"ಪೂಜಾರ್ ಮ್ಯೂಸಿಕಲ್ ಪರಿಚಯ ಮತ್ತು ಪೂಜಾರ್ ಮ್ಯೂಸಿಕಲ್ ಬ್ರಾಂಡೆಡ್ ಇನ್ಸ್ಟ್ರುಮೆಂಟ್ಸ್ ಮಾರುಕಟ್ಟೆಗೆ ಬಿಡುಗಡೆ
ಶಿವಮೊಗ್ಗ: ಎರಡು ವರ್ಷಗಳ ಹಿಂದೆ, ನಾವು ಪೂಜಾರ್ ಅಕಾಡೆಮಿ ಆಫ್ ಮ್ಯೂಸಿಕ್ & ಟೆಕ್ನಾಲಜಿ ಅನ್ನುವ ಟ್ರಸ್ಟ್ ಪ್ರಾರಂಭಿಸಿದ್ದೇನೆ - ಇದು ಒಂದು ಶಿವಮೊಗ್ಗ ಪ್ರದೇಶದಲ್ಲಿ, ಸಂಗೀತ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಒದಗಿಸುವ ಗುರಿಯನ್ನು ಹೊಂದಿರುವ ಚಾರಿಟೇಬಲ್ ಮತ್ತು ಎಜುಶೇಷನಲ್ ಟ್ರಸ್ಟ್, ಇಲ್ಲಿಯವರೆಗೆ, ನಾವು 300+ ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ, ಕರ್ನಾಟಕ ಮತ್ತು ಪಾಶ್ಚಾತ ಸಂಗೀತ ಕ್ಷೇತ್ರಗಳಲ್ಲಿ ಗಾಯನ ಮತ್ತು ವಾದ್ಯ ಶೈಲಿಗಳಲ್ಲಿ ತರಬೇತಿ ನೀಡಿದ್ದೇವೆ ಎಂದು ರಾಜೀವ್ ಪೂಜಾರ್ ಹೇಳಿದರು.ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,ನಮ್ಮಸಂಗೀತ ಮತ್ತು ತಂತ್ರಜ್ಞಾನದಲ್ಲಿನ ಶ್ರೀಮಂತ ಅನುಭವವನ್ನು ಬಳಸಿ, ನಾವು ಈ ವರ್ಷ 'ಪೂಜಾರ ಮ್ಯೂಸಿಕಲ್' ಅನ್ನುವ ಉದ್ಯಮವನ್ನು ಪ್ರಾರಂಭಿಸಿದ್ದೇವೆ. ಇದು ಒಂದು ಆರಂಭಿಕರಿಂದ ಹಿಡಿದು ವೃತ್ತಿಪರ ಸಂಗೀತಗಾರರಿಗೆ ಕೂಡ ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಗೀತದ ವಾದ್ಯಗಳ ತಯಾರಿಕೆ ಮತ್ತು ವಿತರಣೆ ಮಾಡುವ ಮೇಲೆ ಕೇಂದ್ರೀಕೃತವಾದ ಘಟಕ ಆಗಿದೆ ಎಂದರು.
ಭಾರತವು ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ $ 22 ಮಿಲಿಯನ್ ಮೌಲ್ಯದ ಸಂಗೀತ ಉಪಕರಣಗಳು ಮತ್ತು ಅವುಗಳ ಪರಿಕರಗಳನ್ನು ರಫ್ತು ಮಾಡಿದೆ. ಇಡೀ 2021-22 ರಲ್ಲಿ $ 38.5 ಮಿಲಿಯನ್‌ಗೆ ಹೋಲಿಸಿದರೆ, ಕಳೆದ ಎರಡು ವರ್ಷಗಳಲ್ಲಿ ಸಂಗೀತವನ್ನು ಕಲಿಯುವುದು ಪ್ರಪಂಚದಾದ್ಯಂತದ ಅತ್ಯಂತ ಒಲವು ಹೊಂದಿರುವ ಹವ್ಯಾಸಗಳಲ್ಲಿ ಒಂದಾಗಿದೆ. ಕೋವಿಡ್-19 ಸಾಂಕ್ರಾಮಿಕವು ಜನರನ್ನು ಮನೆಯೊಳಗೆ ಇರುವಂತೆ ಮಾಡಿತು ಎಂದರು.
