ಶಿವಮೊಗ್ಗ ಹಾಲು ಒಕ್ಕೂಟ ನಂ-1 ಆಗಬೇಕು ಎಂಬುದು ನನ್ನ ಆಸೆ:ಶಿಮುಲ್ ಅಧ್ಯಕ್ಷ ಎನ್.ಹೆಚ್.ಶ್ರೀಪಾದರಾವ್ ರವರ ಮನದಾಳದ ಮಾತು

ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟ ನಂ-1 ಆಗಬೇಕು ಎಂಬುದು ನನ್ನ ಆಸೆ.ಒಕ್ಕೂಟ ರಾಜ್ಯದಲ್ಲಿಯೇ ಮಾದರಿ ಪ್ರಥಮ ಒಕ್ಕೂಟವಾಗಿದೆ.ನಂದಿನಿ ಬ್ರಾಂಡ್  KMF ಸದೃಡವಾಗಿದೆ. ಎಂದು ಒಕ್ಕೂಟದ ಅಧ್ಯಕ್ಷ ರಾದ ಎನ್.ಹೆಚ್.ಶ್ರೀಪಾದರಾವ್ ಹೇಳಿದರು.
ಇಂದು ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ರುವ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರಿಗೆ ಇದೀಗ ನಾನು ಒಕ್ಕೂಟದ ಅದ್ಯಕ್ಷನಾದ ನಂತರ ಲೀಟರ್ ಹಾಲಿಗೆ ರೂ.24.25 ಪೈಸೆ ಇದ್ದ ಬೆಲೆಯನ್ನು ರೂ. 31.85 ಪೈಸೆ ಹೆಚ್ಚಿಸಲಾಗಿದೆ. ಒಟ್ಟು ಪ್ರತಿ ಲೀಟರ್ ಹಾಲಿಗೆ  7 ರೂ. ಹೆಚ್ಚಳವಾಗಿದೆ ಇದರಿಂದ ಒಕ್ಕೂಟಕ್ಕೆ 35 ಲಕ್ಷದ ಹೆಚ್ಚಿನ ಹೊರೆ ಬೀಳಲಿದೆ ಆದರೂ ಹಾಲು ಉತ್ಪಾದಕರಾದ ರೈತರಿಗೆ ನೀಡಲಾಗಿದೆ ಎಂದರು.

ಸರ್ಕಾರದಿಂದ ಅನುದಾನ ಪ್ರತಿ ಲೀಟರ್ ಹಾಲಿಗೆ ರೂ.5 ಸಿಗುತ್ತದೆ. ಇನ್ನು ಜಾಸ್ತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಒಕ್ಕೂಟ ಯಾವುದೇ ಬ್ಯಾಂಕ್ ನಲ್ಲಿ ಸಾಲ ಪಡೆದಿಲ್ಲ.ಮೂಲನಿಧಿ ಸೌಕರ್ಯವಿದೆ.21 ಕೋಟಿ ದರ ವ್ಯತ್ಯಾಸದ ಹಣವಿದೆ.ಇಡೀ ರಾಜ್ಯದಲ್ಲಿ ಹೆಚ್ಚುವರಿ ಹಾಲನ್ನು ಹೊಂದಿದ ಹಾಲಿನ ಒಕ್ಕೂಟದ ಘಟಕ ಅಂದರೆ ಅದು ಶಿವಮೊಗ್ಗ ಎಂದರು.
ಇದೀಗ ಖರ್ಚುಗಳನ್ನು ಸರಿದೂಗಿಸಲು ವಾಹನಗಳಿಗೆ GPS ಅಳವಡಿಸಿ ಒಕ್ಕೂಟದ ವಾಹನಗಳು ಎಲ್ಲೆಂದರಲ್ಲಿ ಓಡಾಡದಂತೆ ಹಣ ಪೋಲಾಗದಂತೆ ನಿಗಾವಹಿಸಲಾಗಿದೆ.ಅದೇ ರೀತಿಯಲ್ಲಿ ಹಾಲಿನ ನೀರಿನ ಅಂಶ ಪತ್ತೆಹಚ್ಚಲು ಹಸಲಿನ ಕೇಂದ್ರಗಳಿಗೆ ಮೆಷಿನ್ ನೀಡಲಾಗಿದೆ.ಇತರೇ ಉತ್ಪನ್ನ ಗಳ ಉತ್ಪಾದನೆ ಮತ್ತು ಮಾರಾಟ ಸಹ ಚೆನ್ನಾಗಿದೆ. ಕೆಎಂಎಪ್ ನಂದಿನಿ ಹಾಲಿಗೆ ಫುಲ್ ಡಿಮ್ಯಾಂಡ್ ಇದೆ ಎಂದರು.

