*ಹಿಂದೂ ಜನಜಾಗೃತಿ ಸಮಿತಿಯಿಂದ ಶಿವಮೊಗ್ಗದ ಗುರುಪುರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ !*
*ಶಿವಮೊಗ್ಗ* (೨೮೧೨) : ಹಿಂದೂ ಜನಜಾಗೃತಿ ಸಮಿತಿಯಿಂದ ಶಿವಮೊಗ್ಗ ನಗರದ ಗುರುಪುರದ ಶ್ರೀ ನಂಜುಂಡೇಶ್ವರ ಸಮುದಾಯ ಭವನದಲ್ಲಿ ದಿನಾಂಕ ೨೮.೧೨.೨೨ ರಂದು ಹಿಂದೂ ರಾಷ್ಟ್ರ ಜಾಗೃತಿ ಸಭೆ ನಡೆಸಲಾಯಿತು. ಸಭೆಯ ವಕ್ತರರಾಗಿ ಗುರುಪುರದ ಮಾಜಿ ಮಂಡಲ ಪ್ರದಾನರು ಆದ ಶ್ರೀ ಡಿ. ಮಂಜಯ್ಯ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಜಯ ರೇವಣ್ಕರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಪ್ರಾರಂಭಿಸಲಾಯಿತು.
*ಹಿಂದೂಗಳ ಮೆಲಾಗುತ್ತಿರುವ ಆಘಾತಗಳಿಂದ ಮುಕ್ತರಾಗಲು ಕೇವಲ ಆದರ್ಶ ಹಿಂದೂ ರಾಷ್ಟ್ರ ಸ್ಥಾಪನೆಯೊಂದರೆ ಏಕೈಕ ಪರಿಹಾರವಾಗಿದೆ - ಶ್ರೀ ವಿಜಯ ರೇವಣ್ಕರ ,*
ಈ ಸಂದರ್ಭದಲ್ಲಿ ಇವರು ಮಾತನಾಡುತ್ತಾ, ಇಂದು ಎಲ್ಲೆಡೆ ಮತಾಂತರ, ಲವ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆ, ಭ್ರಷ್ಟಾಚಾರ, ಕಾನ್ವೆಂಟ್ ಶಿಕ್ಷಣದಿಂದ ಮಕ್ಕಳ ಮೇಲಾಗುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಹೀಗೆ ಅನೇಕ ರೀತಿಯಲ್ಲಿ ಹಿಂದೂಗಳ ಮೇಲೆ ಆಘಾತಗಳಾಗುತ್ತಿದ್ದು, ಅದರಿಂದ ಮುಕ್ತರಾಗಲು ಕೇವಲ ಆದರ್ಶ ಹಿಂದೂ ರಾಷ್ಟ್ರ ಸ್ಥಾಪನೆಯೊಂದೆ ಏಕೈಕ ಪರಿಹಾರ ಎಂದು ಹೇಳಿದರು. ಮುಂದೆ ಮಾತನಾಡುತ್ತ ಧರ್ಮಾಚರಣೆಯಿಂದಲೇ ಈ ರಾಷ್ಟ್ರವು ಬಲಿಷ್ಠವಾಗುತ್ತದೆ. ಮತ್ತು ಧರ್ಮಾಚರಣೆಯಿಂದ ನಮ್ಮ ಆಧ್ಯಾತ್ಮಿಕ ಸಾಧನೆಯಾಗಿ ನಮ್ಮ ಕಾರ್ಯದಲ್ಲಿ ಭಗವಂತನ ಕೃಪೆಯು ಸಿಗುತ್ತದೆ ಮತ್ತು ಇದರಿಂದ ಹಿಂದೂ ರಾಷ್ಟ್ರ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಆದ್ದರಿಂದ ನಾವೆಲ್ಲರೂ ಧರ್ಮಾಚರಣೆಯನ್ನು ಮಾಡೋಣ ಎಂದು ಉಪಸ್ಥಿತರಿಗೆ ಕರೆ ನೀಡಿದರು.
Leave a Comment