ಸಾಗರ: ಭಜರಂಗದಳದ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ‌ ಕೇಸ್: 3 ಆರೋಪಿಗಳು ಅಂದರ್

ಸಾಗರ: ಭಜರಂಗದಳದ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ‌ ಕೇಸ್ ಗೆ ಸಂಬಂಧಿಸಿದಂತೆ  ಸಾಗರ ಟೌನ್ ಠಾಣೆಯಲ್ಲಿ ನಿನ್ನೆ ಘಟನೆ ಕುರಿತಂತೆ  ಈಗಾಗಲೇ  ಆರೋಪಿತರನ್ನ ವಿಶೇಷ ತನಿಖಾ ತಂಡ ಶಿವಮೊಗ್ಗದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದೆ.
ನಿನ್ನೆ ಮೂರು ತಂಡಗಳಾಗಿ ಜಿಲ್ಲಾ ರಕ್ಷಣಾಧಿಕಾರಿಗಳು ತಂಡ ರಚನೆ ಮಾಡಿದ್ದರು. ವಿಶೇಷ ತಂಡದಿಂದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ‌. 3 ಜನರನ್ನು  ವಿಚಾರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ಮಾಧ್ಯಮಗಳೊಂದಿಗೆ ಇಂದು  ಮಾತನಾಡಿದ  ಅವರು, ಬಜರಂಗದಳ ಕಾರ್ಯಕರ್ತ ಸುನಿಲ್, ಸಮೀರ್ ಸಹೋದರಿಗೆ ಚುಡಾಯಿಸುತ್ತಿದ್ದ. ಕಳೆದ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿರುತ್ತಾನೆ ಎಂದರು.

ಆರೋಪಿ ಸಮೀರ್ ತಂಗಿ ಅಂಜುಮ್ ಸಭಾಂಜು ಮಾದ್ಯಮದ ಮುಂದೆ ನೀಡಿದ ಹೇಳಿಕೆ ಕ್ಲಿಕ್ ಮಾಡಿ ವಿಡಿಯೋ ನೋಡಿ..

ಸುನಿಲ್ ಗೆ ಸಮೀರ್ ಈ ಸಂಬಂಧ ವಾರ್ನ್ ಮಾಡಿರುತ್ತಾನೆ. ಸಮೀರ್ ತಂಗಿಯ ಫೋನ್ ನಂ. ಕೂಡ ಕೇಳಿರುತ್ತಾನೆ. ಹೀಗಾಗಿ ಸಮೀರ್, ಸುನಿಲ್ ವಿರುದ್ಧ ಆಕ್ರೋಶಗೊಂಡಿರುತ್ತಾನೆ. ಎರಡ್ಮೂರು ಬಾರಿ ಸಮೀರ್ ಎಚ್ಚರಿಕೆ ಸಹ ನೀಡಿರುತ್ತಾನೆ ಎಂದರು.

ಬಂಧಿತ ಆರೋಪಿಗಳು ಸಮೀರ್,ಇಮಿಯಾನ್,ಮತ್ತು ಮನ್ಸೂರ್ ಎಂದು ತಿಳಿದುಬಂದಿದೆ. ಮನ್ಸೂರ್ ಮತ್ತು ಇಮ್ಯಾನ್ ಈ ಘಟನೆಯಲ್ಲಿನ ಪಾತ್ರದ ಬಗ್ಗೆ ವಿಚಾರಣೆ ಮತ್ತು ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸಾಗರ ಟೌನ್ ಠಾಣೆಯಲ್ಲಿ  ಎಫ್ಐಆರ್ ದಾಖಲು
ಸಾಗರ ಭಜರಂಗದಳದ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ‌ ವಿಚಾರದಲ್ಲಿ  ಸಾಗರ ಟೌನ್ ಠಾಣೆಯಲ್ಲಿ ನಿನ್ನೆ ಘಟನೆ ಕುರಿತಂತೆ ಎಫ್ಐಆರ್ ದಾಖಲಾಗಿದೆ. ಸಾಗರದ ಸಮೀರ್ ಎ1 ಆರೋಪಿ ಎಂದು ತೋರಿಸಲಾಗಿದ್ದು ಆರೋಪಿಯನ್ನ ಬಂಧಿಸಲಾಗಿದೆ.

ಉಳಿದಂತೆ ಫಾರುಕ್ ಹಾಗೂ ನಾಲ್ಕೈದು ಜನರ ವಿರುದ್ಧ ಸಹ  ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 307, 149, 506, 504 ಅಡಿ ಕೇಸ್ ದಾಖಲಾಗಿದೆ. ಜೀವ ಬೆದರಿಕೆ, ಕೊಲೆ ಯತ್ನ ಸಂಬಂಧ ಕೇಸ್ ದಾಖಲಾಗಿದೆ.

   ಹಿಂದುಪರ ಸಂಘಟನೆಗಳಿಂದ ಇಂದು ಸಾಗರ ಬಂದ್ ಗೆ ಕರೆಸಾಗರದಲ್ಲಿ ಹಿಂದು ಕಾರ್ಯಕರ್ತನ ಹತ್ಯೆಗೆ ಯತ್ನ ಹಿನ್ನೆಲೆ ಇಂದು ಸಾಗರ ಬಂದ್ ಗೆ ಕರೆ ನೀಡಲಾಗಿದೆ. ಬೈಕ್ ನಲ್ಲಿ ಬಂದ ಬಜರಂಗದಳ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸುತ್ತಿದ್ದಾರೆ ಎನ್ನಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.