ಜ.21 ರಂದು ಈ ಸ್ಟೋರ್ ಇಂಡಿಯಾ ಮತ್ತು ವೇದಿಕ್ ಆಯುರ್ ಕ್ಯೂರ್ ಹೂಡಿಕೆದಾರರ ಹಿತರಕ್ಷಣಾ ವೇದಿಕೆದಾರರ ಸಭೆ: ಗೋ.ರಮೇಶ್ ಗೌಡ
ಶಿವಮೊಗ್ಗ: ಈ ಸ್ಟೋರ್ ಇಂಡಿಯಾ ವೇದಿಕ್ ಆಯುರ್ ಕ್ಯೂರ್” ಕಂಪನಿ ಪ್ರಾರಂಭದಲ್ಲಿ ಒಪ್ಪಂದದಂತೆ ಹೂಡಿಕೆದಾರರಿಗೆ, ಗ್ರಾಹಕರಿಗೆ ಲಾಭಾಂಶ, ಕಮೀಷನ್ ನೀಡುತ್ತಾ ಬಂದಿದ್ದು, ಇದರಿಂದ ಆಕರ್ಷಿತರಾಗಿಶಿವಮೊಗ್ಗ ಮತ್ತು ಕರ್ನಾಟಕ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಸಾವಿರಾರು ಕೋಟಿಯವರೆಗೂ ಸಾರ್ವಜನಿಕರು ಹಣವನ್ನು ಹೂಡಿಕೆ ಮಾಡಿದ್ದು, ಇದೀಗ ಕಂಪನಿಯು ಹೂಡಿಕೆದಾರರಿಗೆ ಲಾಭಾಂಶ ಮತ್ತು ಕಮೀಶನ್ ನೀಡದೇ ತಾಂತ್ರಿಕ ಸಮಸ್ಯೆ ನೆಪ ಹೇಳುತ್ತಾ ಬಂದಿದೆ. ಆಗಾಗಿ ಜ.21 ರಂದು ಶಿವಮೊಗ್ಗ ತಾಲ್ಲೂಕು ಬೀರನಕೆರೆ, ಐರಣಿ ಮಠದ ಕಲ್ಯಾಣ ಮಂದಿರದಲ್ಲಿ ಬೆಳಗ್ಗೆ 11.00 ಗಂಟೆಗೆ “ಈ ಸ್ಟೋರ್ ಇಂಡಿಯಾ ವೇದಿಕ್ ಆಯುರ್ ಕ್ಯೂರ್” ಹೂಡಿಕೆದಾರರ ಬೃಹತ್ ಸಭೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು “ಈ ಸ್ಟೋರ್ ಇಂಡಿಯಾ ವೇದಿಕ್ ಆಯುರ್ ಕ್ಯೂರ್” ಹೂಡಿಕೆದಾರರ ಹಿತರಕ್ಷಣಾ ವೇದಿಕೆಯ ಮುಖಂಡ ಗೋ.ರಮೇಶಗೌಡ ಹೇಳಿದರು.ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ನೊಯಿಡಾ ಮೂಲದ ಈ ಸ್ಟೋರ್ ಇಂಡಿಯಾ ವೇದಿಕ್ ಆಯುರ್ ಕ್ಯೂರ್ ಸಂಸ್ಥೆಯು ಕಳೆದ 4 ವರ್ಷಗಳಿಂದ ದೇಶದ ಹಲವಾರು ರಾಜ್ಯಗಳಲ್ಲಿ ವೇದಿಕ್ ಆಯುರ್ ಕ್ಯೂರ್ ಉತ್ಪನ್ನಗಳ ಜೊತೆಯಲ್ಲಿ ದಿನಬಳಕೆ ವಸ್ತುಗಳ ಮಾರಾಟ ಉದ್ಯಮವನ್ನು ನಡೆಸುತ್ತಾ ಬಂದಿದ್ದು, ಈ ಸಂಸ್ಥೆಯು ಹೂಡಿಕೆದಾರರಿಗೆ ಹಲವಾರು ಉಪಯುಕ್ತ ಯೋಜನೆಗಳನ್ನು ನೀಡುತ್ತಾ ತನ್ನ ಉದ್ಯಮವನ್ನು ರಾಜ್ಯದ ಹಲವಾರು ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ವಿಸ್ತರಿಸಿದ್ದು, ಕಂಪನಿಯು ಕಳೆದ 7-8 ತಿಂಗಳಿಂದ ಕೆಲ ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿ ಹೂಡಿಕೆದಾರರಿಗೆ ಲಾಭಾಂಶ, ಬಾಡಿಗೆ ಪಡೆದ ಕಟ್ಟಡಗಳಿಗೆ ಬಾಡಿಗೆಯನ್ನು ನೀಡಿರುವುದಿಲ್ಲ. ನಾವುಗಳು ಕಂಪನಿಯ ಮುಖ್ಯಸ್ಥರುಗಳನ್ನು ಸಂಪರ್ಕಿಸಿ ನಮ್ಮ ಹಾಗೂ ಗ್ರಾಹಕರ, ಹೂಡಿಕೆದಾರರ ಕಷ್ಟವನ್ನು ಹೇಳಿಕೊಂಡಾಗ ಅವರುಗಳು ನಾವು ಅಕ್ರೆಡಿಯಾ ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೊಸ ವ್ಯವಸ್ಥೆಯೊಂದಿಗೆ ನೂತನ ಸ್ಟೋರ್‌ಗಳನ್ನು ಪ್ರಾರಂಭಿಸಿ ಹೂಡಿಕೆದಾರರಿಗೆ ಒಪ್ಪಂದದಂತೆ ಲಾಭಾಂಶವನ್ನು ನೀಡುವ ಭರವಸೆ ನೀಡಿದ್ದರು, ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ ಎಂದರು.
