ಜ. 8 ರಂದು ಬೆಂಗಳೂರು ದಕ್ಷಿಣ ಸಂಸದ -ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಶಿವಮೊಗ್ಗಕ್ಕೆ ಆಗಮನ: ಹೊಯ್ಸಳ ಫೌಂಡೇಶನ್‌ನ ಕಾರ್ಯಕ್ರಮದಲ್ಲಿ ಭಾಗಿ

ಶಿವಮೊಗ್ಗ:ನಮ್ಮ ಸಹಸಂಸ್ಥೆ ಹೊಯ್ಸಳ ಫೌಂಡೇಶನ್‌ನ ಸೇವಾ ಯೋಜನೆ ಹೊಯ್ಸಳ ಹೆಲ್ತ್ ಕೇರ್ (ಡಯಾಲಿಸಿಸ್ ಆಸ್ಪತ್ರೆ)  ಸಾರ್ವಜನಿಕ ಸೇವೆಗೆ ಸದಾಸಿದ್ದ ಕಳೆದ 5 ವರ್ಷಗಳಲ್ಲಿ 8000 ಕ್ಕೂ ಹೆಚ್ಚು ಡಯಾಲಿಸಿಸ್‌ ಚಿಕಿತ್ಸೆಯನ್ನು ಮಾಡಲಾಗಿದೆ. ಕರೋನ ಸಮಯದಲ್ಲಿ 1200ಕ್ಕೂ ಹೆಚ್ಚು ಡಯಾಲಿಸಿಸ್‌ ಸೇವೆಯನ್ನು ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತವಾಗಿ ಮಾಡಿದ್ದೇವೆ. ಎಲ್ಲಾ ಸೇವೆಗಳು ಸುಲಭ ದರದಲ್ಲಿ ದೊರಕುತ್ತಿದೆ. ಆರೋಗ್ಯ ಕ್ಷೇತ್ರದ ಪರಿಣಿತ ವೈದ್ಯರು, ಸೇವಾ ಸಂಸ್ಥೆಗಳು ನಮ್ಮ ಯೋಜನೆಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ಹೊಯ್ಸಳ ಫೌಂಡೇಷನ್ ಅಧ್ಯಕ್ಷ ಎಂ.ಶಂಕರ್ ಹೇಳಿದರು.
ಇಂದು ಬೆಳಿಗ್ಗೆ ಜ್ಯೂವಲ್ ರಾಕ್ ಹೋಟೆಲ್ ಮಿಲನ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೊಯ್ಸಳ ಫೌಂಡೇಷನ್ ಸಹ ಸಂಸ್ಥೆಯ ನಾಮಫಲಕ ಉದ್ಘಾಟನೆ ಕಾರ್ಯಕ್ರಮಕ್ಕೆ ಜ.8 ರಂದು ಬೆಳಿಗ್ಗೆ ಬರಲಿದ್ದಾರೆ ಎಂದರು.

ಹೊಯ್ಸಳ ಕೋ-ಆಪರೇಟಿವ್ ಸೊಸೈಟಿ ಒಟ್ಟು 6 ಸಾವಿರ ಮಹಿಳಾ ಸದಸ್ಯರುಗಳಿಗೆ 30 ಕೋಟಿ ಸಾಲ ವಿತರಿಸಲಾಗಿದೆ ‌ಡಯಾಲಿಸಿಸ್, ಆರೋಗ್ಯ ಸಂಬಂಧಿ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯರು, ನುರಿತ ಸಿಬ್ಬಂದಿಗಳ ನೆರವಿನೊಂದಿಗೆ ಅತ್ಯುತ್ತಮ ಸೇವೆ ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಗೆ ಉದಾರವಾಗಿ ದೇಣಿಗೆಯನ್ನು ಬ್ಯಾಂಕ್ ಮತ್ತು ದಾನಿಗಳು ನೀಡಿದ್ದಾರೆ ಎಂದರು.

