ಗೋಪಾಲಗೌಡ ಬಡಾವಣೆಯ ನಿವಾಸಿ ಸಾಪ್ಟ್ ವೇರ್ ಇಂಜಿನಿಯರ್ ಗಿರೀಶ್ ಬಿ.ಬಿ. ನಿಧನ: ಗಲಾಟೆ-ಗದ್ದಲ ಅಂತ್ಯಕ್ರಿಯೆ ಮಾಡಲು ಪೊಲೀಸರು ಎಂಟ್ರಿ

ಶಿವಮೊಗ್ಗ: ಬೆಂಗಳೂರಿನಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದ ಗಿರೀಶ್ ಬಿ.ಬಿ. (34)ಇವರು ಡಿ.23 ರಂದು ರಾತ್ರಿ 7 ಗಂಟೆ ಸಮಯದಲ್ಲಿ ಹೃದಾಯಘಾತದಿಂದ ತಮ್ಮ ರೂಮ್ ನಲ್ಲಿ ನಿಧನವಾಗಿದ್ದಾರೆ.ಮೃತರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಶಿವಮೊಗ್ಗ ಕ್ಕೆ  ಡಿ.24 ರಂದು ರಾತ್ರಿ ಸುಮಾರು 7 ಗಂಟೆಗೆ ಅಂಬುಲೆನ್ಸ್ ನಲ್ಲಿ ತರಲಾಯಿತು.ಮೃತರಿಗೆ ಶೃತಿ ಎಂಬುವವರ ಜೋತೆ  4 ವರ್ಷದ ಹಿಂದೇ ಮದುವೆಯಾಗಿದ್ದು, ಶೃತಿ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯವರು ಆಗಿದ್ದು ಎರಡು ವರ್ಷ ಗಂಡನ ಜೊತೆಯಲ್ಲಿ ಬೆಂಗಳೂರಿನಲ್ಲಿ ವಾಸವಾಗಿ ಚೆನ್ನಾಗಿದ್ದು, ಗಿರೀಶ್ ರವರು ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದಾಗ ಹೆಂಡತಿಯನ್ನು ಶಿವಮೊಗ್ಗಕ್ಕೆ ಕರೆತಂದು ಬಿಟ್ಟು ಹೋಗಿರುತ್ತಾರೆ.ನಂತರ ಮೃತರ ಹೆಂಡತಿ ಅತ್ತೆ ಮಾವನ ಜೊತೆಯಲ್ಲಿ ಶಿವಮೊಗ್ಗ ದಲ್ಲಿ ವಾಸ ಇರುವಾಗ ಶೃತಿಗೆ ಮನೆಯಲ್ಲಿ ಹೊಂದಾಣಿಕೆ ಆಗದ ಕಾರಣ ಅತ್ತೆ ಮಾವನ ಜೊತೆ ಆಗಿಂದಾಗ್ಗೆ ಮನೆಯಲ್ಲಿ ಗಲಾಟೆ ಗದ್ದಲ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಆಗಿ ಕೇಸ್ ಕೂಡ ಕೊರ್ಟ್ ನಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಅದೇರೀತಿ ಈ ಹಿಂದೇ ಮೃತರ ತಂದೆ ಜೊತೆಯಲ್ಲಿ ಸಹ ಶೃತಿ ಕಡೆಯವರು ಮನೆಯ ಹತ್ತಿರ ಬಂದು ಜಗಳವಾಡಿ ಹೊಡೆದಾಟದ ಬಗ್ಗೆ ಕೇಸ್ ಕೂಡ ಆಗಿದೆ ಎಂದು ಹೇಳಲಾಗುತ್ತಿದೆ.

ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದ ಗಿರೀಶ್ ಬಿ.ಬಿ ರವರ ತಂದೆ ತಾಯಿ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್‌ನಲ್ಲಿ ವಾಸವಾಗಿದ್ದಾರೆ. ಮೃತರ ತಂದೆ ಬಸವನಗೌಡ ರವರು ಜಿ.ಪಂ ನಲ್ಲಿ ಕಾರ್ಯನಿವರ್ಹಿಸುತ್ತಿದ್ದು ನಿವೃತ್ತಿಯಾಗಿರುತ್ತಾರೆ.ಇವರು ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಸಮಯದಲ್ಲಿ ಮತ್ತೋಂದು ಘಟನೆ ನಡೆಯಿತು.

