ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಡಿ.29,30,31 ರಂದು ಮೂರು ದಿನ ಡಿವಿಎಸ್ ಸಂಸ್ಥೆ ಯಲ್ಲಿ ವಸ್ತು ಪ್ರದರ್ಶನ

ಶಿವಮೊಗ್ಗ: ದೇಶಿಯ ವಿದ್ಯಾಶಾಲಾ ಸಮಿತಿ ಶಿವಮೊಗ್ಗ ಈ ಸಂಸ್ಥೆಯ ಅಂಗ ಸಂಸ್ಥೆಯ 50 ವರ್ಷದ  ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ   ಡಿವಿಎಸ್ ಆವಿಷ್ಕಾರ ಜ್ಞಾನ - ವಿಜ್ಞಾನ- ವಿಕಾಸ-ವೀಕ್ಷಣೆ ವಸ್ತು ಪ್ರದರ್ಶನ ಡಿ.29,30,31 ರಂದು ರಂದು ಮೂರು ದಿನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಎನ್.ರುದ್ರಪ್ಪ ಕೊಳಲೆ ಮತ್ತು ಎಸ್.ರಾಜಶೇಖರ್,ಕಾರ್ಯದರ್ಶಿ ಹೇಳಿದರು.

ಇಂದು ಡಿವಿಎಸ್ ಸಂಸ್ಥೆಯಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಈ ವಸ್ತು ಪ್ರದರ್ಶನ ದಲ್ಲಿ ಕಾಲೇಜಿನ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು 15 ವಿಷಯಗಳಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ಮತ್ತು ಬಾಷಾ ವಿಷಯಗಳಲ್ಲಿ ಭಾಗವಹಿಸಲು ಅತ್ಯಂತ ಉತ್ಸುಕರಾಗಿ ಸುಮಾರು 275 ಮಾಡೆಲ್ ಗಳನ್ನು ತಯಾರಿಸಿ ಪ್ರದರ್ಶಿಸಲು ಸಿದ್ದರಾಗಿದ್ದಾರೆ. ಎಸ್.ಎಸ್.ಎಲ್.ಸಿ,ಪಿಯುಸಿ,ಮತ್ತು ಪ್ರಥಮ ಪದವಿ ಪಠ್ಯಕ್ಕೆ ಸಂಬಂದಿಸಿದ ವಿಷಯಗಳಲ್ಲಿ ಮಾದರಿಗಳನ್ನು ರಚಿಸಲು ಪ್ರಾಮುಖ್ಯತೆ ನೀಡಲಾಗಿದೆ ಎಂದರು.

 ಈ ಮೂಲಕ ಹೊಸ ಶಿಕ್ಷಣ ನೀತಿ ಜಾರಿಗೆ ಮಾನಸಿಕವಾಗಿ ವಿದ್ಯಾರ್ಥಿಗಳನ್ನು ಸಿದ್ದಗೋಳಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ವಸ್ತು ಪ್ರದರ್ಶನವನ್ನು ಆಕರ್ಷಿಣೀಯವಾಗಿಸಲು ಬೆಂಗಳೂರು ಮತ್ತು ಶಿವಮೊಗ್ಗದಲ್ಲಿನ ಪ್ತಮುಖವಾದ ಹತ್ತಾರು ಇಲಾಖೆಗಳು ಪಾಲ್ಗೊಳ್ಳಲು ಹಾಗೂ ಹಲವು ಮಹನೀಯರುಗಳನ್ನ  ಅಹ್ವಾನಿಸಿದ್ದೆವೆ ಎಂದರು.

ಮುಖ್ಯವಾಗಿ 10 ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರೋಂಧಿಗೆ ಈ ವಸ್ತು ಪ್ರದರ್ಶನವನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದರು.

ಡಿ.29 ರಂದು ಬೆಳಿಗ್ಗೆ  ಕಾಲೇಜು ಆವರಣದಲ್ಲಿ ವಸ್ತುಪ್ರದರ್ಶನವನ್ನು ಕು.ಆಶಾಭಟ್ ಚಲನಚಿತ್ರ ನಟಿ, ಭದ್ರಾವತಿ ಇವರು ಉದ್ಘಾಟನೆ ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಕೃಷ್ನಪ್ಪ .ಬಿ ಉಪನಿರ್ಧೆಶಕರು ಆಗಮಿಸಲಿದ್ದಾರೆ.ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಮತ್ತು ನಿರ್ದೇಶಕರು ಉಪಸ್ಥಿತರಿರುತ್ತಾರೆ ಎಂದರು.

ಡಿ.30 ರಂದು ಬೆಳಿಗ್ಗೆ ಕಾಲೇಜು ಆವರಣದಲ್ಲಿ ವಿಜ್ಞಾನ ಗೋಷ್ಟಿ ಕಾರ್ಯಕ್ರಮವನ್ನು ಪ್ರಾಥಮಿಕ ಶಿಕ್ಷಣ ನಿರ್ದೇಶಕ ರಾದ ಪ್ರಸನ್ನ ಕುಮಾರ್ ಎಂ.ಎಸ್. ಉದ್ಘಾಟಿಸಲಿದ್ದಾರೆ ಎಂದರು.

ಡಿ.31 ರಂದು ಸಮಾರೋಪ ಸಮಾರಂಭ ನಡೆಯಲಿದೆ ಮುಖ್ಯ ಅತಿಥಿಗಳಾಗಿ ಗಿರೀಶ್ ಬಿ ಕಡ್ಲೆವಾಡ್  ವಿಜ್ಞಾನ ಪರಿಷತ್ತು ಬೆಂಗಳೂರು ಇವರು ಆಗಮಿಸಲಿದ್ದಾರೆ  ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೋಪಿನಾಥ್ .ಬಿ,ಖಜಾಂಚಿ, ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಸಹ ಕಾರ್ಯದರ್ಶಿ, ಜಿ.ಮಧುಸೂದನ್,ಎಂ.ರಾಜು,ನಿರ್ಧೆಶಕರು,ಹೆಚಗ.ಸಿ.ಉಮೇಶ್,ಎ.ಈ.ರಾಜಶೇಖರ್,ಪ್ರಾಂಶುಪಾಲರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.