ದೇಶ ಪ್ರೇಮ ಬೆಳೆಸುವ ಉದ್ಧೇಶದಿಂದ *SPC - Student Police Cadet (ಸ್ಟೂಡೆಂಟ್ ಪೊಲೀಸ್ ಕೆಡೆಟ್)* ಯೋಜನೆ ಪೊಲೀಸ್ ಇಲಾಖಾ ವತಿಯಿಂದ ಅನುಷ್ಠಾನ

ಶಿವಮೊಗ್ಗ:  *ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹೋಯೋಗದಲ್ಲಿ* ಪ್ರೌಡ ಶಾಲಾ ವಿಧ್ಯಾರ್ಥಿಗಳಲ್ಲಿ ದೈಹಿಕ ಸದೃಡತೆ ಮತ್ತು ಮಾನಸಿಕ ಅಭಿವೃದ್ಧಿ, ಶಿಸ್ತು, ನಾಯಕತ್ವ ಗುಣ, ಕಾನೂನಿನ ಬಗ್ಗೆ ಗೌರವ, ಸಮಾಜದ ಬಗ್ಗೆ ಕಾಳಜಿ, ಒಳ್ಳೆಯ ನಡೆತೆ, ದೇಶ ಪ್ರೇಮ ಬೆಳೆಸುವ  ಉದ್ಧೇಶದಿಂದ *SPC - Student Police Cadet (ಸ್ಟೂಡೆಂಟ್ ಪೊಲೀಸ್ ಕೆಡೆಟ್)* ಯೋಜನೆಯನ್ನು ಪೊಲೀಸ್ ಇಲಾಖಾ ವತಿಯಿಂದ ಅನುಷ್ಠಾನ ಮಾಡಲಾಗುತ್ತಿದೆ.
 ಈ ಯೋಜನೆಯ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ *ಆಯ್ದ 25  ಶಾಲೆಗಳಲ್ಲಿ ಹೊರಾಂಗಣ ಮತ್ತು ಒಳಾಂಗಣ ವಿಷಯಗಳ* ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದ್ದು, ವಿಧ್ಯಾರ್ಥಿಗಳಲ್ಲಿ ಮಾನಸಿಕ ಮತ್ತು ದೈಹಿಕ ಸದೃಡತೆಯನ್ನು ಬೆಳೆಸುವ ಸಲುವಾಗಿ ನುರಿತ ತರಬೇತುದಾರರಿಂದ ಹೊರಾಂಗಣ ವಿಷಯವಾದ *UAC - Unarmed Combat (ಶಸ್ತ್ರ ರಹಿತ ಹೋರಾಟ)* ತರಬೇತಿಯನ್ನು ನೀಡಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.