ಪಾಕಿಸ್ತಾನದಲ್ಲಿ ಮಹಿಳೆಯ ಬರ್ಬರ ಹತ್ಯೆಗೆ ಖಂಡನೆ; ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಶಿವಮೊಗ್ಗ: ಪಾಕಿಸ್ತಾನದ ಸಿಂಧೋರ್‌ನಲ್ಲಿ 40 ವರ್ಷದ ಅಬಲೆ ಹಿಂದು ವಿಧವೆ ದಯಾ ಬೇಲ್ ಎಂಬುವವರ ಶಿರಚ್ಛೇದನ ಮಾಡಿ ಸ್ತನಗಳನ್ನು ಕತ್ತರಿಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ಬಿಜೆಪಿ ನಗರ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಿದರು.ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ರಸ್ತೆಗೆ ಎಸೆಯಲಾಗಿತ್ತು. ಈ ಘಟನೆಗಳ ಹಿಂದಿರುವ ಆರೋಪಿಗಳನ್ನು ಪಾಕಿಸ್ತಾನ ಸರ್ಕಾರ ಬಂಧಿಸಿ ಕೂಡಲೇ ಶಿಕ್ಷೆಗೆ ಒಳಪಡಿಸ ಬೇಕು. ಹಾಗೂ ಪಾಕಿಸ್ತಾನದಲ್ಲಿರುವ ಹಿಂದುಗಳ ರಕ್ಷಣೆಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರುವಂತೆ ರಾಷ್ಟ್ರಪತಿಗಳಲ್ಲಿ ಮಹಿಳಾ ಮೋರ್ಚಾ ಆಗ್ರಹಿಸಿದೆ.
ಮಹಿಳೆಯರ ಮೇಲೆ ಆಗುತ್ತಿರುವ ಎಲ್ಲಾ ದೌರ್ಜನ್ಯಗಳ ವಿರುದ್ಧ ಮಹಿಳಾ ಮೋರ್ಚಾ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ಸುರೇಖಾ ಮುರುಳೀಧರ್, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಶ್ರೀನಿವಾಸ್,ಆರತಿ ಅ.ಮ. ಪ್ರಕಾಶ್, ಖಜಾಂಚಿ ಶಿವಕುಮಾರ್ ಹಾಗೂ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಭಾಗವಹಿಸಿದ್ದರು.
Leave a Comment