ಶಿವಮೊಗ್ಗ ನಗರದಲ್ಲಿ *ಸುಗಮ ಸಂಚಾರ ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕುರಿತು ಕೆಲವು ಮಹತ್ವದ ತೀರ್ಮಾನ
ಶಿವಮೊಗ್ಗ: ದಿನಾಂಕಃ27-12-2022 ರಂದು ಮದ್ಯಾಹ್ನ 04:00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣ 3ನೇ ಮಹಡಿ ಶಿವಮೊಗ್ಗದಲ್ಲಿ, ಶಿವಮೊಗ್ಗ ನಗರದಲ್ಲಿ *ಸುಗಮ ಸಂಚಾರ ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಸಭೆಯನ್ನು* ಹಮ್ಮಿಕೊಳ್ಳಲಾಗಿತ್ತು.ಸದರಿ ಸಭೆಯಲ್ಲಿ *ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು,* ಮಹಾನಗರ ಪಾಲಿಕೆಯ ಚುನಾಯಿತ ಪ್ರತಿನಿಧಿಗಳು, ಶಾಲಾ ಬಸ್, ಖಾಸಗಿ ಬಸ್ ಮತ್ತು ಸಿಟಿ ಬಸ್ ಗಳ ಮಾಲೀಕರ, ಆಟೋ ಚಾಲಕರು ಮತ್ತು ಮಾಲೀಕರ, ಲಾರಿ ಮಾಲೀಕರ, ಆಂಬ್ಯುಲೆನ್ಸ್ ವಾಹನಗಳ ಮಾಲೀಕರ ಹಾಗೂ ಇತರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಶಿವಮೊಗ್ಗ ನಗರದ *ಸಂಚಾರ ಸುಧಾರಣೆ ಕುರಿತಂತೆ ಸಲಹೆಗಳನ್ನು ಆಲಿಸಿ, ಈ ಕೆಳಕಂಡ ಮಾಹಿತಿಯನ್ನು* ನೀಡಲಾಯಿತು.1) *ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಬೇರೆ ಬೇರೆ ಸಮಯದಲ್ಲಿ ನಿಷೇಧಿಸಲಾಗಿದ್ದು* ಇನ್ನು ಮುಂದೆ ಸಾರ್ವಜನಿಕರ ಅನುಕೂಲ ಮತ್ತು ಸಂಚಾರ ಹಿತದೃಷ್ಟಿಯಿಂದ *ಬೆಳಗ್ಗೆ 8:00 ಗಂಟೆಯಿಂದ ಸಂಜೆ 8:00 ಗಂಟೆಯವರೆಗೆ* ಭಾರೀ ವಾಹನಗಳು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಂಚರಿಸುವುದನ್ನು ನಿಷೇಧಿಸಲು ಮತ್ತು *ಈಗಾಗಲೇ ನಿಷೇದಿಸಿದ ಮಾರ್ಗಗಳೊಂದಿಗೆ ಹೊಸದಾಗಿ*
ಎ) *ಸಂದೇಶ್ ಮೋಟರಿಂದ ಅಶೋಕ ಸರ್ಕಲ್* ಮಾರ್ಗವಾಗಿ ಎಪಿಎಂಸಿ ವರೆಗೆ,
ಬಿ) *ಮಹಾವೀರ ವೃತದಿಂದ* ಕೆ ಬಿ ವೃತ್ತದ ವರೆಗೆ,
ಸಿ) *ಮಹಾವೀರ ವೃತದಿಂದ ಶಿವಮೂರ್ತಿ ಸರ್ಕಲ್* ಮಾರ್ಗವಾಗಿ ಉಷಾ ಸರ್ಕಲ್ ವರೆಗೆ,
ಡಿ) *ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ನಿಂದ* ವಿನೋಬನಗರ ಚೌಕಿ ವರೆಗೆ ಮತ್ತು
ಇ) *ಇಮಾನ್ ಬಾಡದಿಂದ ಆರ್.ಎಸ್ ಪಾರ್ಕ್* ಮಾರ್ಗವಾಗಿ ಬೆಕ್ಕಿನಕಲ್ಮಟ್ಟ ಸರ್ಕಲ್ ವರೆ ಭಾರಿ ವಾಹನಗಳ ಸಂಚಾರವನ್ನು *ನಿಷೇಧಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅಧಿಸೂಚನೆ* ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.
2) *ಸಿಟಿ ಬಸ್ ಗಳನ್ನು ಎಲ್ಲೆಂದರಲ್ಲಿ* ನಿಲ್ಲಿಸುತ್ತಿದ್ದು, ಈ ಕುರಿತಂತೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ *ಆಯ್ದ ಬಸ್ ನಿಲ್ದಾಣಗಳನ್ನು* ಗುರುತಿಸಲಾಗಿದ್ದು ಅಧಿಸೂಚನೆಯನ್ನು ಹೊರಡಿಸಲಾಗುವುದು, ಆನಂತರ ಸಿಟಿ ಬಸ್ ಗಳನ್ನು ಗುರುತಿಸಿದ ನಿಲ್ದಾಣಗಳಲ್ಲದೆ ಬೇರೆ ಕಡೆಗಳಲ್ಲಿ ನಿಲ್ಲಿಸಿದ್ದಲ್ಲಿ *ಅಂತಹ ಸಿಟಿ ಬಸ್ ಚಾಲಕ / ಮಾಲೀಕರ ವಿರುದ್ಧ ಕ್ರಮ* ಕೈಗೊಳ್ಳಲಾಗುವುದು.
ಈ ಸಂದರ್ಭದಲ್ಲಿ *RTO ಶಿವಮೊಗ್ಗ, DySP ಶಿವಮೊಗ್ಗ ಉಪವಿಭಾಗ, ಸಿಪಿಐ ಮತ್ತು ಪಿಎಸ್ಐ* ರವರು ಹಾಜರಿದ್ದರು.
Leave a Comment