ನಾಳೆ ಗೋಪಾಲಗೌಡ ಬಡಾವಣೆಯಲ್ಲಿ ರಾಜಸ್ಥಾನಿ ಥಾಲಿ ಊಟ ‘ಸ್ವಾದ್ ಭವನ್ ಉದ್ಘಾಟನೆ

ಶಿವಮೊಗ್ಗ:   ಡಿ.28ರಂದು ಗೋಪಾಲಗೌಡ ಬಡಾವಣೆಯ 100 ಅಡಿ ರಸ್ತೆಯಲ್ಲಿರುವ ದಾವಣಗೆರೆ ಬೆಣ್ಣೆದೋಸೆ ಕ್ಯಾಂಪ್ ಪಕ್ಕದಲ್ಲಿ ‘ಸ್ವಾದ್ ಭವನ್’ ಎಂಬ ರಾಜಸ್ಥಾನಿ ಥಾಲಿ ಊಟದ ಹೋಟೆಲ್ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಮೇಯರ್ ಶಿವಕುಮಾರ್ ಹೋಟೆಲ್ ಉದ್ಘಾಟಿಸುವರು ಎಂದು ಮಾಲೀಕ ಉದ್ಯಮಿ ನವೀನ್‌ಕುಮಾರ್ ಹೇಳಿದರು.

ಇಂದು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೋಟೆಲ್ ಅನುಭವದ ಹಿನ್ನೆಲೆಯಲ್ಲಿ ಜನತೆಗೆ ಹೊಸ ರೀತಿಯ ಹೊಸತರದ ರುಚಿ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಈ ರಾಜಸ್ಥಾನಿ ಥಾಲಿ ಊಟದ ಹೋಟೆಲ್ ಅನ್ನು ನಾಳೆಯಿಂದ ಆರಂಭಿಸಲಾಗುವುದು. ಬೆಳಿಗ್ಗೆ 11-30ರಿಂದ 3-30 ಸಂಜೆ 7ರಿಂದ 9-30ರವರೆಗೆ ಹೋಟೆಲ್ ತೆರೆದಿರುತ್ತದೆ ಎಂದರು.

ರಾಜಸ್ಥಾನಿ ಮಾದರಿಯ ಜೊತೆಗೆ ದಕ್ಷಿಣ ಭಾರತದ ಮಾದರಿಯನ್ನೂ ಬೆರೆಸಿಕೊಂಡ ಒಂದು ಅತ್ಯುತ್ತಮ ಹೋಟೆಲ್ ಇದಾಗಿದೆ ಎಂದರು.

ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್ ಸುರೇಖಾ ಮುರುಳೀಧರ್, ಮಂಜುನಾಥ್ ಮುಂತಾದವರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ತಾಯಿ ಉಮಾದೇವಿ ಇದ್ದರು.
[

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.