ಶಿವಮೊಗ್ಗದಲ್ಲಿ 74 ನೇ ಗಣರಾಜ್ಯೋತ್ಸವ ಸಂಭ್ರಮ:ಧ್ವಜಾರೋಹಣವನ್ನ ನೇರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ

ಶಿವಮೊಗ್ಗ: ಶಿವಮೊಗ್ಗದಲ್ಲಿ 74 ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ಡಿಎಆರ್ ಗ್ರೌಂಡ್ ನಲ್ಲಿ  ಧ್ವಜಾರೋಹಣವನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ನೆರವೇರಿಸಿದರು.ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು.
 ಸಮಸ್ತ ನಾಡಿನ ಜನತೆಗೆ 74ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ನಮ್ಮ ಸರ್ಕಾರ ವಿವಿಧ ಅಮೃತ್ ಯೋಜನೆಗಳು, ಮುಖ್ಯಮಂತ್ರಿ ರೈತ ವಿದ್ಯಾನಿಥಿ ಯೋಜನೆ, ರೈತಶಕ್ತಿ ಯೋಜನೆಯಡಿ ಡೀಸೆಲ್ ಸಹಾಯಧನ, ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ದ್ವಿತಳ ರೇಷ್ಮೆಗೂಸಿಗೆ ಪ್ರೋತ್ಸಾಹ ಧನ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವಲಿಗೆ ಜಮೀನು ಒದಗಿಸುವ ಭೂಚೇತನ ಯೋಜನೆಯ ಘಟಕ ವೆಚ್ಚ ಹೆಚ್ಚಳ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ 4 ಜಿಲ್ಲೆಗಳಲ್ಲಿ ತಲಾ ಒಂದು ಶ್ರೀ ನಾರಾಯಣಗುರು ವಸತಿ ಶಾಲೆ ಪ್ರಾರಂಭ, ಪುಣ್ಯಕೋಟಿ ದತ್ತು ಯೋಜನೆ, ರೈತರಿಗೆ ಬೆಳೆಹಾನಿ ಪಲಿಹಾರ ವಿತರಣೆ, ಮಹಿಳೆಯರ ಸಬಲೀಕರಣಕ್ಕೆ ಹಾಗೂ ಕ್ಷೇಮಾಭಿವೃದ್ಧಿಗೆ ಹೆಚ್ಚಿನ ಅನುದಾನ, ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆಗಳ ಅನುಷ್ಠಾನ, ನೇಕಾರರ ಸಮ್ಮಾನ್ ಯೋಜನೆಯಡಿ ಹೆಚ್ಚಿನ ನೆರವು, ಯುವಕರ ಸ್ವಸಹಾಯ ಸಂಘ ಸ್ಥಾಪಿಸಿ ಕಿರು ಉದ್ದಿಮೆ ಕೈಗೊಳ್ಳಲು ಪ್ರೋತ್ಸಾಹ, ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ, ನೇಮಕ, ಹೊಸದಾಗಿ ವಿದ್ಯಾರ್ಥಿನಿಲಯಗಳ ನಿರ್ಮಾಣ, ಯುವ ಜನರ ಸರ್ವತೋಮುಖ ಅಭಿವೃದ್ಧಿ, ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿ ನೂತನ ಯುವ ನೀತಿ ಜಾರಿ ಹಾಗೂ ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಮುಂತಾದ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

ವಿವಿಧತೆಯಲ್ಲಿ ಏಕತೆ ಕಾಣುವ ದೇಶವಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಸಮಬಾಳು ಸರ್ವರಿಗೂ ಸಮಪಾಲು ಎಂಬ ನಂಬಿಕೆ ಇಟ್ಟು ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಶಿವಮೊಗ್ಗದಲ್ಲಿ ಕೈಗಾರಿಕೆ, ಪ್ರವಾಸ್ಯೋದ್ಯಮ, ಅಭಿವೃದ್ಧಿಗೆ ಪೂರಕವಾಗಿ ಚತುಷ್ಪಥ ರಸ್ತೆಗಳು, ವರ್ತುಲ ರಸ್ತೆಗಳು, ಸೇತುವೆ, ಹೊಸ ರೈಲು ಮಾರ್ಗ ಸಂಪರ್ಕ, ದಶಕಗಳ ಕನಸಾಗಿರುವ ವಿಮಾನ ನಿಲ್ದಾಣವನ್ನ ನಿರ್ಮಿಸಿ ಸಾರ್ವಜನಿಕ ಲೋಕಾರ್ಪಣೆಗೆ ಸಜ್ಜಾಗಿದೆ ಎಂದರು.

