*ಹಿಂದೂ ಸಂಘಟನೆಗಳ ಐಕ್ಯತೆಗಾಗಿ ಶಿವಮೊಗ್ಗ ನಗರದಲ್ಲಿ 2 ದಿನಗಳ ಪ್ರಾಂತೀಯ ಹಿಂದೂ ರಾಷ್ಟ್ರ-ಜಾಗೃತಿ ಅಧಿವೇಶನ ಸಂಪನ್ನ*
*ಶಿವಮೊಗ್ಗ :* ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ಸಂಘಟನೆಗಳ ಐಕ್ಯತೆಗಾಗಿ ಪ್ರಾಂತಿಯ ಹಿಂದೂ ಅಧಿವೇಶನವನ್ನು ದಿನಾಂಕ 07 ಮತ್ತು 08 ಜನವರಿ 2023 ಈ 2 ದಿನಗಳ ಕಾರ್ಯಕ್ರಮವು ಶಿವಮೊಗ್ಗದ ಓಟಿ. ರಸ್ತೆ,ಪಟೇಲ್ ಸಮುದಾಯ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ,ದಾವಣಗೆರೆ, ಚಿಕ್ಕಮಗಳೂರು ಅನೇಕ ಜಿಲ್ಲೆಗಳ ವಿಶ್ವಹಿಂದೂ ಪರಿಷತ್, ಬಜರಂಗದಳ ಜೈ ಕರ್ನಾಟಕ, ರಾಮಸೇನೆ, ಹಿಂದೂ ರಾಷ್ಟಸೇನೆ, ದುರ್ಗಾವಾಹಿನಿ ಈ ಸಂಘಟನೆಯ ಪ್ರತಿನಿದಿಗಳು ಹಿಂದುತ್ವವಾದಿ ವಕೀಲರು, ದೇವಸ್ತಾನ ವಿಶ್ವಸ್ಥರು ಹಾಗೂ ಹಿಂದುತ್ವನಿಷ್ಟ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.
*ಹಲಾಲ್ ಜಿಹಾದ್ ಎಂಬುದು ಭಾರತದ ಆರ್ಥಿಕ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ*- ಶ್ರೀ. ವಿಜಯ ರೇವಣಕರ್, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಈ ಸಂದರ್ಭದಲ್ಲಿ ಇವರು ಮಾತನಾಡುತ್ತ ಹಲಾಲ್ ಜಿಹಾದ್ ಮೂಲಕ ಇಡಿ ಜಗತ್ತಿನಲ್ಲಿ ಜಿಹಾದಿ ಭಯೋತ್ಪಾದನೆಗೆ ಅವಶ್ಯಕವಿರುವ ಎಲ್ಲಾ ಹಣದ ವ್ಯವಸ್ಥೆ ಮಾಡಲಾಗುತ್ತಿದೆ.ಭಾರತದಲ್ಲಿ ತಯಾರಾಗುವ ಪ್ರತಿಯೊಂದು ಆಹಾರ ಸಾಮಗ್ರಿಗಳ ಮೇಲೆ ಕೇಂದ್ರ ಸರ್ಕಾರದ FSSAI ಮತ್ತು FDI ಸಂಸ್ಥೆಗಳ ಚಿನ್ಹೆಗಳನ್ನು ಮುದ್ರಿಸುವುದು ಕಡ್ಡಾಯವಾಗಿದೆ.ಆದರೆ ಕಳೆದ ಅನೇಕ ವರ್ಷಗಳಿಂದ ಕೆಲವು ಇಸ್ಲಾಮಿಕ್ ಸಂಘಟನೆಗಳು ಭಾರತದಲ್ಲಿ ಅನಧಿಕೃತವಾಗಿ ಹಲಾಲ್ ಪ್ರಮಾಣ ಪತ್ರವನ್ನು ನೀಡುವ ಮೂಲಕ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡುತ್ತಿದ್ದು ಕೇವಲ ಇಷ್ಟು ಮಾತ್ರವಲ್ಲದೆ ಈ ಹಣವನ್ನು ಭಯೋತ್ಪಾದನಾ ಕೃತ್ಯಗಳಿಗೆ ಯಥೇಚ್ಛವಾಗಿ ಬಳಸಲಾಗುತ್ತಿದೆ.ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಈ ಹಲಾಲ್ ಅರ್ಥ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಮತ್ತು ಹಿಂದೂಗಳು ಹಲಾಲ್ ಚಿನ್ಹೆ ಇರುವ ಪದಾರ್ಥಗಳನ್ನು ಖರೀದಿಸಬಾರದು ಎಂದು ಆಗ್ರಹಿಸಿದರು.