ದೇಶಿಯ ಹಾಲು ಉತ್ಪಾದನೆ ತಳಿಗಳಿಗೆ ಆದ್ಯತೆ ನೀಡಲಾಗಿದೆ.ದೇಶಿಯ ಹಾಲಿಗೆ 1 ಲೀಟರ್ ಹಾಲಿಗೆ 75 ರೂ ಇದೆ. ಬಹು ಬೇಡಿಕೆ ಇದೆ ಎಂದರು.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟವು ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲ ಕಾಲಕ್ಕೆ ಪರಿಷ್ಕರಿಸುತ್ತಿರುವುದು ಸರಿಯಷ್ಟೆ, ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ದಿನಾಂಕ:21.01.2023 ರಿಂದ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ ಹಾಗು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲು ಖರೀದಿ ದರವನ್ನು  ಮತ್ತೊಮ್ಮೆ ಕೆ.ಜಿ.ಗೆ ರೂ. 1.50 ಹೆಚ್ಚಿಸಿ ಪರಿಷ್ಕರಿಸಲು ಒಕ್ಕೂಟದ ಅಧ್ಯಕ್ಷರಾದ ಶ್ರೀ. ಎನ್.ಎಚ್. ಶ್ರೀಪಾದರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಅದರಂತೆ ಒಕ್ಕೂಟದಿಂದ ಸಂಘಗಳಿಗೆ ಹಾಗೂ ಸಂಘಗಳಿಂದ ಹಾಲು ಉತ್ಪಾದಕರಿಗೆ ನೀಡಲಾಗಿದೆ ಎಂದರು.

ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ (ರೂ. ಗಳಲ್ಲಿ ಪ್ರತಿ ಕೆ.ಜಿ ಹಾಲಿಗೆ)(FAT 4.0% SNE 8.50%) 32.15 ಸಂಘದಿಂದ ಉತ್ಪಾದಕರಿಗೆ ಹಾಲಿ ನೀಡುತ್ತಿರುವ ದರ FAT 4.0% SNF 8.50% ಇರುವ ಪ್ರತಿ ಲೀ. ಹಾಲಿಗೆ 
30.29 

ಒಕ್ಕೂಟದಿಂದ ಸಂಘಗಳಿಗೆ ಪರಿಷ್ಕೃತ ದರ ದಿನಾಂಕ; 21.01.2023 ರಿಂದ ನೀಡುವ ದರ (ರೂ. ಗಳಲ್ಲಿ ಪ್ರತಿ ಕೆ.ಜಿ ಹಾಲಿಗೆ) (FAT 4.0 SNF 8.50%) 
33.71 ಸಂಘದಿಂದ ಉತ್ಪಾದಕರಿಗೆ ಪರಿಷ್ಕೃತ ದರ ದಿನಾಂಕ; 21.01.2023 ರಿಂದ ನೀಡುವ ದರ FAT 4,0% SNF 8.50% ಇರುವ ಪ್ರತಿ ಲೀ. ಹಾಲಿಗೆ 
31.85 ಪರಿಷ್ಕೃತ ದರವು ದಿನಾಂಕ 21.01.2023 ರಿಂದ ಜಾರಿಯಲ್ಲಿರುತ್ತದೆ ಎಂದರು.
ಒಕ್ಕೂಟವು ಇದೇ ಸಂದರ್ಭದಲ್ಲಿ ನೂತನವಾಗಿ 'ನಂದಿನಿ ಸಿಹಿ ಲಸ್ಸಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ವಿವಿಧ ನಂದಿನಿ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. 

  ಸಾಗರ ಅಥವಾ ಸೊರಬ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಬಿಜೆಪಿ ಅಭ್ಯರ್ಥಿಯಾಗಿದ್ದೆನೆ: ಒಕ್ಕೂಟದ ಅಧ್ಯಕ್ಷ  ಎನ್.ಹೆಚ್.ಶ್ರೀಪಾದರಾವ್ ಹೇಳಿಕೆ

ಸಾಗರ ಅಥವಾ ಸೊರಬ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಬಿಜೆಪಿ ಅಭ್ಯರ್ಥಿಯಾಗಿದ್ದೆನೆ ಎಂದು ಒಕ್ಕೂಟದ ಅಧ್ಯಕ್ಷ  ಎನ್.ಹೆಚ್.ಶ್ರೀಪಾದರಾವ್ ಹೇಳಿದರು. ನಾನು ಈ ಬಗ್ಗೆ ಬಿಜೆಪಿಯ ಜಿಲ್ಲಾದ್ಯಕ್ಷರಿಗೆ ಮನವಿ ಪತ್ರವನ್ನು ನೀಡಲಿದ್ದೆನೆ. 
ನನಗೆ 100% ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ  ಅವಕಾಶ ಸಿಗಲಿದೆ ಎಂದರು. ಸೊರಬದಲ್ಲಿ ಸರ್ಕಾರಿ ನೌಕರರು ಮತ್ತು ತಹಶಿಲ್ದಾರರ ವರ್ಗಾವಣೆ ಪದೇ ಪದೇ ಆಗುತ್ತಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಆ ಬಗ್ಗೆ ಶಾಸಕರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯ ಬಿಜೆಪಿ ವರಿಷ್ಟರ ಗಮನಕ್ಕೆ ಬಂದಿದೆ  ಎಂದರು.

ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ರಾದ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ,ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.