ಗುರುರಾಜ್ ಕೆ. ಟಿ, ಪೊಲೀಸ್ ನಿರೀಕ್ಷಕರು ಇವರಿಗೆ DSCI Excellence Indian Cyber Cop ಪ್ರಶಸ್ತಿ

  ಶಿವಮೊಗ್ಗ: ಗುರುರಾಜ್ ಕೆ. ಟಿ, ಪೊಲೀಸ್ ನಿರೀಕ್ಷಕರು, ಸೈಬರ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ (ಹಾಲಿ ಕಡೂರು ಪಿ.ಟಿ.ಎಸ್)* ರವರು, POCSO & IT ಕಾಯ್ದೆ ಅಡಿಯಲ್ಲಿ ದಾಖಲಾದ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿ ದೋಷರೋಪಣ ಪತ್ರ ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಆರೋಪಿಗೆ ಶಿಕ್ಷೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ  DSCI ನಿಂದ ನೀಡಲಾಗುವ *DSCI Excellence Award - 2022 ನ Indian Cyber Cop of the year* ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದಿನಾಂಕ: 22-12-2022 ರಂದು ಹರ್ಯಾಣ ರಾಜ್ಯದ ಗುರ್ಗಾಂವ್ ನಲ್ಲಿ ನಡೆದ NASSCOM-DSCI Annual Information Security Summit ನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು* ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ  ಗುರುರಾಜ್ ಕೆಟಿ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಗುರುರಾಜ್ ಕೆ. ಟಿ, ಪೊಲೀಸ್ ನಿರೀಕ್ಷಕರು, ಸೈಬರ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ (ಹಾಲಿ ಕಡೂರು ಪಿ.ಟಿ.ಎಸ್)* ರವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಅಂತಾನೇ ಹೇಳಬಹುದು. ಶಿವಮೊಗ್ಗದಲ್ಲಿ ಕರ್ತವ್ಯವನ್ನು ನಿರ್ವಹಿಸುವ ಸಮಯದಲ್ಲಿ ಹಲವಾರು ಮಹತ್ವದ ಪ್ರಕರಣಗಳನ್ನು ಬೇದಿಸಿದ್ದರು. DSCI ನಿಂದ ನೀಡಲಾಗುವ *DSCI Excellence Award - 2022 ನ Indian Cyber Cop of the year* ಪ್ರಶಸ್ತಿಗೆ ಭಾಜನರಾಗಿದ್ದಾರೆ.ಇವರಿಗೆ ಹಲೋ ಶಿವಮೊಗ್ಗ ದಿನಪತ್ರಿಕೆ ಬಳಗದ ವತಿಯಿಂದ ಅಭಿನಂದನೆಗಳು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.