ಇದರಿಂದ ಹೂಡಿಕೆದಾರರಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದು, ಕಂಪನಿಗೆ ಮೊದಲು ಲಾಭಾಂಶ ಗಳಿಸಿದ್ದ ಹಿರಿಯ ಹೂಡಿಕೆದಾರರನ್ನು ಅನುಮಾನದಿಂದ ನೋಡುವಂತಾಗಿದೆ ಕೆಲವರು ಒಬ್ಬರ ಮೇಲೆ ಒಬ್ಬರು ಹೇಳುತ್ತಾ ಕಾಲ ಕಳೆದರೆ ಮತ್ತೆ ಕೆಲವರು ಪೋನ್ ಕರೆಗಳನ್ನು ಸ್ವೀಕರಿಸದೆ ಹೂಡಿಕೆದಾರರಲ್ಲಿ ಮತ್ತಷ್ಟು ಸಿಟ್ಟು, ಗೊಂದಲ ಉಂಟಾಗುವಂತೆ ಮಾಡುತ್ತಿದ್ದಾರೆ ಎಂದರು.
ಕಂಪನಿಯ ವ್ಯವಸ್ಥಾಪಕರು ದಿನಾಂಕ:- 21-01-2023 ಒಳಗೆ ಎಲ್ಲಾ ಹೂಡಿಕೆದಾರರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು, ಒಂದು ವೇಳೆ ಸದರಿ ದಿನಾಂಕದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಅಂದಿನ ಸಭೆಯಲ್ಲಿ ಹೂಡಿಕೆದಾರರೋಂದಿಗೆ ಚರ್ಚಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದವರೆಲ್ಲರೂ ಜ.21 ರಂದು ಸಭೆಗೆ ಹಾಜರಾಗಬೇಕು ಎಂದು ವಿನಂತಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಸ್ಟೋರ್ ಇಂಡಿಯಾ ಮತ್ತು ವೇದಿಕ್ ಆಯುರ್ ಕ್ಯೂರ್ ಹೂಡಿಕೆದಾರರ ಹಿತರಕ್ಷಣಾ ವೇದಿಕೆ ಮುಖಂಡರಾದ ಹೆಚ್.ಆರ್ ಹನುಮಂತಪ್ಪ ಶಿವಮೊಗ್ಗ ,ವಿಷ್ಣುನಾಯ್ಕ ನಲ್ಲೂರು,
ಗುರುರಾಜ್ ಗರತಿಕೆರೆ ,ಲಕ್ಷಣ ಹೂವಳೆ ಶಿವಮೊಗ್ಗ, ಜಗದೀಶ್
ಕಿರಣ್,ಹೊಳೆಹೊನ್ನೂರು ಶಿಕಾರಿಪುರ ಅಶ್ವಥನಾಯ್ಡು ಭದ್ರಾವತಿ ಬಿ.ಜಿ ಸುರೇಶ್ ಗೌಡ ಆನವೇರಿ ಮಂಜುನಾಥ ಟಿ.ಎಂ ಹಂಚಿನ ಸಿದ್ದಾಪುರ ಬನೀಲ್ ಕುಮಾರ್ ಶಿವಮೊಗ್ಗ ನಾಗರಾಜ್
ದನಂಜಯ್ ರಮೇಣ ಸಾನ್ವಿಹಳ್ಳಿ
ಶಿವಮೊಗ್ಗ ಮನೋಜ್
ಲೋಕೇಶಪ್ಪ ನ್ಯಾಮತಿ ಪಾಂಡೋಮಟ್ಟಿ ಚನ್ನಗಿರಿ
ಲೋಹಿತ್ ಯಶವಂತ ನವೀನ ಕುಮಾರ್ ಸವಳಂಗ ಹೊಳೆಹೊನ್ನೂರು ಶಿರಾಳಕೊಪ್ಪ
ಶೇಷಗಿರಿಗೌಡ ರವಿಕುಮಾರ್ ಸಂತೋಷ್ ಕುಮಾರ್ ಶಿವಮೊಗ್ಗ ಹೊಳೆಹೊನ್ನೂರು ನಲ್ಕುದುರೆ
ಮಟ್ಟೇಗೌಡ ಪ್ರವೀಣ್ ಕುಮಾರ್
ಭದ್ರಾವತಿ ಶಿಕಾರಿಪುರ
ಉಮಾರ್ ಶೇಖರ್ ಮಂಜಪ್ಪಟಿ.ಹೆಚ್ ಶಿವಮೊಗ್ಗ ಹೊನ್ನಾಳಿ ಹರೀಶ್ ಶೆಟ್ಟು
ಶಿಕಾರಿಪುರ,ಮೋಹನ್ ಹೊಳೆಹೊನ್ನೂರು
ಸಂತೋಷ್ ಕುಮಾರ್ ನಲ್ಲೂರು
ಶಿವಯೋಗಿ ಮಂಜು ಟಿ.ಆರ್
ಶಿಕಾರಿಪುರ ಮತ್ತಿತರರು ಹಾಜರಿದ್ದರು.

Leave a Comment