*ಲಾರ್ಡ್ ಮೆಕಾಲೆ ಶಿಕ್ಷಣ ಪದ್ಧತಿ ದೂರವಿಡಿ* ಸೌ.ವಿಜಯ ಉಮಾಕಾಂತ.ನ್ಯಾಯವಾದಿಗಳು
ಇವರು ಮಾತನಾಡುತ್ತ ಲಾರ್ಡ್ ಮೆಕಾಲೆ ಭಾರತಕ್ಕೆ ಬಂದು ಸೂಕ್ಷ್ಮವಾಗಿ ನಮ್ಮ ನಾಗರೀಕತೆ ಬಗ್ಗೆ ತಿಳಿದುಕೊಂಡು ನಮ್ಮ ಸಂಸ್ಕೃತಿ ನಾಶಪಡಿಸಲು ಪ್ರಯತ್ನಿಸುತ್ತಾನೆ,ಹಾಗೆಯೇ ಕ್ರೈಸ್ತ ಮಿಷನರಿಗಳನ್ನು ಸೃಷ್ಟಿಸುವ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದನು.ಇದರ ಪರಿಣಾಮವಾಗಿ ಇಂದು ಕೋಟ್ಯಂತರ ಹಿಂದೂಗಳು ಕ್ರೈಸ್ತ ಮತಕ್ಕೆ ಮತಾಂತರ ವಾಗಿದ್ದಾರೆ ಮತ್ತು ಇಂದಿಗೂ ಸಹ ಅಮಾಯಕ ಹಿಂದೂಗಳಿಗೆ ಆರ್ಥಿಕ ಸಹಾಯ,ಉಚಿತವಾಗಿ
ಶಿಕ್ಷಣ,ಆರೋಗ್ಯ ಸೇವೆಯ ಹೆಸರಿನಲ್ಲಿ ಪ್ರತಿದಿನ ಸಾವಿರಾರು ಹಿಂದೂಗಳನ್ನು ಮತಾಂತರ ಮಾಡುತಿದ್ದಾರೆ ,ಕರ್ನಾಟಕದಲ್ಲಿ ಮತಾಂತರ ನಿಷೇದ ಕಾನೂನು ಪೂರ್ಣಪ್ರಮಾಣದಲ್ಲಿ ಜಾರಿಯಾಗಬೇಕು.ಈ ಕಾಯ್ದೆ ಬಗ್ಗೆ ಕೆಲವು ಮಹತ್ವ
ಪೂರ್ಣಮಾಹಿತಿಗಳನ್ನು ತಿಳಿಸಿಕೊಟ್ಟರು.
ಶ್ರೀ. ಸುದರ್ಶನ್ ನ್ಯಾಯವಾದಿಗಳು.
