ಪದ್ಮಶ್ರೀ ಪುರಸ್ಕೃತ, ಸಾಮ್ರಾಟ ಹೊಸಹಳ್ಳಿ ಹೆಚ್.ಆರ್.ಕೇಶವಮೂರ್ತಿ ಇನ್ನಿಲ್ಲ

ಶಿವಮೊಗ್ಗ:ಪದ್ಮಶ್ರೀ ಪುರಸ್ಕೃತ, ಗಮಕ ಗಾನ ಗಂಧರ್ವ, ಗಮಕ ಸಾಮ್ರಾಟ ಹೊಸಹಳ್ಳಿ  ಹೆಚ್.ಆರ್.ಕೇಶವಮೂರ್ತಿ( 88 )ಅವರು ಬುಧವಾರ ಮಧ್ಯಾಹ್ನ ವಿವಶರಾಗಿದ್ದಾರೆ. ಆರೋಗ್ಯವಂತರಾಗಿ ಚಟುವಟಿಕೆ ಯಿಂದಲೇ ಇದ್ದ ಅವರು ಮಧ್ಯಾಹ್ನ ಊಟ ಮುಗಿಸಿ ವಿಶ್ರಾಂತಿಗೆ ಹೋಗುವಾಗ ಹಠಾತ್ ಹೃದಯಘಾತವಾಗಿ ಕುಸಿದು ಬಿದ್ದಿದ್ದ ಅವರು ನಿಧನರಾಗಿದ್ದಾರೆ.

ಗುರುವಾರ ಬೆಳಗ್ಗೆ 10 ಗಂಟೆವರೆಗೆ ಮೃತರ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಹೊಸಹಳ್ಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.   ಇಂದು ನಿಧನರಾದರು.
ಮೃತ ಹೆಚ್.ಆರ್.ಕೇಶವಮೂರ್ತಿ ಅವರು ಗಮಕ ಕಲೆಯಲ್ಲಿ 70 ವರ್ಷಗಳ ಕಾಲ ಅಗಾದ ಸಾಧನೆ ಮಾಡಿದವರು.  ಗಮಕ ಕಲೆಗೊಂದು ಗತ್ತು-ಗೈರತ್ತು ತಂದುಕೊಟ್ಟವರು. ರಾಯಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡವರು. 100 ಕ್ಕೂ ಹೆಚ್ಚು ವಿಭಿನ್ನ ರಾಗಗಗಳಲ್ಲಿ ವಾಚನ ಮಾಡುವ ಮೂಲಕ ‘ಶತಕರಾಗಿ’ ಎಂಬ ಬಿರುದಿಗೆ ಇವರು ಪಾತ್ರರಾದವರು.  

ರಾಜ್ಯ ಹಾಗೂ ದೇಶದ ಹಲವಡೆ ನಡೆದ ಸಂಗೀತ ಕಾರ್ಯಕ್ರಮ ನಡೆಸಿ  ಗಮಕ ವಾಚನದ ಮೂಲಕ ಗಮನ ಸೆಳೆದಿರುವ ಕೇಶವಮೂರ್ತಿ ಸಾಧನೆಗೆ ಪದ್ಮಶ್ರೀ, ಕುಮಾರವ್ಯಾಾಸ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಗಮಕ ಕಲೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕೇಶವ ಮೂರ್ತಿಯವರ  ನಿಧನದಿಂದ ಸಾಂಸ್ಕೃತಿಕ ಲೋಕ ಬಡವಾಗಿದೆ. 

ಗಮಕ ಕಲೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಮತ್ತು ಆ ಕಲೆಯನ್ನು ಮತ್ತೂರು ಕೃಷ್ಣಮೂರ್ತಿ ಅವರೊಂದಿಗೆ ಸೇರಿ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಕೇಶವಮೂರ್ತಿ ಅವರದಾಗಿತ್ತು. ಹೊಸಹಳ್ಳಿಯಲ್ಲಿಯೇ ಹುಟ್ಟಿ ಬೆಳೆದಿದ್ದ ಅವರು ಗಮಕ ಕಲೆಯ ಮೂಲಕ ದೇಶಮಟ್ಟದಲ್ಲಿ ಹೆಸರು ಮಾಡಿದ್ದರು. ಇತ್ತೀಚೆಗಷ್ಟೆ ಹೊಸಹಳ್ಳಿ ಗ್ರಾಮಸ್ಥರು ಅವರಿಗೆ ನಾಗರೀಕ ಸನ್ಮಾನ ಮಾಡಿ ಗೌರವಿಸಿತ್ತು.  ಕಳೆದ ಮಾರ್ಚ್ ತಿಂಗಳಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು

