ಜನವರಿ 24 ರಂದು ಹುಬ್ಬಳ್ಳಿಯ ರೈಲ್ವೆ ಮ್ಯೂಸಿಯಂಗೆ ಉಚಿತ ಪ್ರವೇಶ: ನೈಋತ್ಯ ರೈಲ್ವೆಪತ್ರಿಕಾ ಪ್ರಕಟಣೆ
ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಪ್ರತಿ ವರ್ಷ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಆಚರಿಸುತ್ತಾ ಬಂದಿದೆ. ಈ ವರ್ಷದ ಆಚರಣೆಯ ಮುಖ್ಯ ಉದ್ದೇಶ ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಈ ಸಮಾಜದಲ್ಲಿ ಹೆಣ್ಣುಮಕ್ಕಳ ಸಬಲೀಕರಣ ಮತ್ತು ಅವರು ಎದುರಿಸುತ್ತಿರುವ ಅಸಮಾನತೆನ್ನು ಹಂತಹಂತವಾಗಿ ನಿರ್ಮೂಲನೆ ಮಾಡುವ ಉದ್ದೇಶ ಹೊಂದಲಾಗಿದೆ.
ಈ ದಿನಾಚರಣೆ ಪ್ರಯುಕ್ತ ಗದಗ ರಸ್ತೆಯಲ್ಲಿರುವ ನೈರುತ್ಯ ರೈಲ್ವೆ ಹುಬ್ಬಳ್ಳಿಯ ರೈಲ್ವೆ ಮ್ಯೂಜಿಯಂಗೆ ಅಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಒಬ್ಬ ಪಾಲಕರೊಂದಿಗೆ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಪ್ರವೇಶಕ್ಕೆ ರೈಲ್ವೆ ಇಲಾಖೆ ಅವಕಾಶ ನೀಡಲಾಗಿದೆ. ಮ್ಯೂಸಿಯಂ ಆವರಣದೊಳಗೆ ತಿನ್ನಬಹುದಾದ ಪದಾರ್ಥಗಳನ್ನು ತಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ.
ಈ ರೈಲ್ ಮ್ಯೂಜಿಯಂ (ವಸ್ತುಸಂಗ್ರಹಾಲಯ) ಪ್ರತಿ ಸೋಮವಾರ ರಜೆ ಇರುತ್ತದೆ. ಮಂಗಳವಾರದಿಂದ ಶುಕ್ರವಾರದ ವರೆಗೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ತೆರೆದಿರುತ್ತದೆ. ಶನಿವಾರ ಮತ್ತು ಭಾನುವಾರ ಮಾತ್ರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತೆರೆದಿರುತ್ತದೆ.
ಅನೀಶ್ ಹೆಗಡೆ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ನೈಋತ್ಯ ರೈಲ್ವೆ, ಹುಬ್ಬಳ್ಳಿ
Leave a Comment