ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಬುಲ್ಡೋಜರ್ ಬಳಸಿ ದೋಷಪೂರಿತ ಸೈಲೆನ್ಸರ್ ನಾಶ
ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವಶ ಪಡಿಸಿಕೊಳ್ಳಲಾದ ದೋಷಪೂರಿತ ಸೈಲೆನ್ಸರ್ (Defective Silencer) ಗಳನ್ನು ಮತ್ತು ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ (Shrill Horns) ಗಳನ್ನು ಈ ದಿನ ದಿನಾಂಕಃ-23-12-2022 ರ ಸಂಜೆ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಸಮ್ಮುಖದಲ್ಲಿ ಶಿವಮೊಗ್ಗನಗರದ ಶಿವಪ್ಪ ನಾಯಕ ಸರ್ಕಲ್ ನಲ್ಲಿ 70 Defective Silencer ಮತ್ತು 30 Shrill Horns ಗಳನ್ನು, ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಯಿತು.
ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ ರವರ ಸಮ್ಮುಖದಲ್ಲಿ ಭದ್ರಾವತಿಯ ಅಂಡರ್ ಬ್ರಿಡ್ಜ್ ಹತ್ತಿರ 135 Defective Silencer ಗಳನ್ನು, ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ ರವರ ಸಮ್ಮುಖದಲ್ಲಿ ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಯಿತು.
ಸಾಗರ ಟೌನ್ ಸೊರಬ ರಸ್ತೆಯ ಐತಪ್ಪ ವೃತ್ತದಲ್ಲಿ 14 Defective Silencer ಮತ್ತು 11 Shrill Horns ಗಳನ್ನು, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ರವರ ಸಮ್ಮುಖದಲ್ಲಿ ಶಿಕಾರಿಪುರ ಟೌನ್ ಅಂಬೇಡ್ಕರ್ ವೃತ್ತದಲ್ಲಿ 12 Defective Silencer ಗಳು ಸೇರಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 231 Defective Silencer ಮತ್ತು 41 Shrill Horns ಗಳನ್ನು ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.ಮುಂದಿನ ದಿನಗಳಲ್ಲಿಯೂ ಸಹಾ Defective Silencer ಮತ್ತು Shrill Horns ಗಳನ್ನು ಬಳಸುವ ಚಾಲಕ / ಮಾಲೀಕರುಗಳ ವಿರುದ್ಧ ಇದೇ ರೀತಿಯ ಕಾರ್ಯಾಚರಣೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದರು.
Leave a Comment