ಜನವರಿ 28 ಮತ್ತು 29 ರಂದು ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ರಾಪಿಂಡ್ ಮತ್ತು ಬಿಡ್ ಚೆಕ್ ಪಂದ್ಯಾವಳಿ

ಶಿವಮೊಗ್ಗ: ನಳಂದ ಚೆಸ್ ಅಕಾಡಮಿ ಮತ್ತು ಬೆಂಗಳೂರಿನ ಚೆಸ್ ಏರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 28 ಮತ್ತು 29 ರಂದು ಬಿ.ಹೆಚ್. ರಸ್ತೆಯಲ್ಲಿರುವ ಶಿವಮೊಗ್ಗದ ಸೇಕ್ರೇಟ್ ಹಾರ್ಟ್ ಸಭಾಂಗಣದಲ್ಲಿ ರಾಷ್ಟ್ರಮಟ್ಟದ ಲ್ಯಾಪಿಂಡ್ ಮತ್ತು ಬಿಡ್ಸ್ ಚೆಸ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಶಿವಮೊಗ್ಗ ನಳಂದ ಚೆಸ್ ಅಕಾಡೆಮಿ ಅಧ್ಯಕ್ಷ ಶ್ರೀ ಕೃಷ್ಣ ಉಡುಪ ಹೇಳಿದರು.
 ಇಂದು ಬೆಳಿಗ್ಗೆ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ಈ ಪಂದ್ಯಾವಳಿಗೆ FIDE (ವಿಶ್ವ ಚೆಸ್ ಸಂಸ್ಥೆ) ಅನುವತಿ ಪಡೆದಿದ್ದು, ಆಟಗಾರರಿಗೆ ಅಂತರಾಷ್ಟ್ರೀಯ ರೇಟಿಂಗ್ ಪಡೆಯುವ ಅವಕಾಶವಿರುತ್ತದೆ. ಈ ಪಂದ್ಯಾವಳಿಯಲ್ಲಿ ಈಗಾಗಲೇ ಭಾರತದ ವಿವಿಧ ರಾಜ್ಯಗಳಿಂದ ಪ್ರಬಲ ಟೆಸ್ ಆಟಗಾರರು ಹೆಸರು ನೊಂದಾಯಿಸುತ್ತಿದ್ದು, ಅವರಲ್ಲಿ ಮುಖ್ಯವಾಗಿ ಶಿವಮೊಗ್ಗದ ಗ್ರಾಂಡ್‌ಮಾಸ್ಟರ್‌ ಜಿ.ಎಸ್. ಸ್ಪ್ಯಾನಿ ಮತ್ತು ಬೆಂಗಳೂರಿನ ಅಂತರಾಷ್ಟ್ರೀಯ ಮಾಸ್ಟರ್‌ಗಳಾದ ಡಿ.ವಿ. ಪ್ರಸಾದ್‌, ರವಿ ಹೆಗಡೆ, ತಮಿಳುನಾಡಿನ ಆರ್. ಬಾಲಸುಬ್ರಮಣ್ಯಂ, ಹರಿಕೃಷ್ಣರು ಹಾಗೂ ಇತರರಿದ್ದಾರೆ. ಈ ಪಂದ್ಯಾವಳಿಯಲ್ಲಿ 200ಕ್ಕೂ ಹೆಚ್ಚು ಚೆಸ್ ಆಟಗಾರರು ಭಾಗವಹಿಸುವ ಸಂಭವವಿರುತ್ತದೆ ಎಂದರು.

ಈ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನು ದಿ: 28/01/2023ರ ಬೆಳಿಗ್ಗೆ 9.30ಕ್ಕೆ ಏರ್ಪಡಿಸಿದ್ದು, ಈ ಪಂದ್ಯಾವಳಿಯ ಉದ್ಘಾಟನೆಯನ್ನು ಶ್ರೀಯುತ ಶ್ರೀಮಾನ್ ಎಸ್. ರುದ್ರೇಗೌಡರು ಶಾಸಕರು ವಿಧಾನಪರಿಷತ್ ಶಿವಮೊಗ್ಗ ಮತ್ತು ಡಿ.ಎಸ್. ಅರುಣ ಶಾಸಕರು ವಿಧಾನಪರಿಷತ್ ಶಿವಮೊಗ್ಗ ಇವರುಗಳು ನೇರವೇರಿಸಲಿದ್ದಾರೆ. ಇವರೊಂದಿಗೆ ಮುಖ್ಯ ಅತಿಥಿಗಳಾಗಿ ಶ್ರೀ ಡಿ.ವಿ. ಪ್ರಸಾದ್ ಅಂತರಾಷ್ಟ್ರೀಯ ಚೆಸ್ ಮಾಸ್ಟರ್ ಮತ್ತು ನಮ್ಮ ಚೆಸ್‌ ಸಂಸ್ಥೆಯ ಪದಾಧಿಕಾರಿಗಳಾದ ಡಾ|| ವಿ. ಕವಿತಾ ಮತ್ತು ಡಾ|| ಶಿವಯೋಗಿ ಹಾಗೂ ಅಧ್ಯಕ್ಷತೆಯನ್ನು ನಳಂದ ಚೆಸ್ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಉಡುಪರವರು ವಹಿಸಲಿದ್ದಾರೆ ಎಂದರು.

 ಈ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭವನ್ನು ದಿ: 29-01-2023 ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ ಎಂದರು.

ಈ ಪಂದ್ಯಾವಳಿಯಲ್ಲಿ ಒಟ್ಟು 2,30,000/- (ಎರಡು ಲಕ್ಷದ ಮೂವತ್ತು ಸಾವಿರ ರೂ) ನಗದು ಬಹುಮಾನವಿದ್ದು 77 ಟ್ರೋಫಿಗಳು ವಿಜೇತರಿಗಾಗಿ ಮೀಸಲಿಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಗನ್ ಲಾಲ್,ನವೀನ್.ಎ.ಜೆ. ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.