ಶಿವಮೊಗ್ಗದ ಕುವೆಂಪು ಬಡಾವಣೆಯಲ್ಲಿ 27000 ಚದರ ಅಡಿ ನಿವೇಶನವನ್ನು ಹೊಂದಿದೆ. ಈ ನಿವೇಶನದಲ್ಲಿ 200 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 50 ಚದರ ಅಳತೆಯ ಸರ್ವಸಜ್ಜಿತ ಹೊಯ್ಸಳ ಹೆಲ್ತ್ ಕೇರ್ ಯೋಜನೆಯನ್ನು ರೂಪಿಸಿದ್ದೇವೆ. ಸಾರ್ವಜನಿಕರ ಆರ್ಥಿಕ ಅಗತ್ಯಗಳನ್ನು ಪೂರೈಸುವುದರಲ್ಲಿ ಸಹಕಾರಿ ಸಂಘಗಳು ಮಹತ್ತರ ಪಾತ್ರವನ್ನು ವಹಿಸಿವೆ. ಎಲ್ಲರನ್ನೂ ಒಳಗೊಂಡು ಅತ್ಯಂತ ಆಪ್ತ ಮತ್ತು ವೈಯಕ್ತಿಕ ಸಂಬಂಧದೊಂದಿಗೆ ಸಹಕಾರಿ ಸಂಸ್ಥೆಯನ್ನು ರೂಪಿಸ ಬೇಕೆಂಬ ಆಶಯದೊಂದಿಗೆ ಹೊಯ್ಸಳ ಕರ್ನಾಟಕ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತವನ್ನು ಸ್ಥಾಪಿಸ ಲಾಗಿದೆ. ನಮ್ಮ ಸಹಕಾರಿಯಲ್ಲಿ ಸದಸ್ಯರ ಅವಶ್ಯಕತೆಗಳಿಗೆ ಮೊದಲ ಆದ್ಯತೆ. ಪರಸ್ಪರ ಸಹಕಾರದ ಸಿದ್ಧಾಂತದೊಂದಿಗೆ ನಮ್ಮ ಸಹಕಾರಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಹಕಾರಿಯ ಪ್ರಯೋಜನಗಳು
ಸದಸ್ಯರ ವಿವಿಧ ರೀತಿಯ ಅಗತ್ಯಗಳಿಗೆ ತಕ್ಕಂತಹ ಸಾಲ ವಿತರಿಸುವುದು. 
ಸಾಲಗಳು. 
ವಾಹನ ಖರೀದಿ ಸಾಲ, ಸ್ಥಿರ ಆಸ್ತಿ- ಅಡಮಾನ  ಗೃಹನಿರ್ಮಾಣ ಸಾಲಗಳನ್ನು ವಿತರಿಸುವುದು. 
ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಸಾಲಗಳು. 
ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಸಾಲಗಳು. ಸದಸ್ಯರ ನಿತ್ಯ ನಿಧಿ ಯೋಜನೆ. 
ಕನಿಷ್ಟ ಸಾಲದ ಅಗತ್ಯವಿರುವ ಬೀದಿಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಕುಶಲಕರ್ಮಿಗಳಿಗೆ ಹೊಯ್ಸಳ 'ಜನ್‌ಧನ್' ಯೋಜನೆ,ಹೊಯ್ಸಳ 'ಸ್ತ್ರೀಧನ್' – ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ  ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.

ಆರೋಗ್ಯ ರಕ್ಷಣೆ, ಬಡತನ ನಿರ್ಮೂಲನೆ, ಆರ್ಥಿಕ ಸೇರ್ಪಡೆ ಮತ್ತು ಸಾಕ್ಷರತೆ, ಆಯುರ್ವೇದಿಕ್ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ಮಹಿಳಾ ಸಬಲೀಕರಣ, ಡಯಾಲಿಸೀಸ್ ಚಿಕಿತ್ಸೆ ಮುಂತಾದ ಸೇವಾ ಕಾರ್ಯಗಳನ್ನು ಮಾಡಲಾಗಿದೆ ಎಂದರು.

 ಪೌಷ್ಠಿಕಯುಕ್ತ 1 ಸಾವಿರದ ಆಹಾರದ ಪೊಟ್ಟಣಗಳನ್ನು ಬಿಪಿಎಲ್ ಕುಟುಂಬಗಳಿಗೆ ಲಾಕೌಡೌನ್ ಸಮಯದಲ್ಲಿ ವಿತರಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಯು.ಎಸ್, ಕೇಶವಮೂರ್ತಿ,ಉಪಾಧ್ಯಕ್ಷರು, ಎನ್.ಎಮ್.ರಘುರಾಮ್,ಕೆ‌ವಿ.ಗಿರೀಶ್,ಎಸ್.ವಿ.ರಮೇಶ್,ಎಮ್.ವಿ.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.