ಭಾರತೀಯ ಸಂಗೀತ ವಾದ್ಯಗಳನ್ನು ತಯಾರಿಸಲು ಉತ್ತಮ ಕೌಶಲ್ಯ ಮತ್ತು ಹೆಚ್ಚು ಅನುಭವದ ಅಗತ್ಯವಿದೆ. ಭಾರತೀಯ ಮತ್ತು ರಫ್ತು ಮಾರುಕಟ್ಟೆಗಳಿಗೆ ಈ ಉಪಕರಣಗಳನ್ನು ಸಿದ್ಧಗೊಳಿಸಲು, ನಾವು ದೇಶಾದ್ಯಂತ ಅತ್ಯುತ್ತಮ ಕುಶಲಕರ್ಮಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಶಿವಮೊಗ್ಗವನ್ನು ಈ ಹೊಸ ಉದ್ಯಮದ ಕೇಂದ್ರವಾಗಿ ಇರಿಸಲು ಬಯಸಿದ್ದೇವೆ ಎಂದರು.
ನಮ್ಮ ವಿಶೇಷತೆ - ಸಂಗೀತಗಾರರಿಂದ ಸಂಗೀತಗಾರರವರೆಗೆ ಸಂಗೀತ ಉತ್ಪನ್ನಗಳು, ಭಾರತೀಯ ವಾದ್ಯಗಳ ತಯಾರಿಕೆ, ಪಾಶ್ಚಿಮಾತ್ಯ ವಾದ್ಯಗಳ ಉನ್ನತ ಬ್ರಾಂಡ್‌ಗಳ ವಿತರಣೆ, ಉತ್ಪನ್ನಗಳ ಅತ್ಯುತ್ತಮ ಗುಣಮಟ್ಟ, ಮತ್ತು ಹೆಚ್ಚಿನ ಬಳಕೆದಾರರನ್ನು ತಲುಪಲು ಕೈಗೆಟುಕುವಿಕೆಯ ದರಗಳು.
ಪ್ರೊ.ಶ್ರೀ ಇಂದೂಧರ್ ಪೂಜಾರ್: ಇವರು ಪ್ರಖ್ಯಾತ ಶಿಕ್ಷಣ ತಜ್ಞ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತಗಾರರಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ, ಇವರು ಪ್ರಖ್ಯಾತ ಹಿಂದೂಸ್ತಾನಿ ಗಾಯಕ, ಹಿರಿಯ ಆಲ್ ಇಂಡಿಯಾ ರೇಡಿಯೋ ಕಲಾವಿದ, ಪರಿಣಿತ ಹಾರ್ಮೋನಿಯಂ ವಾದಕರು ಮತ್ತು 50+ ವರ್ಷಗಳ ಕಾಲ ಭಾರತದಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ, ಶ್ರೀಯುತ ಪೂಜಾರ್ ಅವರು ಕುವೆಂಪು ವಿಶ್ವವಿದ್ಯಾನಿಲಯದ ಮೊದಲ ಕುಲಸಚಿವರಾಗಿ ಭದ್ರ ಬುನಾದಿ ಹಾಕಿದ್ದಾರೆ, 30+ ಸುದೀರ್ಘ ವರ್ಷಗಳ ಕಾಲ ತುಂಗಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದರು ಮತ್ತು ಬೆಂಗಳೂರಿನ East-West ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನೊಂದು ಪ್ರಮುಖ ಅಂಶವೆಂದರೆ, ಮೈಸೂರು ವಿಶ್ವವಿದ್ಯಾನಿಲಯದ ಚಿನ್ನದ ಪದಕದೊಂದಿಗೆ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು.
ಶಿವಮೊಗ್ಗ ಪ್ರದೇಶದ ಶಿಕ್ಷಣ ಮತ್ತು ಸಂಗೀತ ಕ್ಷೇತ್ರಗಳ ಅಭಿವೃದ್ಧಿಗೆ, ಶ್ರೀಯುತ ಪೂಜಾರ್ ಕಳೆದ ಸುಮಾರು 60+ ವರ್ಷಗಳಿಂದ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದ್ದಾರೆ.
84+ ವಯಸ್ಸಿನಲ್ಲೂ ಕೂಡ ಶ್ರೀಯುತ ಪೂಜಾರ್ ಅವರು ಶಿವಮೊಗ್ಗದಲ್ಲಿ 'ಪೂಜಾರ್ ಮ್ಯೂಸಿಕಲ್ಸ್' ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಮಾರ್ಗದರ್ಶನ ಭವಿಷ್ಯದ ಭಾರತೀಯ ವಾದ್ಯಗಳನ್ನು ವಿಶ್ವ ಮಾರುಕಟ್ಟೆಗೆ ಲಭ್ಯವಾಗುವಂತೆ ಮಾಡಲು ಬಲವಾದ ಅಡಿಪಾಯವನ್ನು ಹಾಕಲು ನಮಗೆ ಸಹಾಯ ಮಾಡಿದ್ದಾರೆ ಎಂದರು.
Leave a Comment