RSS ಸರ ಸಂಚಾಲಕ ಮೋಹನ್ ಭಾಗವತ್ ಕೋಟೆ ಆಂಜನೇಯ ಸ್ಚಾಮಿ ದೇವಸ್ಥಾನಕ್ಕೆ ಬೇಟಿ- ಪೂಜೆಯಲ್ಲಿ ಭಾಗಿ
ಶಿವಮೊಗ್ಗ: RSS ಸರ ಸಂಚಾಲಕ ಮೋಹನ್ ಭಾಗವತ್ ಇಂದಿನಿಂದ ಮೂರು ದಿನ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದಾರೆ. ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕರ್ತರ ಸಭೆ ನಗರದಲ್ಲಿ ನಡೆಯಲಿದ್ದು ಮೂರು ದಿನ ಭಾಗಿಯಾಗಲಿದ್ದಾರೆ.
ನಗರದ ಹೊನ್ನಾಳಿ ರಸ್ತೆಯಲ್ಲಿರುವ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ 50 ಜನರ ಪ್ರಮುಖರ ಸಭೆ ನಡೆದಿದೆ. ಸಭೆ ಮುಗಿಸಿದ ನಂತರ ಮೋಹನ್ ಭಾಗವತ್ ನಗರದ ವಿವಿಧೆಡೆ ಭೇಟಿ ನೀಡಿದ್ದಾರೆ.ಸಂಜೆಯ ವೇಳೆಗೆ ನಗರದ ಕೋಟೆಯಲ್ಲಿರುವ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಓಟಿ ರಸ್ತೆಯಲ್ಲಿರುವ ದಿ.ದಿನೇಶ್ ಪೈ ಅವರ ಮನೆಗೆ ಭೇಟಿ ನೀಡಿದ್ದಾರೆ. ನಗರದ ಹಿಂದೂ ಶಕ್ತಿ ಕೇಂದ್ರವಾದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರ ಸಂಚಾಲಕರಿಗೆ ಮಂಗಳವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಗಿದೆಆಂಜನೇಯ ಸ್ವಾಮಿಯ ಸಾನಿಧ್ಯದಲ್ಲಿ ಭಾಗವತ್ ರವರಿಗೆ ಸಂಕಲ್ಪ ಮಾಡಿಸಿ ಅರ್ಚನೆ ಮಾಡಿಸಲಾಯಿತು. ನಂತರ ಶ್ರೀರಾಮ ಚರಣಂ ಶ್ರೀ ರಾಮ ಚರಣಂ ಹಾಡಿಗೆ ಮತ್ತು ಆಂಜನೇಯ ಸ್ವಾಮಿ ಸ್ತುತಿಗೆ ಧ್ವನಿಗೂಡಿಸಿದ್ದಾರೆ. ಸುಮಾರು 25 ನಿಮಿಷಗಳ ಕಾಲ ದೇವಸ್ಥಾನದಲ್ಲಿ ಕಾಲಕಳೆದು ಹೋಗುವಾಗ ಅಯ್ಯಂಗಾರ್ ಕುಟುಂಬಕ್ಕೆ ಕಿವಿ ಮಾತು ಹೇಳಿದ್ದಾರೆ.
ದೇವಸ್ಥಾನದ ವಾತಾವರಣ ಕಂಡು ಸಂತೋಷ ಪಟ್ಟ ಭಾಗವತರು ದೇವಸ್ಥಾನವನ್ನ ಅದ್ಬುತವೆಂದು ಬಣ್ಣಿಸಿದ್ದಾರೆ. ನಾಳೆ ಪೇಸ್ ಕಾಲೇಜಿನಲ್ಲಿ ಸಭೆ ನಡೆಯಲಿದ್ದು, 650 ಜನ ಭಾಗಿಯಾಗಲಿದ್ದಾರೆ. ನಾಡಿದ್ದು ಸಹ ನಗರದಲ್ಲಿಯೇ ಇದ್ದು ಸಂಜೆಯ ಮೇಲೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.
ಇವರೊಂದಿಗೆ ಆರ್ ಎಸ್ ಎಸ್ ನ ಪಟ್ಟಾಭಿ ರಾಮ, ಸಹಕಾರ್ಯವಾಹಕ್ ಮುಕುಂದ್ ಜೀ(ಮುಂದಿನ ಸರ್ ಸಂಚಾಲಕ್) ಪ್ರಾಂತ ಕಾರ್ಯದ ಪ್ರಮುಖರಾದ ಸುಧೀರ್ ಮೊದಲಾದವರು ಭಾಗವತರಿಗೆ ಸಾಥ್ ನೀಡಿದ್ದರು.
Leave a Comment