲಿ ತಪ್ಪು ನಡೆಯುತ್ತದೆಯೋ ಅಂತಹ ಸಂದರ್ಭದಲ್ಲಿ ಯಾವುದೇ ಅಳುಕಿಲ್ಲದೆ ಎಚ್ಚರಿಸುವಂತಹ ಕೆಲಸ ನಾವು ಮಾಡಬೇಕು. ಎಷ್ಟೊಂದು ನಾಗರೀಕತೆಗಳು ಇಂದು ಕಣ್ಮರೆಯಾಗಿದೆ ಕಾರಣ ಆಗಿನ ಆಡಳಿತಗಾರರ ದುರ್ನಡೆತೆಯನ್ನು ಎಚ್ಚರಿಸದೇ ಇದ್ದದ್ದು. ಈಗ ನೀವು ಸಮಾಜ ಶಾಸ್ತ್ರದ ವಿದ್ಯಾರ್ಥಿಗಳು ನಿಮ್ಮ ಜವಾಬ್ದಾರಿ ಕೇವಲ ಓದಿಗೆ ಮೀಸಲಿರದೇ ಓದಿನ ಜೊತೆ ಜೊತೆಯಲ್ಲೇ ಸಮಾಜದ ಓರೆ ಕೋರೆಗಳನ್ನು ತಿದ್ದುವಂತಹ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಹಾಗೂ ಯೂಥ್ ಹಾಸ್ಟೆಲ್ ಮತ್ತು ಚೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳಾದ ಜಿ ವಿಜಯಕುಮಾರ್ ಅವರು ವಿದ್ಯಾರ್ಥಿಗಳಿಗೆ ಹಾಡಿನ ಮೂಲಕ ಸಮಾಜದಲ್ಲಿ ನಮ್ಮ ಸೇವೆ ಹೇಗಿರಬೇಕು ಎಂಬುದನ್ನ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾಕ್ಟರ್ ಕೃಪಾಲಿನಿ, ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ಎನ್.ಮಂಜುನಾಥ್ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್. ಕೆ. ಬಿ. ಧನಂಜಯ ವಹಿಸಿದ್ದರು.
ತೃತಿಯ ಬಿಎ ವಿದ್ಯಾರ್ಥಿ ಕೀರ್ತಿ ನಾಯಕ್ ಸ್ವಾಗತಿಸಿದರು.
ಕುಮಾರಿ ಪಂಕಜ, ತೃತೀಯ ಬಿಎ ವಿದ್ಯಾರ್ಥಿನಿ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ತೃತೀಯ ಬಿ.ಏ. ವಿದ್ಯಾರ್ಥಿ ಅ.ನಾ. ವಿಜಯೇಂದ್ರ ರಾವ್ ಮಾಡಿದರು.
Leave a Comment