ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ; 22 ಜಿಲ್ಲೆಗಳಿಂದ ಸುಮಾರು 830 ವಿದ್ಯಾರ್ಥಿಗಳ ಆಗಮನ

ಶಿವಮೊಗ್ಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಲಾಗಿತ್ತು
8.30 ಕ್ಕೆ 22 ಜಿಲ್ಲೆಗಳಿಂದ ಸುಮಾರು 830 ವಿದ್ಯಾರ್ಥಿಗಳು ಆಗಮಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಮಾನ್ಯ ಜಿಲ್ಲಾಧಿಕಾರಿಗಳಾದ ಡಾ ಸೇಲ್ಸವಾಮಣಿ  ಎಲ್ಲ ವ್ಯವಸ್ಥೆಗಳನ್ನು ಪರಿಶೀಲಿಸಿ ಊಟದ ರುಚಿ ಕೂಡ ಪರಿಶೀಲಿಸಿ ಮತ್ತು ವಾಸ್ತವ್ಯ ಎಲ್ಲ ಸ್ಪರ್ಧೆ ವೇದಿಕೆಗಳ ಸಿದ್ಧತೆಗಳನ್ನು ಪರಿಶೀಲಿಸಿದರು. ಮಕ್ಕಳಿಗೆ ಸಾನಿಟರಿ ಕಿಟ್ ಗಳ ವಿವರಣೆ ಬಗ್ಗೆ ಪರಿಶೀಲಿಸಿದರು..ವಸತಿ ಸ್ಥಳಗಳ ಭೇಟಿ ನೀಡಿ ಪರಿಶೀಲಿಸಿ ಎಲ್ಲ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರುಸಿಇಓ ಜಿಲ್ಲಾ ಪಂಚಾಯತ್ ಡಿಡಿಪಿಐ ಪರಮೇಶ್ವರಪ್ಪ ،ಸಹ ನಿರ್ದೇಶಕರಾದ ಮಂಜುನಾಥ್ ಎಚ್ ಹಾಗೂ  ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಎಲ್ಲ ಕ್ಷೇತ್ರ  ಶಿಕ್ಷಣ ಅಧಿಕಾರಿಗಳು, ಶಿಕ್ಷಣ ಅಧಿಕಾರಿಗಳು ಎಲ್ಲ ಸಮಿತಿಗಳ ಸಂಚಾಲಕರು ಸದಸ್ಯರು ಪೋಷಕರು ಉಪಸ್ಥಿತರಿದ್ದರು..... ಸ್ಪರ್ಧಿಗೆ ಬಂದಿರುವ ಎಲ್ಲ ವಿದ್ಯಾರ್ಥಿಗಳ ಕ್ಷೇಮದ ಹಾಗೂ 
 ಸುರಕ್ಷತೆ ಬಗ್ಗೆ ಗಮನಿಸುವುದು..ಎಲ್ಲ  ಸ್ಪರ್ಧಿಗಳು  ವಾಪಸ್ ಹೋಗುವವರೆಗೂ  ಜವಾಬ್ದಾರಿ ತೆಗೆದುಕೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.