ಇವರು ಹಿಂದೂ ಕಾರ್ಯಕರ್ತರ ಹತ್ಯೆ ಈ ವಿಷಯದ ಬಗ್ಗೆ ಮಾತನಾಡುತ್ತಾ ನಮ್ಮ ಸರ್ಕಾರಗಳು ಹಿಂದೂ ಕಾರ್ಯಕರ್ತರನ್ನು ಎಂದೂ ರಕ್ಷಣೆ ಮಾಡುವುದಿಲ್ಲ, ರಾಜಕಾರಣಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದ್ದು ಎಲ್ಲರಿಗೂ ತಿಳಿದಿದೆ.ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ ನಮ್ಮ ಹಿಂದೂ ಕಾರ್ಯಕರ್ತರಾದ ಕುಟ್ಟಪ್ಪ,ರುದ್ರೇಶ್, ಹರ್ಷ, ಪ್ರವೀಣ್ ನೆಟ್ಟಾರು, ಪರೆಶ್ ಮೇಸ್ತ ಸೇರಿದಂತೆ 38 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆನಡೆದಿದ್ದು ಇದರ ಹಿಂದೆ ಇಸ್ಲಾಮಿಕ್ ಜಿಹಾದಿ ಶಕ್ತಿಗಳು ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ಮಾಡುತ್ತಿವೆ.ಸರ್ಕಾರಗಳು ಇಂತಹ ಕಾರ್ಯಕರ್ತರ ಕುಟುಂಬದವರಿಗೆ ಸೂಕ್ತ ಆರ್ಥಿಕ ಸಹಾಯವನ್ನು ಒದಗಿಸಬೇಕು ಮತ್ತು ಈ ಹತ್ಯೆಯನ್ನು ಮಾಡಿದವರಿಗೆ ಉಗ್ರ ಶಿಕ್ಷೆಯನ್ನು ನೀಡಬೇಕು ವಕೀಲನಾಗಿ ಕಳೆದ 25 ವರ್ಷಗಳಿಂದ ಹಿಂದೂ ಸಮಾಜದ ಕಾರ್ಯ ಮಾಡುತ್ತಿದ್ದು ಮುಂದೆಯೂ ಕೂಡ ಸಂಘಟನೆಯ ಕಾರ್ಯ ಮಾಡಲು ಕಟಿಬದ್ದನಾಗಿದ್ದೆನೆ ಎಂದು ಮಾತನಾಡುತ್ತಿದ್ದರು.
*ಗುರುಗಳ ಮಾರ್ಗದರ್ಶನದಿಂದ ಸಾಧನೆ ಮಾಡಬೇಕು* ಸೌ. ರೇವತಿ ಹರಿಗೆ ಸನಾತನ ಸಂಸ್ಥೆ
ಇವರು ಮಾತನಾಡಿ ಹಿಂದೆ ರಾಜ ಮಹಾರಾಜರು ದೇವತೆಗಳ ಆಶೀರ್ವಾದ ಮತ್ತು ಗುರುಗಳ ಮಾರ್ಗದರ್ಶನದಂತೆ ಸಾಧನೆ ಮಾಡಿ ಹಿಂದವೀ ಸಾಮ್ರಾಜ್ಯವನ್ನು ಸ್ಥಾಪಿಸಿದರು.ಹಾಗೆಯೇ ನಮ್ಮಲ್ಲಿ ಆತ್ಮಬಲ,ಮನೋಬಲ ವೃದ್ಧಿಆಗಬೇಕು ಎಂದರೆ ಧರ್ಮದ ಆಚರಣೆ ಮಾಡುವುದು ಮುಖ್ಯವಾಗಿದೆ.ಅನೇಕ
ಸಂತ ಮಹಾತ್ಮರು ಮತ್ತು ಭವಿಷ್ಯಕಾರರು ಮುಂದೆ ಬರಲಿರುವ ಭೀಕರ ಅಪತ್ಕಾಲದ ಬಗ್ಗೆ ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ.ಈ ಸಂದರ್ಭದಲ್ಲಿ ಶಾರೀರಕ,ಮಾನಸಿಕವಾಗಿ ಸಿದ್ದರಾಗಬೇಕಿದೆ ಮತ್ತು ಅದಕ್ಕಾಗಿ ಗುರುಗಳ ಮಾರ್ಗದರ್ಶನದಂತೆ ಆಧ್ಯಾತ್ಮಿಕ ಸಾಧನೆ ಮಾಡಬೇಕಿದೆ ಪ್ರಸ್ತುತ ಈಗ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್ ಜಯಂತ ಅಠವಳೆ ಯವರು ಗುರುಕೃಪಾಯೋಗಾನುಸಾರ ಸಾಧನೆ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.ನಾವು ಸಹ ಈ ಪ್ರಕಾರ ಸಾಧನೆಯನ್ನು ಮಾಡುವ ಮೂಲಕ ನಮ್ಮ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಯನ್ನು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ವನ್ನು ಮಾಡೋಣ ಎಂದು ತಿಳಿಸಿದರು.

Leave a Comment