ಜ.7 ರಿಂದಮೂರು ದಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ- ಕಲೋತ್ಸವ ಕಾರ್ಯಕ್ರಮ: ಡಿಸಿ ಸೆಲ್ವಮಣಿ

 ಶಿವಮೊಗ್ಗ:  2022-23 ನೆ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ- ಕಲೋತ್ಸವ ಕಾರ್ಯಕ್ರಮ  ಜ.7 ರಿಂದ ನಡೆಯಲಿದೆ ಅದಕ್ಕಾಗಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ತಿಳಿಸಿದರು.
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮ ದಿನಾಂಕ 07-01-2013 ರಿಂದ 09-01-2011 ರ ವರೆಗೆ ಜರುಗಲಿದೆ,07-01-2013 ರಂದು 
ಪ್ರತಿಭಾ ಕಾರಂಜಿ /ಕಲೋತ್ಸವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಕುವೆಂಪು ರಂಗಮಂದಿರ, ಶಿವಮೊಗ್ಗ ದಲ್ಲಿ ಬೆಳಗ್ಗೆ 10.30 ಘಂಟೆಗೆ  ಶಿಕ್ಷಣ ಸಚಿವ M ಸಾಗೇಶ್ ಬಿ.ಸಿ ಇವರು ನರವೇರಿಸಲಿದ್ದು,ಅಧ್ಯಕ್ಷತೆಯನ್ನು  ಕೆ.ಎಸ್. ಈಶ್ವರಪ್ಪ ವಿಧಾನ ಸಭಾ ಸದಸ್ಯರು ಶಿವಮೊಗ್ಗ ನಗರ ಕ್ಷೇತ್ರ ಇವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು, ಸಂಸದರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ ಸದಸ್ಯರುಗಳು, ನಿಗಮ ಮಂಡಳಿಗಳ ಅಧ್ಯಕ್ಷರು, ಇಲಾಖೆಯ ಎಲ್ಲಾ ಅಧಿಕಾರಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಸ್ಥಳೀಯ ಆಡಳಿತ ಸಂಸ್ಥೆಗಳ ಅಧ್ಯಕ್ಷರು ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದರು.

ಇಂದು ಜಿಲ್ಲಾಧಿಕಾರಿಗಳ ಸಂಭಾಂಗಣದಲ್ಲಿ  ಇಂದು ಬೆಳಿಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ /ಕಲೋತ್ಸವ ಕಾರ್ಯಕ್ರಮದಲ್ಲಿ 8 ರಿಂದ 12 ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ ಜಿಲ್ಲಾ ಮಟ್ಟದಲ್ಲಿ ಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿರುತ್ತಾರೆ. ವೈಯಕ್ತಿಕ ವಿಭಾಗದಲ್ಲಿ 23 ಸ್ಪರ್ಧೆಗಳು ಹಾಗೂ ಸಾಮೂಹಿಕ ವಿಭಾಗದಲ್ಲಿ 13 ಸ್ಪರ್ಧೆಗಳು ಶಿವಮೊಗ್ಗ ನಗರದ ಡಿ.ವಿ.ಎಸ್. ವಿದ್ಯಾ ಸಂಸ್ಥೆ ಹಾಗೂ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ರಾಜ್ಯದ 15 ಶೈಕ್ಷಣಿಕ ಜಿಲ್ಲೆಗಳಿಂದ ಒಟ್ಟು 1300 ವಿದ್ಯಾರ್ಥಿಗಳು ಹಾಗೂ 100 ಜನ ಮೇಲ್ವಿಚಾರಕರು ಭಾಗವಹಿಸಲಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ವಿವಿಧ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆದ ಪ್ರತಿ ಸ್ಪರ್ಧೆಗೆ 03 ಜನರಂತೆ ಒಟ್ಟು 78 ಸೀರ್ಪುಗಾರರನ್ನು ನೇಮಿಸಿಕೊಳ್ಳಲಾಗಿದೆ ಎಂದರು. 
೨ ಬಹುಮಾನದ ವಿವರ:
ವೈಯಕ್ತಿಕ ವಿಭಾಗ: ( ಪ್ರತಿ ಸ್ಪರ್ಧೆಗೆ ) 1 ಪ್ರಥಮ 6000/2.ದ್ವಿತೀಯ-4000/3.ತೃತೀಯ-2000/
(ಸಮಾಧಾನಕರ 
ಸಾಮೂಹಿಕ ವಿಭಾಗ (ಪ್ರತಿ ಸ್ಪರ್ಧಿಗೆ) 1 ಪರಮ 3000 = 2.ದ್ವಿತೀಯ-4000/+ 3.ತೃತೀಯ-1000/
4.ಸಮಾಧಾನಕರ 
(5ಜನಕ್ಕೆ ತಲಾ 1000/-) 
( 2 ತಂಡಕ್ಕೆ ತಲಾ ಸ್ಪರ್ಧಿಗೆ 500/-) ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಗುವುದು. 
4. ವಸತಿ ವ್ಯವಸ್ಥೆ - 
* ಸ್ಪರ್ಧಾರ್ಥಿಗಳಿಗೆ ಮತ್ತು ಮೇಲ್ವಿಚಾರಕರಿಗೆ : 
ಶಿವಮೊಗ್ಗ ನಗರದ ಮೂಲಭೂತ ಸೌಕರ್ಯಗಳನ್ನು ಹೊಂದಿದ 21 ವಸತಿ ಸಮುದಾಯ ಭವನ ಹಾಗೂ ಶಾಲೆಗಳನ್ನು ನಿಗಧಿಗೊಳಿಸಲಾಗಿದ್ದು, ಬಾಲಕರಿಗೆ 8 ಬಾಲಕಿಯರಿಗೆ 7 ಎಂದು ಕಾಯ್ದಿರಿಸಲಾಗಿದೆ. 
• ಫೀರ್ಸುಗಾರರಿಗೆ ಹಾಗೂ ನೋಡಲ್ ಅಧಿಕಾರಿಗಳಿಗೆ :
ಅಗಮುಡಿ ಮತ್ತು ಚೈತನ್ಯ ಸಮುದಾಯ ಭವನ (ಮಹಿಳೆಯರಿಗೆ) ವೀರಶೈವ ಸಾಂಸ್ಕೃತಿಕ ಭವನ, ವೀರಶೈವ ಸಮುದಾಯ ಭವನ,ಭೋವಿ ಸಮುದಾಯಭವನ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ಸಮುದಾಯ ಭವನ(ಪುರುಷರಿಗೆ) ಕಾಯ್ದಿರಿಸಿದೆ. 
* ಅತಿಥಿಗಳಿಗೆ :
ಪ್ರವಾಸಿ ಮಂದಿರ, ಎಸ್.ಡಿ.ಸಿ.ಸಿ ಬ್ಯಾಂಕ್‌ನ ಅತಿಥಿ ಗೃಹಗಳನ್ನು ಕಾಯ್ದಿರಿಸಲಾಗಿದೆ. ಪ್ರತಿಯೊಂದು ವಸತಿ ನಿಲಯಗಳಿಗೆ 2 ಜನ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಸುದ್ದಿಗೋಷ್ಟಿ ಯಲ್ಲಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಮತ್ತು ಎಡಿಸಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.