ಮೃತರು ಪತ್ನಿ ರಾಜೇಶ್ವರಿ ಮತ್ತು ಮಗಳ ಉಷಾ ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
 
ಮೃತರ ನಿಧನಕ್ಕೆ ಹಲವು ಗಣ್ಯರು, ಪತ್ರಕರ್ತರು ತೀವ್ರ ಸಂತಾಪ ಸೂಚಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗೂ ಗಮಕ ಕಲೆಯ ಘಮವನ್ನು ಬೀರಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹೊಸಹಳ್ಳಿಯ ಹೆಚ್.ಆರ್.ಕೇಶವಮೂರ್ತಿ ಬುಧವಾರ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದು, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೀ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು  ಭಗವಂತ ನೀಡಲೀ ಎಂದು ಪ್ರಾರ್ಥಿಸಿದ್ದಾರೆ.

*ಪದ್ಮಶ್ರೀ ಪುರಸ್ಕೃತ ಶ್ರೀ ಗಮಕ ಕೇಶವಮೂರ್ತಿಯವರ ನಿಧನಕ್ಕೆ ಸಚಿವ ಡಾ.ನಾರಾಯಣಗೌಡ ಕಂಬನಿ* .
ಬೆಳಗಾವಿ: ಖ್ಯಾತ ಗಮಕ ಕಲಾವಿದರು, ಪದ್ಮಶ್ರೀ ಪುರಸ್ಕೃತರಾದ ಶಿವಮೊಗ್ಗ ಹೊಸಹಳ್ಳಿ ಕೇಶವಮೂರ್ತಿಯವರ ನಿಧನಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಕಂಬನಿ ಮಿಡಿದಿದ್ದಾರೆ. 

ಗಮಕವನ್ನೇ ಉಸಿರಾಗಿಸಿಕೊಂಡಿದ್ದ ಶ್ರೀ ಕೇಶವಮೂರ್ತಿಯವರು, ಗಮಕ ಕಲಾ ಪ್ರಪಂಚಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಮಹಾನ್ ಕಲಾವಿದರನ್ನು ಕಳೆದುಕೊಂಡು ಕಲಾ ಪ್ರಪಂಚ ಬಡವಾಗಿದೆ. 

ಶ್ರೀ ಕೇಶವಮೂರ್ತಿ ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ, ಅಪರ ಪ್ರಮಾಣದ ಶಿಷ್ಯಂದಿರು, ಬಂಧುಗಳಿಗೆ ಶ್ರೀಯುತರ ಅಗಲಿಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪಾರ್ಥಿಸುವುದಾಗಿ ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

*ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದನ್ನು ಸ್ಮರಿಸಿದ ಸಚಿವ ಡಾ.ನಾರಾಯಣಗೌಡರು*

ಗಮಕ‌ ಕೇಶವಮೂರ್ತಿಯವರಿಗೆ  ಪದ್ಮಶ್ರೀ ಸಂದ ಸಂದರ್ಭದಲ್ಲಿ ಸನ್ಮಾನಿಸಿದ್ದ ಕ್ಷಣವನ್ನು ಸಚಿವ ಡಾ.ನಾರಾಯಣಗೌಡ ಅವರು ಸ್ಮರಿಸಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಬಂದ ಸಂದರ್ಭದಲ್ಲಿ ಗಮಕ ಕೇಶವಮೂರ್ತಿಯವರ ಹೊಸಹಳ್ಳಿ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಲಾಗಿತ್ತು.  ಈ ವೇಳೆ ಆತ್ಮೀಯತೆಯಿಂದ ಮಾತನಾಡಿಸಿದ್ದ ಶ್ರೀಯುತರು, ಅವರ ಕುಟುಂಬ ಹಾಗೂ ಕೆಆರ್ ಪೇಟೆ ನಡುವಿನ ಒಡನಾಟದ ಬಗ್ಗೆ ಮೆಲುಕು ಹಾಕಿದ್ದರು. ಇದೇ ವೇಳೆ ಅವರ ಗಮಕದ ಚಮತ್ಕಾರವನ್ನೂ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ್ದನ್ನು ಸಚಿವ ಡಾ.ನಾರಾಯಣಗೌಡ ಅವರು ಸ್ಮರಿಸಿಕೊಂಡಿದ್ದಾರೆ.
 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.