ಡಿ.31 ರಂದು ಆಲ್ಕೋಳ ಕೆರೆಯ ಕಲ್ಯಾಣಿ ಲೋಕಾರ್ಪಣೆ ಮತ್ತು ಸ್ನೇಹಕೂಟ ಸಮಾರಂಭ
ಶಿವಮೊಗ್ಗ: ಪ್ರಿಯದರ್ಶಿನಿ ಬಡಾವಣೆಯಲ್ಲಿ ಪುರಾತನವಾದ ಆಲ್ಕೊಳ ಕೆರೆ ನವೀಕರಣವಾಗಿದ್ದು, ಅಲಯೇ ಒಂದು ಕಲ್ಯಾಣಿಯನ್ನು ನಿರ್ಮಿಸಿದ್ದು, ಅದರ ಲೋಕಾರ್ಪಣೆ ಯನ್ನು ಡಿ.31 ರಂದು ಬೆಳಿಗ್ಗೆ 11 ಗಂಟೆಗೆ ಶಾಸಕ ಕೆ.ಎಸ್.ಈಶ್ವರಪ್ಪರವರು ನೇರವೇರಿಸಲಿದ್ದಾರೆ ಎಂದು ಪ್ರಿಯದರ್ಶಿನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಎಸ್.ಗುರುರಾಜ್ ಹೇಳಿದರು.
ಇಂದು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ಸೂಡಾದವರು ಕೆರೆಯ ಅಭಿವೃದ್ಧಿ ಕಾರ್ಯವನ್ನು ನಡೆಸಿಕೊಟ್ಟಿದ್ದು, ಈ ತರಹದ ಕೆರೆ ಕಲ್ಯಾಣಿ ನಿರ್ಮಾಣ ಶಿವಮೊಗ್ಗದಲ್ಲಿ ಪ್ರಥಮವಾಗಿರುತ್ತದೆ ಎಂದರು.
ಪ್ರಿಯದರ್ಶಿನಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ 5 ವರ್ಷದ ಅವಿರತ ಪ್ರಯತ್ನದ ಫಲ ಇದಾಗಿದ್ದು, ಸಂಘವು ಡಿ.31 ರಂದು 26 ನೇ ವರ್ಷದ ಸ್ನೇಹಕೂಟ ಸಮಾರಂಭ ವನ್ನು ಆಚರಿಸಲಾಗುತ್ತಿದೆ. ಇದೋಂದು ವಿಶಿಷ್ಟ ಕಾರ್ಯಕ್ರಮವಾಗಿದೆ .ಬಡಾವಣೆಯಲ್ಲಿ 250 ಕ್ಕೂ ಹೆಚ್ಚು ಮರಗಿಡಗಳನ್ನು ಬಡಾವಣೆಯಲ್ಲಿ ಬೆಳೆಸಲಾಗಿದೆ, ಇದೋಂದು ಮಾದರಿ ಬಡಾವಣೆಯಾಗಿದೆ ಎಂದರು.
ಪಾರಂಪರಿಕ ಆಟಗಳಾದ ಕವಡೆ, ಚಿನ್ನದಾಂಡು,ಪಗಡೆ ಇತರೆ ಆಟಗಳನ್ನು ಆಡಿಸಲಾಗುವುದು. ಅದತ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ ಎಂದರು.
ಸುದ್ದಿಗೋಷ್ಟಿ ಯಲ್ಲಿ ಕಾರ್ಯದರ್ಶಿ ಡಾ.ಎಸ್.ಜಿ.ಸಾಮಕ್,ಸಹಕಾರ್ಯದರ್ಶಿ ಶುಭಾಚಿದಾನಂದ್,ಉಪಾಧ್ಯಕ್ಷ. ಟಿಎಸ್.ಮಹಾದೇವ ಸ್ವಾಮಿ,ಖಜಾಂಚಿ ಉಮೇಶ್ ಹೆಗ್ಡೆ,, ಕೆ.ಪಿ.ಶೆಟ್ಟಿ,, ರಸ್.ಟಿ.ಹಾಲಪ್ಪ,ಸುಭಾಶ್ನಾಯಕ್,ನಾಗೇಶ್ ಭಟ್ ಹಾಜರಿದ್ದರು.,
Leave a Comment