ಭವಿಷ್ಯದಲ್ಲಿ ಆಪ್ತ ಸಮಾಲೋಚನೆ ಅಗತ್ಯ ಕ್ಷೇತ್ರ; ಡಾ. ವಿನಯ

ಶಿವಮೊಗ್ಗ : "ಭವಿಷ್ಯದಲ್ಲಿ ಆಪ್ತ ಸಮಾಲೋಚನೆ ಅತ್ಯಂತ ಅಗತ್ಯ ಕ್ಷೇತ್ರವಾಗಲಿದೆ. ಈ ಬಗೆಗಿನ ಸಾಂಪ್ರದಾಯಿಕ ಅಧ್ಯಯನ ನಡೆಸಿರುವ ವಿದ್ಯಾರ್ಥಿಗಳ ಪ್ರಾಮುಖ್ಯತೆಯೂ ಹೆಚ್ಚಲಿದೆ" ಎಂದು ಸುಬ್ಬಯ್ಯ ದಂತ ಮಹಾವಿದ್ಯಾಲಯದ ಕಾರ್ಯಕಾರಿ ನಿರ್ದೇಶಕಿ ಡಾ. ವಿನಯ ಅಭಿಪ್ರಾಯಪಟ್ಟರು.ಇಲ್ಲಿನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕ್ಲಿನಿಕಲ್ ಸೈಕಾಲಜಿ (ನೈದಾನಿಕ ಮನೋವಿಜ್ಞಾನ) ವಿಭಾಗ ಮಂಗಳವಾರ ಆಯೋಜಿಸಿದ್ದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗೆಗಿನ ಪಿಡುಗುಗಳು ಇನ್ನೂ ಪ್ರಭಾವಿಯಾಗಿ ಇವೆ. ಈ ಸನ್ನಿವೇಶವನ್ನು ದೂರ ಮಾಡುವ ಪ್ರಮುಖ ಜವಾಬ್ದಾರಿ ನಮ್ಮ ಮನಶಾಸ್ತ್ರ ವಿದ್ಯಾರ್ಥಿಗಳ ಮುಂದಿದೆ ಎಂದರು.
ಪ್ರಾಚಾರ್ಯೆ ಡಾ ಸಂಧ್ಯಾ ಕಾವೇರಿ ಮಾತನಾಡಿ "ವಿದ್ಯಾರ್ಥಿಗಳನ್ನು ವೃತ್ತಿಪರವಾಗಿ ತರಬೇತಿಗೊಳಿಸುವುದು ನಮ್ಮ ಕಾಲೇಜಿನ ಮುಖ್ಯ ಉದ್ದೇಶವಾಗಿತ್ತು. ಈ ಉದ್ದೇಶ ಖಂಡಿತವಾಗಿ ಸಾಧಿತಗೊಂಡಿದೆ ಎನ್ನುವುದಕ್ಕೆ ವಿದ್ಯಾರ್ಥಿಗಳು ಹೊಂದಿರುವ ಪ್ರಾಯೋಗಿಕ ಪ್ರಮಾಣಪತ್ರಗಳೇ ನಿದರ್ಶನ. ಈ ಅನುಭವಗಳನ್ನು ವಿದ್ಯಾರ್ಥಿಗಳು ಬಹುಬೇಗ ಸಮುದಾಯಕ್ಕೆ ಉಪಯುಕ್ತವಾಗಿ ಬಳಸಲಿದ್ದಾರೆ " ಎಂದರು.
ವಿದ್ಯಾರ್ಥಿಗಳು ನಿರಾಶ್ರಿತ ಕೇಂದ್ರಗಳಲ್ಲಿ ನಡೆಸಿದ ಆಪ್ತಸಮಾಲೋಚನೆ, ಹೊಂಗಿರಣ ಶಾಲೆಯಲ್ಲಿ ನಡೆಸಿದ ಸಂವಾದ, ಶಿವಮೊಗ್ಗ ಮಹಿಳಾ ಕಾರಾಗೃಹದಲ್ಲಿ ನಡೆಸಿದ ಆಪ್ತ ಸಮಲೋಚನೆ ಮತ್ತು ಖೈದಿಗಳೊಂದಿಗೆ ಸಂವಾದ, ಮಾನಸ ಆಸ್ಪತ್ರೆಯಲ್ಲಿ ನಡೆಸಿದ ಎರಡು ವರ್ಷದ ಕ್ಲಿನಿಕಲ್ ಅಧ್ಯಯನ ಮುಂತಾದ ಪ್ರಾಯೋಗಿಕ ಕಲಿಕೆಗಳನ್ನು ನೆನೆದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.