ಡಿ.24 ರಂದು ರಾತ್ರಿ 7 ಗಂಟೆಗೆ  ಸ್ವಗೃಹಕ್ಕೆ ಮೃತರ ಪಾರ್ಥಿವ ಶರೀರವನ್ನು ತಂದ ತಕ್ಷಣ ಮೃತರ ಹೆಂಡತಿ ಶೃತಿಯ ಸಂಬಂದಿಕರು ದೇವರ ಹಳ್ಳಿ ಯವರು ಸುಮಾರು 50 ಜನ ಮೃತರ ಸ್ವ ಗೃಹಕ್ಕೆ ಬಂದು  ಶವವನ್ನು ಸಾಗಿಸಲು ಶವಸಂಸ್ಕಾರ ಮಾಡಲು ಬಿಡುವುದಿಲ್ಲವೆಂದು ಮದುವೆಯ ಸಮಯದಲ್ಲಿ ನಾವು ವರದಕ್ಷಿಣೆ ಯಾಗಿ ಬಂಗಾರ ಹಣ ಕೊಟ್ಟಿದ್ದೆವೆ ಅದನ್ನು ಕೂಡಲೇ ಸ್ಥಳದಲ್ಲಿ ಕೊಡಬೇಕು ಎಂದು ಮೃತರ ತಂದೆ ತಾಯಿ ಸಂಬಂದಿಕರ ಜೊತೆಯಲ್ಲಿ ಗಲಾಟೆ ಮಾಡಿದರು. 

ಶವ ಇರುವಾಗ ಶೃತಿಯವರ ಕಡೆಯವರು ಬಂದು ಗಲಾಟೆ ಮಾಡಿದ ವರ್ತನೆಗೆ ಸ್ಥಳಿಯರು ಬೇಸರ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂದಿತು. ಶವಸಂಸ್ಕಾರ ಅಂತ್ಯಕ್ರಿಯೆ ಆದ ನಂತರ ಮಾರನೇ ದಿವಸ ಕೂತು ಮಾತನಾಡ ಬಹುದಿತ್ತು ಎಂಬುದು ಮೃತ ಗಿರೀಶನ ಕಡೆಯವರ ಮಾತಾಗಿತ್ತು.ಆದರೂ ಶೃತಿ ಅವರ ಕಡೆಯವರು  ಶವ ಸಾಗಿಸಲು ಬಿಡಲಿಲ್ಲ.

ಆಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ತುಂಗಾನಗರ ಪೊಲೀಸರು ಮತ್ತು ಸಬ್ ಇನ್ಸ್ಪೆಕ್ಟರ್ ದೂದ್ಯಾನಾಯ್ಕ ರವರು   ಸ್ಥಳಕ್ಕೆ ಆಗಮಿಸಿ ಎರಡು ಕಡೆಯವರಿಗೆ ಸಮಧಾನ ಪಡಿಸಿ ಠಾಣೆಗೆ ಬರುವಂತೆ ಹೇಳಿ ಅಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ನಂತರ ತುಂಗಾನಗರ ಪೋಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ದೂದ್ಯಾನಾಯ್ಕ ರವರು ಮೃತರ ಹೆಂಡತಿ ಶೃತಿ ಕಡೆಯವರಿಗೆ ತಿಳುವಳಿಕೆ ಹೇಳಿ ಜನವರಿ 2 ನೇ ತಾರೀಖು ಠಾಣೆಗೆ ಬನ್ನಿ, ಮೊದಲು ಶವ ಸಂಸ್ಕಾರ ಮಾಡಲು ಬಿಡಿ ನಂತರ ತಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದ ಮೇರೆಗೆ ರಾತ್ರಿ 11 ಗಂಟೆಯ ನಂತರ ಮೃತ ಗಿರೀಶ್ ರವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆದಿದೆ ಎಂದು ತಿಳಿದುಬಂದಿದೆ.

ಈ ರೀತಿಯ ಘಟನೆಗಳು ಮರುಕಳುಹಿಸದಿರಲಿ ಎಂಬುದು ಸ್ಥಳೀಯರ ಅಳಲು ಆಗಿರುತ್ತದೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಮೃತರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವ...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.