ಭದ್ರಾವತಿ: ಶ್ರೀರಾಮನಗರದ ಶ್ರೀಮತಿ ಜಯಮ್ಮ ನಿಧನ- ಸಂತಾಪ
ಭದ್ರಾವತಿ: ಶ್ರೀರಾಮನಗರದಲ್ಲಿ ವಾಸವಾಗಿದ್ದ ಫಾರೆಸ್ಟ್ ಇಲಾಖೆಯಲ್ಲಿನ ದಿ||ಲಕ್ಕಣ್ಣರವರ ಪತ್ನಿ ಶ್ರೀಮತಿ ಜಯಮ್ಮ (83)ಅವರು ಇಂದು ಬೆಳಿಗ್ಗೆ ನಿಧನ ರಾಗಿದ್ದಾರೆ.ಇವರು ಎರಡು ದಿವಸದ ಹಿಂದೇ ಅನಾರೋಗ್ಯದ ನಿಮಿತ್ತ ಶಿವಮೊಗ್ಗದ ಖಾಸಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿಯೇ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಶ್ರೀಮತಿ ಜಯಮ್ಮ ರವರ ಪಾರ್ಥಿವ ಶರೀರವನ್ನು ಇದೀಗ ಶ್ರಿರಾಮನಗರದ ಸ್ವ ಗೃಹಕ್ಕೆ ತೆಗೆದುಕೊಂಡು ಹೋಗಿದ್ದು, ನಾಳೆ ಬೆಳಿಗ್ಗೆ ಭಾನುವಾರ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಮೃತ ಜಯಮ್ಮರಿಗೆ 5 ಜನ ಗಂಡುಮಕ್ಕಳು, 1)ಎಂ.ಎಲ್. ಯಶೋದರಯ್ಯ ಪುಟ್ಟಣ್ಣ,2)ಎಂ.ಎಲ್. ಮೋಹನ್,3)ಎಂ.ಎಲ್. ನಾಗರಾಜ್,4) ಎಂ.ಎಲ್. ಮುರುಳಿ,5) ಎಂ.ಎಲ್ .ಬಾಲು ಎಲ್ಲಾ ಮಕ್ಕಳಿಗೂ ಮದುವೆಯಾಗಿದೆ. ಮೃತ ಜಯಮ್ಮರವರು ಮೊಮ್ಮಕ್ಕಳನ್ನು ಸಹ ಕಂಡು ಕೆಲವು ಮೊಮ್ಮಕ್ಕಳಿಗೆ ಮದುವೆ ಸಹ ಆಗಿರುತ್ತದೆ. ಬಹಳ ದೊಡ್ಡ ಫ್ಯಾಮಿಲಿಯಾಗಿದೆ.
ಮೃತ ಶ್ರೀಮತಿ ಜಯಮ್ಮರವರ ಹಿರಿಯಪುತ್ರ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ಪಡೆದ ಎಂ.ಎಲ್. ಯಶೋದರಯ್ಯ( ಪುಟ್ಟಣ್ಣ) ರವರು ಹಾಲಿ ವೀರಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿರುತ್ತಾರೆ. ಇನ್ನು ಉಳಿದ ನಾಲ್ಕು ಜನ ಗಂಡುಮಕ್ಕಳು ಸಹ ತಮ್ಮ ಫ್ಯಾಮಿಲಿ ಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ.
ಮೃತ ಶ್ರೀಮತಿ ಜಯಮ್ಮ ರವರ ನಿಧನದ ಸುದ್ದಿ ತಿಳಿದು ಅತೀವ ನೋವಾಗಿದೆ. ನಾವು ಸಹ ಬಹಳ ವರ್ಷಗಳ ಕಾಲ ರಾಮನಗರದಲ್ಲಿ ವಾಸವಾಗಿದ್ದೆವು. ಇಡೀ ಕುಟುಂಬದ ಪರಿಚಯ ಮತ್ತು ಅವರ ಮಕ್ಕಳ ಒಡನಾಟ ಸಹ ಇತ್ತು.ಬಿಗ್ ಫ್ಯಾಮಿಲಿ ಎಲ್ಲರೂ ಚೆನ್ನಾಗಿದ್ದರು. ಮೃತ ಜಯಮ್ಮ ರವರು ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೀ ಎಂದು ಪ್ರಾರ್ಥಿಸುವ...
Leave a Comment