970 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಕಾರ್ಯ ಪ್ರಗತಿಯಲ್ಲಿದೆ. 1469 ಕೋಟಿ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪ್ರಗತಿಯಲ್ಲಿವೆ. ಪಿಡಬ್ಲೂಡಿ ಇಲಾಖೆಯಿಂದ ಒಟ್ಟು 104 ಕೋಟಿ ವೆಚ್ಚದಲ್ಲಿ 190 ಕಿಮಿ ರಸ್ತೆ ಮಿರ್ಮಾಣ ಕಾರ್ಯವನ್ನ ಕೈಗೆತ್ತಿಕೊಳ್ಳಲಾಗಿದೆ.

148 ಕೋಟಿ ರೂ.ವೆಚ್ಚದಲ್ಲಿ ನಗರೋತ್ಥಾನ ಯೋಜನೆ, 28.11 ಕೋಟಿ ರೂ.ನಲ್ಲಿ ಸೊರಬ ಮತ್ತು ಹೊಸನಗರದಲ್ಲಿ ಅಮೃತ್ -2 ರ ಅಡಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

2,27,672 ಮನೆಗಳಿಗೆ ಜಲಜೀವನ್ ಯೋಜನೆ, 133 ಕೋಟಿಯಲ್ಲಿ ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಪಿಎಂಜಿಎಸ್ ವೈ, ಪಿಎಂ ಕಿಸಾನ್ ಯೋಜನೆ, ಸಣ್ಣ ನೀರಾವರಿ ಯೋಜನೆ, ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ಅಮೃತ ಗ್ರಾಮ ಯೋಜನೆ, ಪ್ರತಿ ಗ್ರಾಪಂ ನಲ್ಲಿ ಕ್ರೀಡಾ ಅಂಕರಣ, ಎಲೆಚುಕ್ಕಿ ರೋಗಕ್ಕೆ ಒಂದು ಕೋಟಿ ರೂ. ವೆಚ್ಚದಲ್ಲಿ ಉಚಿತ ಔಷಧಿ ವಿತರಣೆ

ಚರ್ಮಗಂಟು ರೋಗ ತಗುಲದಂತೆ ಜಾನುವಾರುಗಳಿಗೆ ಲಸಿಕೆ, ಮರಣಹೊಂದಿದ 329 ಜಾನುವಾರಿಗೆ 63.95 ರೂ. ಪರಿಹಾರಧನ ನೂಡಲಾಗುತ್ತಿದೆ ಎಂದರು.

ನಂತರ ವಿವಿಧ ಶಾಲೆ ಮಕ್ಕಳಿಂದ ಪಥಸಂಚಲನ, ಸಚಿವರಿಂದ ಗೌರವ ವಂದನೆ ಕಾರ್ಯಕ್ರಮ ನಡೆಯಿತು. ಕೇಂಬ್ರಿಡ್ಜ್ ಶಾಲೆ, ಮಹಾವೀರ ಜೈನ್ ಶಾಲೆ, ಸೈಂಟ್ ಲಯೋಲಾ ವಿದ್ಯಾ ಸಂಸ್ಥೆ,ಗಾಜನೂರು ನವೋದಯ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪೋಲಿಸ್ ಪಡೆ ಹಾಗೂ ವಿವಿಧ ತಂಡಗಳು ಆಕರ್ಷಕ ಪಥಸಂಚಲನ ಪ್ರದರ್ಶಿಸಿದವು. 
   ವಿವಿಧ ಶಾಲಾ ಮಕ್ಕಳು ಅತ್ಯುತ್ತಮವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ಸರ್ಕಾರಿ ಬಾಲಕರ ಬಾಲ ಮಂದಿರದ ವಿದ್ಯಾರ್ಥಿಗಳಯ ಪ್ರಥಮ, ಸಾಂದೀಪಿನಿ ಪ್ರೌಢಶಾಲೆಯ ಬಾಲಕಿಯರು ದ್ವಿತೀಯ ಹಾಗೂ  ಬಾಲಕರ ಎನ್ ಸಿಸಿ ತೃತೀಯ ಬಹುಮಾನ ಪಡೆದುಕೊಂಡರು.
      ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಮಹಾನಗರಪಾಲಿಕೆ ಮಹಾಪೌರರಾದ ಶಿವಕುಮಾರ್, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಜಿ.ಪಂ. ಸಿಇಒ ಎನ್.ಡಿ.ಪ್ರಕಾಶ್ ಇತರೆ ಅಧಿಕಾರುಗಳಯ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.